ಜಿಮ್‍ನಲ್ಲಿದ್ದ ಎಎಪಿ ಮುಖಂಡನನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

Public TV
1 Min Read
AAP leader gym gun murder municipal councillor

ಚಂಡೀಗಢ: ಪಂಜಾಬ್‍ನ ಮಲೇರ್‍ಕೋಟ್ಲಾ ಜಿಲ್ಲೆಯ ಜಿಮ್‍ನಲ್ಲಿ ಆಮ್ ಆದ್ಮಿ ಪಕ್ಷದ ಮುನ್ಸಿಪಲ್ ಕೌನ್ಸಿಲರ್‌ನನ್ನು ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೊಹಮ್ಮದ್ ಅಕ್ಬರ್ ಮೃತ ಮುನ್ಸಿಪಲ್ ಕೌನ್ಸಿಲರ್‌. ಇಬ್ಬರು ದುಷ್ಕರ್ಮಿಗಳು ಜಿಮ್‍ಗೆ ಬಂದು ಅಕ್ಬರ್‌ಗೆ ಗುಂಡು ಹಾರಿಸಿ ಅಲ್ಲಿಂದ ಪರಾರಿಯಾಗಿದ್ದಾರೆ. ಒಂದು ಗುಂಡು ಅಕ್ಬರ್‌ಗೆ ತಗುಲಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಮಲೇರ್‍ಕೋಟ್ಲಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅವನೀತ್ ಕೌರ್ ಸಿಧು ಹೇಳಿದ್ದಾರೆ. ಇದನ್ನೂ ಓದಿ:  ದ.ಕನ್ನಡದಲ್ಲಿ ಪೊಲೀಸ್ ಬಂದೋಬಸ್ತ್ ಕಡಿಮೆ ಇದ್ದು, ಹೆಚ್ಚಿಸಬೇಕು: ಡಿಜಿಪಿ ಪ್ರವೀಣ್ ಸೂದ್ 

aap 1

ವೈಯಕ್ತಿಕ ದ್ವೇಷದ ಪರಿಣಾಮ ಈ ಘಟನೆ ಸಂಭವಿಸಿದೆ ಎಂದು ತೋರುತ್ತಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸುತ್ತಿದ್ದೇವೆ. ಈ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವೀಡಿಯೋದಲ್ಲಿ, ಅಕ್ಬರ್ ಜಿಮ್‍ನೊಳಗೆ ಅಪರಿಚಿತ ವ್ಯಕ್ತಿಯ ಕಡೆಗೆ ಹೋಗುತ್ತಿರುವುದು ಕಂಡುಬಂದಿದೆ. ಅಕ್ಬರ್ ಹತ್ತಿರ ಬರುತ್ತಿದ್ದಂತೆಯೇ ದುಷ್ಕರ್ಮಿ ಬಂದೂಕು ತೆಗೆದು ಆತನ ಮೇಲೆ ಗುಂಡು ಹಾರಿಸಿದ್ದಾನೆ ಎಂದು ವಿವರಿಸಿದ್ದಾರೆ.

aap

ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ಸ್ಥಳದಿಂದ ಪರಾರಿಯಾಗಿದ್ದು, ಅವರನ್ನು ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದರು. ಇದನ್ನೂ ಓದಿ: ಜ್ಞಾನವಾಪಿ ಪ್ರಕರಣದಲ್ಲಿ ಮಸೀದಿ ಪರ ವಾದ ಮಂಡಿಸಿದ್ದ ವಕೀಲ ಹೃದಯಾಘಾತದಿಂದ ಸಾವು

ಪ್ರಸ್ತುತ ಪಂಜಾಬ್‍ನಲ್ಲಿ ಆಮ್ ಆದ್ಮಿ ಪಕ್ಷ(ಎಎಪಿ) ಪಕ್ಷ ಅಧಿಕಾರದಲ್ಲಿದ್ದು, ಕೊಲೆ ಕುರಿತು ಬಾರಿ ಚರ್ಚೆಯಾಗುತ್ತಿದೆ.

Live Tv
[brid partner=56869869 player=32851 video=960834 autoplay=true]

Share This Article