ಚಂಡೀಗಢ: ನಗರಪಾಲಿಕೆ ಚುನಾವಣೆಯಲ್ಲಿ ಆಡಳಿತ ರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿಗಿಂತಲೂ ಅಧಿಕ ಸ್ಥಾನವನ್ನು ಗೆಲ್ಲುವ ಮೂಲಕ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಮುನ್ನಡೆ ಸಾಧಿಸಿದೆ.
Advertisement
ಚಂಡೀಗಢ ನಗರಪಾಲಿಕೆಯ 35 ವಾರ್ಡ್‍ಗಳಿಗೆ ನಡೆದ ಚುನಾವಣೆಯಲ್ಲಿ 14 ಸ್ಥಾನಗಳನ್ನು ಎಎಪಿ, 12 ಬಿಜೆಪಿ, 8 ಕಾಂಗ್ರೆಸ್ ಮತ್ತು 1 ಸ್ಥಾನವನ್ನು ಅಕಾಲಿಕದಳ ಗೆದ್ದುಕೊಂಡಿದೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖಭಂಗವಾದಂತಾಗಿದೆ. ಇದನ್ನೂ ಓದಿ: ಯೋಗಿ ಮತ್ತೆ ಅಧಿಕಾರಕ್ಕೆ ಬಂದರೆ ಅಸಾದುದ್ದೀನ್ ಓವೈಸಿ ಜನಿವಾರ ಧರಿಸುತ್ತಾರೆ – ಯುಪಿ ಸಚಿವ
Advertisement
चंडीगढ़ नगर निगम में आम आदमी पार्टी की ये जीत पंजाब में आने वाले बदलाव का संकेत है।चंडीगढ़ के लोगों ने आज भ्रष्ट राजनीति को नकारते हुए AAP की ईमानदार राजनीति को चुना है।
AAP के सभी विजयी उम्मीदवारों एवं सभी कार्यकर्ताओं को बहुत-बहुत बधाई।
इस बार पंजाब बदलाव के लिए तैयार है।
— Arvind Kejriwal (@ArvindKejriwal) December 27, 2021
Advertisement
ಈ ಬಗ್ಗೆ ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿರುವ ಕೇಜ್ರಿವಾಲ್, ಪಂಜಾಬ್‍ನಲ್ಲಿ ಬದಲಾವಣೆಯ ಗಾಳಿ ಬೀಸಿದೆ. ಜನ ಭ್ರಷ್ಟ ರಾಜಕೀಯ ಪಕ್ಷವನ್ನು ತಿರಸ್ಕರಿಸಿ ಎಎಪಿಗೆ ಮಣೆ ಹಾಕಿದ್ದಾರೆ. ಇದು ಮುಂದಿನ ವಿಧಾನಸಭಾ ಚುನಾವಣೆಗೆ ಮುನ್ಸೂಚನೆ. ಪಂಜಾಬ್ ಬದಲಾವಣೆಗೆ ಸಿದ್ಧಗೊಂಡಿದೆ ಎಂದು ಟ್ವೀಟ್ ಮಾಡಿ ಸಂಭ್ರಮಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗರೇ ಎಚ್ಚರ – ರಾತ್ರಿ ಅನಗತ್ಯ ಓಡಾಡಿದ್ರೆ ಬೀಳುತ್ತೆ ಕೇಸ್
Advertisement
2016ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ 77%, ಕಾಂಗ್ರೆಸ್ 15%, ಅಕಾಲಿಕದಳ 4% ಗೆದ್ದಿತ್ತು. ಆದರೆ ಎಎಪಿ ಒಂದೇ ಒಂದು ಸ್ಥಾನವನ್ನು ಜಯಿಸಿರಲಿಲ್ಲ. ಈ ಬಾರಿ ಎಎಪಿ 40%, ಬಿಜೆಪಿ 34%, ಕಾಂಗ್ರೆಸ್ 23%, ಅಕಾಲಿಕದಳ 3% ಸ್ಥಾನಗಳನ್ನು ಗೆದ್ದಿದೆ. ಈ ಮೂಲಕ ಎಎಪಿ ದೊಡ್ಡ ಮಟ್ಟದ ಯಶಸ್ಸುಗಳಿಸಿದೆ.
ಈ ಚುನಾವಣೆಯ ಫಲಿತಾಂಶವನ್ನು ಗಮನಿಸುತ್ತಿದ್ದಂತೆ 2022ರ ಆರಂಭದಲ್ಲಿ ನಡೆಯಲಿರುವ ಪಂಜಾಬ್ ವಿಧಾನಸಭಾ ಚುನಾವಣೆ ಭಾರೀ ಕುತೂಹಲ ಮೂಡಿಸಿದೆ. ದೆಹಲಿಯಲ್ಲಿ ಉತ್ತಮವಾಗಿ ಅಧಿಕಾರವನ್ನು ನಿರ್ವಹಿಸುತ್ತಿರುವ ಎಎಪಿ ಪಂಜಾಬ್‍ನಲ್ಲಿ ಅಧಿಕಾರಕ್ಕೇರುವ ಹುಮ್ಮಸ್ಸಿನಲ್ಲಿದೆ. ಇದನ್ನೂ ಓದಿ: 15 ರಿಂದ 18 ವರ್ಷದವರು ಜ. 1ರಿಂದ ಕೋವಿನ್‌ನಲ್ಲಿ ಲಸಿಕೆಗೆ ಹೆಸರು ನೋಂದಾಯಿಸಬಹುದು