ಮೇಯರ್‌ ಚುನಾವಣೆಯಲ್ಲಿ ಸೋಲು- ಗಳಗಳನೇ ಕಣ್ಣೀರಿಟ್ಟ ಎಎಪಿ ಅಭ್ಯರ್ಥಿ

Public TV
1 Min Read
KULDEEP KUMAR BREAKS DOWN

– ಸಮಾಧಾನ ಮಾಡ್ತಿರೋ ಕುಟುಂಬಸ್ಥರ ವೀಡಿಯೋ ವೈರಲ್‌

ಚಂಡೀಗಢ: ಮೇಯರ್ ಚುನಾವಣೆಯ ಫಲಿತಾಂಶದದಲ್ಲಿ ಬಿಜೆಪಿ ವಿರುದ್ಧ ಎಎಪಿ (AAP) ಅಭ್ಯರ್ಥಿ ಕುಲದೀಪ್ ಕುಮಾರ್ (Kuldeep Kumar) ಸೋಲು ಕಂಡಿದ್ದಾರೆ. ಈ ಸೋಲನ್ನು ಅರಗಿಸಿಕೊಳ್ಳಲು  ಆಗದೇ ಕುಲದೀಪ್‌ ಕಣ್ಣೀರು ಹಾಕಿದ್ದಾರೆ.

KULDEEP KUMAR

ಮೇಯರ್‌ ಚುನಾವಣೆಯಲ್ಲಿ ಕುಲದೀಪ್‌ ಅವರು ಬಿಜೆಪಿಯ ಮನೋಜ್ ಸೋಂಕರ್ (Manoj Sonkar) ವಿರುದ್ಧ ಸೋಲು ಕಂಡಿದ್ದಾರೆ. ಸದ್ಯ ಕುಲದೀಪ್‌ ಅವರು ಕಣ್ಣೀರು ಹಾಕಿದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ವೀಡಿಯೋದಲ್ಲೇನಿದೆ..?: ಚುನಾವಣೆಯಲ್ಲಿ ಸೋತ ಬೆನ್ನಲ್ಲೇ ಕುಲದೀಪ್‌ ಅವರು ಗಳಗಳನೇ ಅತ್ತಿದ್ದಾರೆ. ಈ ವೇಳೆ ಕುಟುಂಬಸ್ಥರು ಬಂದು ಅವರನ್ನು ಸಮಾಧಾನ ಪಡಿಸಿದ್ದಾರೆ. ಜೊತೆಗೆ ಹಲವರು ಅವರಿಗೆ ಸಮಾಧಾನ ಮಾಡುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನೂ ಓದಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಮಲೋತ್ಪತ್ತಿ – I.N.D.I.A ಒಕ್ಕೂಟಕ್ಕೆ ಭಾರೀ ಮುಖಭಂಗ

ಈ ಚುನಾವಣೆಯಲ್ಲಿ ಎಎಪಿ ಮತ್ತು ಕಾಂಗ್ರೆಸ್ (Congress) ಕೇವಲ 12 ಮತಗಳನ್ನು ಪಡೆದುಕೊಂಡರೆ, ಬಿಜೆಪಿ (BJP) 16 ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಮೊದಲ ಪರೀಕ್ಷೆಯಲ್ಲಿಯೇ ವಿಫಲವಾದ ಕಾರಣ ಬಿಜೆಪಿ ಪಕ್ಷವು ಕೇಂದ್ರಾಡಳಿತ ಪ್ರದೇಶದಲ್ಲಿ ಎಎಪಿ ಮತ್ತು ಕಾಂಗ್ರೆಸ್‌ಗೆ ಗಂಭೀರ ಹೊಡೆತವನ್ನು ನೀಡಿದೆ.

Chandigarh Mayor Elections

ಪಂಜಾಬ್ ಮತ್ತು ಹರಿಯಾಣ ಹೈಕೋರ್ಟಿನ ನಿರ್ದೇಶನದ ಮೇರೆಗೆ ಈ ಚುನಾವಣೆ ನಡೆದಿದೆ. ಕಳೆದ ಎಂಟು ವರ್ಷಗಳಿಂದ ಮೇಯರ್ ಹುದ್ದೆಯನ್ನು ಹೊಂದಿರುವ ಬಿಜೆಪಿ ವಿರುದ್ಧ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರತಿಪಕ್ಷ INDIA ಬ್ಲಾಕ್ ಸದಸ್ಯರಾದ ಕಾಂಗ್ರೆಸ್ ಮತ್ತು ಎಎಪಿ ಕೈಜೋಡಿಸುವುದರೊಂದಿಗೆ ಮಹತ್ವ ಪಡೆದುಕೊಂಡಿದೆ. ಮೈತ್ರಿಯ ಭಾಗವಾಗಿ, ಎಎಪಿ ಮೇಯರ್ ಸ್ಥಾನಕ್ಕೆ ಸ್ಪರ್ಧಿಸಿದರೆ, ಕಾಂಗ್ರೆಸ್ ಹಿರಿಯ ಉಪಮೇಯರ್ ಮತ್ತು ಉಪಮೇಯರ್ ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತು.

Share This Article