ನವದೆಹಲಿ : ಮಾರ್ಚ್ 31 ರಂದು ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಆಮ್ ಅದ್ಮಿ ಪಂಜಾಬ್‍ನಿಂದ ಐದು ಮಂದಿ ಅಭ್ಯರ್ಥಿಗಳನ್ನು ನಾಮ ನಿರ್ದೇಶನ ಮಾಡಿದ್ದು ಇದರಲ್ಲಿ ಮಾಜಿ ಕ್ರಿಕೆಟಿಗ ಹರ್ಭಜನ್‍ಸಿಂಗ್ ಕೂಡಾ ಒಳಗೊಂಡಿದ್ದಾರೆ.
Advertisement
ಹರ್ಭಜನ್ ಸಿಂಗ್ ಜೊತೆಗೆ ದೆಹಲಿಯ ಆಪ್ ಶಾಸಕ ರಾಘವ್ ಚಡ್ಡಾ, ಸಂದೀಪ್ ಪಾಟಕ್, ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ ಕುಲಪತಿ ಅಶೋಕ್ ಮಿತ್ತಲ್ ಹಾಗೂ ಕೃಷ್ಣ ಪ್ರಾಣ್ ಸ್ತನ ಕ್ಯಾನ್ಸರ್ ಕೇರ್ ಚಾರಿಟೇಬಲ್ ಟ್ರಸ್ಟ್‌ನ ಸಂಸ್ಥಾಪಕ ಸಂಜೀವ್ ಅರೋರಾ ಅವರನ್ನು ಪಂಜಾಬ್‍ನಿಂದ ರಾಜ್ಯಸಭೆಗೆ ನಾಮನಿರ್ದೇಶನ ಮಾಡಲಾಗಿದೆ. ಇದನ್ನೂ ಓದಿ: ಉಕ್ರೇನ್‍ನಿಂದ 22,500 ವಿದ್ಯಾರ್ಥಿಗಳು ವಾಪಸ್- ಆಪರೇಷನ್ ಗಂಗಾ ಪೂರ್ಣ
Advertisement
Chandigarh | Academician Dr Sandeep Pathak and AAP Delhi MLA Raghav Chadha file their nominations for Rajya Sabha from Punjab. pic.twitter.com/ZCuyrRi7H7
— ANI (@ANI) March 21, 2022
Advertisement
ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ 117 ಸ್ಥಾನಗಳ ಪೈಕಿ 92 ಸ್ಥಾನಗಳಲ್ಲಿ ಆಮ್ ಅದ್ಮಿ ಗೆಲವು ಸಾಧಿಸಿರುವ ಹಿನ್ನಲೆ ಐದು ಮಂದಿ ನಾಮನಿರ್ದೇಶಿತ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಇದರಿಂದ ರಾಜ್ಯಸಭೆಯಲ್ಲಿ ಆಪ್ ಸಂಖ್ಯೆ 3 ರಿಂದ 8ಕ್ಕೆ ಏರಿಕೆಯಾಗಲಿದೆ. ಇದನ್ನೂ ಓದಿ: ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದ ಹಿರಿಯ ನಟಿ ಲೀಲಾವತಿ
Advertisement
ಹರ್ಭಜನ್ ಸಿಂಗ್ ಆಯ್ಕೆ ಹಿಂದೆ ಹಲವು ಲೆಕ್ಕಾಚಾರಗಳನ್ನು ಆಮ್ ಅದ್ಮಿ ಹಾಕಿಕೊಂಡಿದೆ. ಮುಖ್ಯಮಂತ್ರಿ ಭಗವಂತ್ ಮಾನ್ ಜೊತೆಗೆ ಉತ್ತಮ ಸಂಬಂಧ ಹೊಂದಿರುವ ಹರ್ಭಜನ್ ಸಿಂಗ್ ಪಂಜಾಬ್‍ನಲ್ಲಿ ಸ್ಪೋರ್ಟ್ಸ್ ಐಕಾನ್ ಆಗಲಿದ್ದಾರೆ. ಈ ಮೂಲಕ ಪಂಜಾಬ್‍ನಲ್ಲಿ ಕ್ರೀಡೆಗಳಿಗೆ ಹೆಚ್ಚು ಆದ್ಯತೆ ನೀಡುವುದು ಮತ್ತು ಯುವಕರನ್ನು ಪಕ್ಷದತ್ತ ಸೆಳೆಯುವ ಲೆಕ್ಕಾಚಾರ ಹೊಂದಲಾಗಿದೆ ಎಂದು ವಿಶ್ಲೇಷಿಸಲಾಗಿದೆ.