ನವದೆಹಲಿ: ಮದ್ಯ ಹಗರಣದಲ್ಲಿ (Delhi Excise Policy Case) ಜಾರಿ ನಿರ್ದೇಶನಾಲಯ(ED) ಬಂಧಿತರಾಗಿರುವ ಅರವಿಂದ ಕೇಜ್ರಿವಾಲ್ (Arvind Kejriwal) ಇನ್ನೂ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡದೇ ಇದ್ದರೂ ಜೈಲಿನಿಂದಲೇ (Jail) ಆಡಳಿತ ನಡೆಸಲಿದ್ದಾರೆ ಎಂದು ಆಪ್ (AAP) ಹೇಳಿದೆ.
ಈ ಬಗ್ಗೆ ಆಪ್ ಪಕ್ಷದ ನಾಯಕಿ ಅತಿಶಿ (Atishi) ಪ್ರತಿಕ್ರಿಯಿಸಿ, ಕೇಜ್ರಿವಾಲ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವುದಿಲ್ಲ. ಅವರು ತಮ್ಮ ಖಾತೆಗಳನ್ನು ತ್ಯಜಿಸಲಿದ್ದಾರೆ. ಒಂದು ವೇಳೆ ಅಗತ್ಯಬಿದ್ದರೆ ಜೈಲಿನಿಂದಲೇ ಸರ್ಕಾರ ಚಲಾಯಿಸಲಿದ್ದಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸುರಪುರ ಉಪ ಚುನಾವಣೆ; ದಿವಂಗತ ರಾಜಾ ವೆಂಕಟಪ್ಪ ನಾಯಕ ಪುತ್ರನಿಗೆ ಕಾಂಗ್ರೆಸ್ ಟಿಕೆಟ್
Advertisement
#WATCH | AAP leader Atishi says, "We have received news that ED has arrested Arvind Kejriwal… We have always said that Arvind Kejriwal will run the govt from jail. He will remain the CM of Delhi. We have filed a case in the Supreme Court. Our lawyers are reaching SC. We will… pic.twitter.com/XWQJ1D6ziR
— ANI (@ANI) March 21, 2024
Advertisement
ಜೈಲಿನಿಂದ ಆಡಳಿತ್ಯ ಸಾಧ್ಯವೆ?
ಜೈಲಿನಿಂದ ಸಿಎಂ ಹುದ್ದೆಯನ್ನು ನಿರ್ವಹಿಸುವುದನ್ನು ತಡೆಯಲು ಯಾವುದೇ ಕಾನೂನಿನಲ್ಲ. ಕಾನೂನಿನ ಪ್ರಕಾರ ಸಿಎಂ ಒಬ್ಬರು ಯಾವುದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದರೆ ಮಾತ್ರ ಅಧಿಕಾರ ಕಳೆದುಕೊಳ್ಳುತ್ತಾರೆ. ಇದನ್ನೂ ಓದಿ: Lok Sabha 2024: ಸಚಿವರ ಮಕ್ಕಳು, ಕುಟುಂಬದವರಿಗೆ ‘ಕೈ’ ಟಿಕೆಟ್ – ಯಾರು ಎಲ್ಲಿಂದ ಸ್ಪರ್ಧೆ?
Advertisement
ರಾಜೀನಾಮೆ ನೀಡಿದ್ದ ಮುಖ್ಯಮಂತ್ರಿಗಳು:
ಅಧಿಕಾರದಲ್ಲಿ ಇರುವಾಗಲೇ ಮುಖ್ಯಮಂತ್ರಿಗಳನ್ನು ಇಡಿ, ಸಿಬಿಐ ಬಂಧಿಸುವುದು ಹೊಸದೆನಲ್ಲ. ಈ ಹಿಂದೆ ಹಲವು ಪಕ್ಷದ ಮುಖ್ಯಮಂತ್ರಿಗಳನ್ನು ಬಂಧನ ಮಾಡಲಾಗಿತ್ತು. ಆದರೆ ಅವರು ಬಂಧನಕ್ಕೂ ಮೊದಲು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಆದರೆ ಸಿಎಂ ಹುದ್ದೆಯಲ್ಲಿದ್ದಾಗಲೇ ಬಂಧನಕ್ಕೆ ಒಳಗಾದ ಮೊದಲ ನಾಯಕ ಕೇಜ್ರಿವಾಲ್ ಆಗಿದ್ದಾರೆ.
Advertisement
#WATCH | Delhi minister and AAP leader Atishi says, "We have put an application in the Supreme Court against the illegal arrest of Delhi CM Arvind Kejriwal. It will be mentioned in the Supreme Court tomorrow morning. We hope that the Supreme Court will protect democracy…" pic.twitter.com/hjhbEe9geF
— ANI (@ANI) March 21, 2024
ಯಡಿಯೂರಪ್ಪ(ಕರ್ನಾಟಕ), ಮಧು ಕೋಡಾ(ಜಾರ್ಖಂಡ್), ಶಿಬು ಸೊರೇನ್(ಜಾರ್ಖಂಡ್), ಜಯಲಲಿತಾ(ತಮಿಳಿನಾಡು), ಲಾಲು ಪ್ರಸಾದ್ ಯಾದವ್(ಬಿಹಾರ), ಹೇಮಂತ್ ಸೊರೇನ್(ಜಾರ್ಖಂಡ್), ಓಂ ಪ್ರಕಾಶ್ ಚೌತಾಲಾ(ಹರ್ಯಾಣ), ಚಂದ್ರಬಾಬು ನಾಯ್ಡು(ಆಂಧ್ರಪ್ರದೇಶ), ಕರುಣಾನಿಧಿ(ತಮಿಳುನಾಡು), ಚರಣ್ ಸಿಂಗ್(ಉತ್ತರ ಪ್ರದೇಶ) ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಬಂಧನಕ್ಕೆ ಒಳಗಾಗಿದ್ದರು.