ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಟಿಕೆಟ್ ಸಿಗದಿದ್ದಕ್ಕೆ ಕೋಪಗೊಂಡು ಐದು ಮಂದಿ ಎಎಪಿ ಶಾಸಕರು ರಾಜೀನಾಮೆ ನೀಡಿದ್ದಾರೆ.
ತ್ರಿಲೋಕಪುರಿ ಕ್ಷೇತ್ರದ ಶಾಸಕ ರೋಹಿತ್ ಮೆಹ್ರಾಲಿಯಾ, ಜನಕಪುರಿ ಶಾಸಕ ರಾಜೇಶ್ ರಿಷಿ, ಕಸ್ತೂರಬಾ ನಗರ ಶಾಸಕ ಮದನ್ ಲಾಲ್, ಪಾಲಂ ಶಾಸಕಿ ಭಾವನಾ ಗೌರ್, ಮೆಹ್ರೌಲಿ ಶಾಸಕ ನರೇಶ್ ಯಾದವ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ.
Advertisement
ಪಾಲಂ ಶಾಸಕಿ ಭಾವನಾ ಗೌರ್ ಅವರು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರಿಗೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ, ’ಕೇಜ್ರಿವಾಲ್ ಮತ್ತು ಪಕ್ಷದ ಮೇಲಿನ ನಂಬಿಕೆಯನ್ನು ಕಳೆದುಕೊಂಡ ಕಾರಣ ರಾಜೀನಾಮೆ ನೀಡುತ್ತಿರುವುದಾಗಿ’ ತಿಳಿಸಿದ್ದಾರೆ.