ನವದೆಹಲಿ: ದೆಹಲಿಯ ಮತದಾರ ಕೇಜ್ರಿವಾಲ್ ರನ್ನು ತಿರಸ್ಕರಿಸಿ, ಪ್ರಧಾನಿ ಮೋದಿ ಅವರನ್ನು ಗೆಲ್ಲಿಸಿದ್ದಾನೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ಯೋಗೇಂದ್ರ ಯಾದವ್ ಹೇಳಿದ್ದಾರೆ.
ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ನಾಯಕರಾಗಿ ಬಳಿಕ ಪಕ್ಷದಿಂದ ಉಚ್ಚಾಟನೆಯಾಗಿದ್ದ ಯೋಗೇಂದ್ರ ಯಾದವ್ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯ ಬಗ್ಗೆ ಪ್ರತಿಕ್ರಿಯಿಸಿ, ಮೋಸ ಮಾಡಿರುವ ಆಪ್‍ಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಅವರು ತಿಳಿಸಿದರು.
Advertisement
ಇವಿಎಂ ದುರ್ಬಳಕೆ ಮಾಡಿದ್ದಾರೆ ಎನ್ನುವ ಆಪ್ ನಾಯಕರ ಆರೋಪಕ್ಕೆ, ಇವಿಎಂ ಸಾಫ್ಟ್ ವೇರ್ ಏನು ಆಗಿಲ್ಲ. ಆಡಳಿತ ನಡೆಸುವ ಪಕ್ಷದ ಸಾಫ್ಟ್ ವೇರ್ ಬದಲಾವಣೆಯಾಗುವ ಅಗತ್ಯವಿದೆ. ಆಪ್ ನಾಯಕರು ಮಹಾನಗರ ಪಾಲಿಕೆಯ ಚುನಾವಣೆಯನ್ನಲ್ಲ, ಅವರನ್ನು ಅವರೇ ಸಂಪೂರ್ಣವಾಗಿ ಕಳೆದುಕೊಂಡಿದ್ದಾರೆ ಎಂದರು.
Advertisement
ನಾವು ಈ ಚುನಾವಣೆಯಲ್ಲಿ ಜಯಗಳಿಸಬೇಕು ಎನ್ನುವ ಯಾವುದೇ ನಿರೀಕ್ಷೆಯನ್ನು ಇಟ್ಟುಕೊಂಡಿರಲಿಲ್ಲ. ನಾವು ದೆಹಲಿ ಜನರ ನಿಜವಾದ ಸಮಸ್ಯೆಯನ್ನು ಇಟ್ಟುಕೊಂಡು ಚುನಾವಣೆ ಎದುರಿಸಿದ್ದೇವೆ, ನಾವು ತಳಮಟ್ಟದ ಸಮಸ್ಯೆಯ ಬಗ್ಗೆ ಮಾತನಾಡುತ್ತೇವೆ ವಿನಾಃ ಕಾಶ್ಮೀರ ಇತ್ಯಾದಿ ವಿಚಾರಗಳ ಬಗ್ಗೆ ಮಾತನಾಡುವುದಿಲ್ಲ ಎಂದು ಹೇಳಿದರು.
Advertisement
ಇದೇ ವೇಳೆ ದೇಶದಲ್ಲಿ ನಮ್ಮ ಪಕ್ಷ ಮಾತ್ರ ದೇಣಿಗೆ ನೀಡಿದ ವ್ಯಕ್ತಿಗಳ ವಿವರವನ್ನು ವೆಬ್‍ಸೈಟ್ ನಲ್ಲಿ ಪ್ರಕಟಿಸುತ್ತಿದೆ ಎಂದು ಹೇಳಿದರು.
Advertisement
No seat for Swaraj India was expected.
No firm vote share figures yet, but seems lower than expected.
We need to reflect too!
— Yogendra Yadav (@_YogendraYadav) April 26, 2017
MCD counting begins.
I begin with zero expectations. Anything above that is bonus.
— Yogendra Yadav (@_YogendraYadav) April 26, 2017
EVM bahana: seems AAP leaders have not just lost elections, they've lost it.
मत तो हारे, साथ में मति भी हार रहे हैं! https://t.co/KcKLrTyvzI
— Yogendra Yadav (@_YogendraYadav) April 26, 2017
People of Delhi want us to sit out and prove we're worthy of their trust. Swaraj India hears people's voice loud and clear, respects it. https://t.co/wtHGcCSpaS
— Yogendra Yadav (@_YogendraYadav) April 26, 2017