ನವದೆಹಲಿ: ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಇಲ್ಲ ಎಂದು ಎಎಪಿ ಮುಖಂಡ ಮುಖ್ಯಮಂತ್ರಿ ಚಂದ್ರು ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಅರವಿಂದ್ ಕೇಜ್ರಿವಾಲ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವಜನಾಂಗದ ತೋಟ ಅಂತಾ ಬರೆದ ಕವಿಗೆ ಅವಮಾನ ಆಗಿದೆ. ಬಸವರಾಜ ಬೊಮ್ಮಾಯಿಗೆ ನಿರ್ಧಾರ ತೆಗೆದುಕೊಳ್ಳುವ ಧೈರ್ಯ ಇಲ್ಲ. ಕೇಸರಿಕರಣ ಮಾಡುವ ಪ್ರಯತ್ನ ನಡೆಯುತ್ತಿದೆ. ಎಲ್ಲರೂ ಒಂದೇ ಸಮುದಾಯದವರು ಸೇರಿ ಪರಿಷ್ಕರಣೆ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
Advertisement
Advertisement
ಬಸವಣ್ಣ ಮತ್ತು ಅಂಬೇಡ್ಕರ್ ಗೆ ಅವಮಾನ ಮಾಡಿದ್ದಾರೆ. ಬಸವಣ್ಣ ಜಾತಿ ವ್ಯವಸ್ಥೆ ವಿರುದ್ಧ ಬಂಡಾಯ ಎದ್ದಿದ್ದರು. ಆದರೆ ಅವರು ಉಪನಯನ ಮಾಡಿಕೊಂಡರು ಅಂತಾರೆ ಬರೆಯಲಾಗಿದೆ. ಈ ಸಮಿತಿಯ ಪರಿಷ್ಕರಣೆ ರದ್ದು ಮಾಡಬೇಕು. ಹಳೆ ಪಠ್ಯಪುಸ್ತಕ ಜಾರಿ ಮಾಡಬೇಕು. ರೋಹಿತ್ ಚಕ್ರತೀರ್ಥ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಮುಂದಿನ ವರ್ಷ ಎಲ್ಲ ವರ್ಗದವರಿಗೂ ಸಮಾನತೆ ನೀಡುವ ನಿಟ್ಟಿನಲ್ಲಿ ಪರಿಷ್ಕರಣೆ ನಡೆಯಲಿ ಎಂದು ಅವರು ಆಗ್ರಹಿಸಿದರು. ಇದನ್ನೂ ಓದಿ: ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧ: ಉದ್ಧವ್ ಠಾಕ್ರೆ
Advertisement
Advertisement
ನಾನು ಇವತ್ತು ಸಿಎಂ ಅರವಿಂದ್ ಕೇಜ್ರಿವಾಲ್ ಭೇಟಿಯಾಗಿದ್ದೆ. ಭ್ರಷ್ಟಾಚಾರ ರಹಿತ ವ್ಯಕ್ತಿಗಳನ್ನು ಪಕ್ಷ ಸೇರ್ಪಡೆ ಮಾಡಿಕೊಳ್ಳಲು ಹೇಳಿದ್ದಾರೆ. ನಾನು ಚುನಾವಣೆಗೆ ನಿಲ್ಲಲ್ಲ, ಪಕ್ಷ ಕಟ್ಟುತ್ತೇನೆ. ನಾನು ಮೂರು ಪಕ್ಷಗಳನ್ನು ನೋಡಿ ಬಂದಿದ್ದೇನೆ. ಬಿಜೆಪಿಯಲ್ಲಿ ಕೇಸರಿಕರಣ, ಕಾಂಗ್ರೆಸ್ ನಲ್ಲಿ ಆತಂತರಿಕ ಕಿತ್ತಾಟ ಇದೆ ಎಂದರು. ಇದನ್ನೂ ಓದಿ: ಕಾಲಿವುಡ್ ಹಿರಿಯ ನಟ ವಿಜಯ್ ಕಾಂತ್ ಅವರ ಮೂರು ಬೆರಳು ಕತ್ತರಿಸಿದ ವೈದ್ಯರು
ರಾಜ್ಯದ ಅಭಿವೃದ್ಧಿ ಬಗ್ಗೆ ಯಾರಿಗೂ ಚಿಂತನೆ ಇಲ್ಲ. ಹೀಗಾಗಿ ಆಪ್ ಪರ್ಯಾಯ ಪಕ್ಷವಾಗಿದೆ. ಆಮ್ ಅದ್ಮಿ ಬಗ್ಗೆ ಜನಾಭಿಪ್ರಾಯ ಇದೆ, ಅದು ಹೊರಗೆ ಕಾಣುತ್ತಿಲ್ಲ. ಮತದಾರರು ಹೊಸಬರನ್ನು ಹುಡುಕುತ್ತಿದ್ದಾರೆ. ಕೆಲವು ದೇಶಗಳಲ್ಲಿ ಸರ್ಕಾರಿ ಶಾಲೆಗಳಿಗೆ ಬೇಡಿಕೆ ಹೆಚ್ಚಿದೆ. ನಮ್ಮ ದೇಶದಲ್ಲಿ ಸರ್ಕಾರಿ ಶಾಲೆಗೆ ಬೇಡಿಕೆ ಇರುವುದು ನೋಡಿರಲಿಲ್ಲ. ಆದರೆ ಇದನ್ನು ದೆಹಲಿಯಲ್ಲಿ ಕಣ್ಣಾರೆ ಕಂಡೆ ಎಂದು ತಿಳಿಸಿದರು.
ಶಾಲೆಯಲ್ಲಿ ಸ್ವಿಮಿಂಗ್ ಪೂಲ್, ಸಿಸಿಟಿವಿ ಎಲ್ಲವೂ ಇದೆ. ಶಾಲೆ ಒಂದು ಕುಟುಂಬದ ರೀತಿಯಲ್ಲಿ ಇತ್ತು. ನಾಯಕನಿಗೆ ಇಚ್ಛಾಶಕ್ತಿ ಇದ್ರೆ ಇದೆಲ್ಲವು ಸಾಧ್ಯ. ಕರ್ನಾಟಕದಲ್ಲೂ ಇದೇ ಮಾದರಿ ಬೇಕು. ರಾಜ್ಯದ ಮೂರು ಪಕ್ಷದಿಂದ ಇದು ಸಾಧ್ಯವಿಲ್ಲ. ಹೀಗಾಗಿ ಆಮ್ ಅದ್ಮಿ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಚಂದ್ರು ಹೇಳಿದರು.