ನವದೆಹಲಿ: ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ಶಾಸಕ ಅಮಾನತುಲ್ಲಾ ಖಾನ್ (Amanatullah Khan) ಅವರನ್ನು ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ (Rouse Avenue court) ಇಂದು 14 ದಿನಗಳ ಕಾಲ ನ್ಯಾಯಾಂಗ ಬಂಧನ ( Judicial Custody) ವಿಧಿಸಿದೆ.
ದೆಹಲಿ ವಕ್ಫ್ ಬೋರ್ಡ್ (Delhi Waqf Board) ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಅಮಾನತುಲ್ಲಾ ಖಾನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) (Anti-Corruption Bureau) ಸೆಪ್ಟೆಂಬರ್ 16 ರಂದು ಬಂಧಿಸಿತ್ತು. ವಕ್ಫ್ ಮಂಡಳಿಗೆ ಅಕ್ರಮ ನೇಮಕಾತಿ ಆರೋಪದ ಮೇಲೆ ದೆಹಲಿಯ ಭ್ರಷ್ಟಾಚಾರ ನಿಗ್ರಹ ದಳ ಅಮಾನತುಲ್ಲಾ ಖಾನ್ ಮನೆ, ಕಚೇರಿ ಮೇಲೆ ದಾಳಿ ನಡೆಸಿತ್ತು. ಆ ವೇಳೆ ದೋಷಾರೋಪಣೆಯ ವಸ್ತುಗಳು ಮತ್ತು ಸಾಕ್ಷ್ಯಗಳನ್ನು ವಶಪಡಿಸಿಕೊಂಡಿತ್ತು. ಜೊತೆಗೆ ಅಮಾನತುಲ್ಲಾ ಖಾನ್ ಆಪ್ತ ಸಹಾಯಕ ಎಂದು ಹೇಳುವ ವ್ಯಕ್ತಿಯಿಂದ ಎರಡು ಶಸ್ತ್ರಾಸ್ತ್ರಗಳು ಮತ್ತು 24 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಂಡಿತ್ತು.
Advertisement
Advertisement
ಬಂಧನಕ್ಕೊಳಗಾದ ಒಂದು ದಿನದ ನಂತರ, ಅಮಾನತುಲ್ಲಾ ಖಾನ್ ಅವರನ್ನು ನಾಲ್ಕು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಯಿತು. ಅಂದೇ ಶಾಸಕರ ಸಹಾಯಕ ಹಮೀದ್ ಅಲಿ ನಿವಾಸದಲ್ಲಿ ಪರವಾನಗಿ ಪಡೆಯದ ಪಿಸ್ತೂಲ್ ಮತ್ತು 12 ಲಕ್ಷ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಯಿತು. ಈ ವೇಳೆ ಅಮಾನತುಲ್ಲಾ ಖಾನ್ ಅವರು ತಮ್ಮ ಮನೆಯಲ್ಲಿ ಶಸ್ತ್ರಾಸ್ತ್ರಗಳು ಮತ್ತು ಹಣವನ್ನು ಇಟ್ಟುಕೊಂಡಿದ್ದಾರೆ. ಮತ್ತು ಎಲ್ಲಾ ವ್ಯವಹಾರಗಳನ್ನು ಅವರ ಸೂಚನೆಯ ಮೇರೆಗೆ ಮಾಡಲಾಗುತ್ತದೆ ಎಂದು ಹಮೀದ್ ಅಲಿ ಎಸಿಬಿಗೆ ತಿಳಿಸಿದ್ದರು.
Advertisement
ನಿಯಮಗಳು, ನಿಬಂಧನೆಗಳು ಮತ್ತು ಕಾನೂನಿನ ಉದ್ದೇಶಪೂರ್ವಕ ಮತ್ತು ಕ್ರಿಮಿನಲ್ ಉಲ್ಲಂಘನೆ, ಸ್ಥಾನದ ದುರುಪಯೋಗ ಮತ್ತು ಆರ್ಥಿಕ ನಷ್ಟವನ್ನು ಉಂಟು ಮಾಡುವುದು ಸೇರಿದಂತೆ ಅಪರಾಧಗಳಿಗಾಗಿ ಆಗಿನ ವಕ್ಫ್ ಬೋರ್ಡ್ ಸಿಇಒ ಮೆಹಬೂಬ್ ಆಲಂ ವಿರುದ್ಧವೂ ಪ್ರಾಸಿಕ್ಯೂಷನ್ ಮಂಜೂರಾತಿ ನೀಡಲಾಗಿದೆ ಎನ್ನಲಾಗಿದೆ. ಇದನ್ನೂ ಓದಿ: ಕತಾರ್ ವಿಶ್ವದ ಬೆಸ್ಟ್ ಏರ್‌ಲೈನ್ – ಟಾಪ್ 20 ಸಂಸ್ಥೆಗಳಲ್ಲಿ ಕತಾರ್‌ಗೆ No-1 ಸ್ಥಾನ
Advertisement
ದಿಲ್ಲಿಯ ಅಬಕಾರಿ ನೀತಿಗೆ (2021-22) ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯವು (ಇಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಇದನ್ನೂ ಓದಿ: ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ಸರ್ವವ್ಯಾಪಿ, ಸರ್ವ ಸ್ಪರ್ಶಿಯಾಗಿದೆ: ಪ್ರಿಯಾಂಕ್ ಖರ್ಗೆ