ಶ್ರೀನಗರ: ಜಮ್ಮು-ಕಾಶ್ಮೀರದ (Jammu Kashmir) ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಾಜ್ಯದಲ್ಲಿ ಆಮ್ ಆದ್ಮಿ ಪಕ್ಷ (AAP) ಖಾತೆ ತೆರೆದಿದೆ.
ಅರವಿಂದ್ ಕೇಜ್ರಿವಾಲ್ ನೇತೃತ್ವದ ಎಎಪಿ, ಜಮ್ಮು ಮತ್ತು ಕಾಶ್ಮೀರದ ದೋಡಾ ವಿಧಾನಸಭಾ ಕ್ಷೇತ್ರದಲ್ಲಿ ಜಯಗಳಿಸಿ ಇತಿಹಾಸ ಬರೆದಿದೆ. ಆಪ್ ಅಭ್ಯರ್ಥಿ ಮೆಹರಾಜ್ ಮಲಿಕ್, ಬಿಜೆಪಿಯ ಗಜಯ್ ಸಿಂಗ್ ರಾಣಾ ಅವರನ್ನು ಸೋಲಿಸಿದ್ದಾರೆ. ಇದನ್ನೂ ಓದಿ: Jammu Kashmir Election Results| ಉಗ್ರರಿಂದ ಹತ್ಯೆಯಾಗಿದ್ದ ವ್ಯಕ್ತಿಯ ಮಗಳಿಗೆ ಒಲಿದ ಜಯ
Advertisement
Advertisement
36 ನೇ ವಯಸ್ಸಿನಲ್ಲಿ ಮಲಿಕ್ ಅವರು ತಮ್ಮ ಪರ್ವತ ಪ್ರದೇಶದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಭರವಸೆಯ ಮೇಲೆ ಮತ ಕೇಳಿದ್ದರು. ಎಎಪಿ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ದೋಡಾದಲ್ಲಿ ರ‍್ಯಾಲಿ ನಡೆಸಿದ್ದು, ಮಲಿಕ್ ಪ್ರಚಾರಕ್ಕೆ ಮತ್ತಷ್ಟು ಶಕ್ತಿ ನೀಡಿತ್ತು.
Advertisement
2014 ರ ಬಳಿಕ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗೆ ಮೂರು ಹಂತಗಳಲ್ಲಿ ಚುನಾವಣೆ ನಡೆಯಿತು. ಸೆ.18 ರಂದು ಮೊದಲ ಹಂತದಲ್ಲಿ 24 ಸ್ಥಾನಗಳಿಗೆ ಮತದಾನ ನಡೆಯಿತು. ಸೆ.25 ರಂದು ಎರಡನೇ ಹಂತದಲ್ಲಿ 26 ಸ್ಥಾನ ಹಾಗೂ ಅ.1 ರಂದು ಕೊನೆ ಹಂತದಲ್ಲಿ 40 ಕ್ಷೇತ್ರಗಳಿಗೆ ಮತದಾನ ನಡೆಯಿತು. ಇದನ್ನೂ ಓದಿ: Haryana Results| ಕಾಂಗ್ರೆಸ್ ಸೋತಿದ್ದು ಹೇಗೆ? – ಇಲ್ಲಿದೆ 6 ಕಾರಣಗಳು
Advertisement
ಕಾಶ್ಮೀರದಲ್ಲಿ ಎನ್‌ಸಿ-ಕಾಂಗ್ರೆಸ್ ಒಟ್ಟು 90 ಸ್ಥಾನಗಳಲ್ಲಿ 40-48, ಬಿಜೆಪಿ 27-32, ಪಿಡಿಪಿ 6-12 ಮತ್ತು ಇತರರು 6-11 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ. ರಾಜ್ಯದಲ್ಲಿ ಸರ್ಕಾರ ರಚಿಸಲು 46 ಸ್ಥಾನಗಳ ಅಗತ್ಯವಿದೆ. ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟ ರಾಜ್ಯದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ.