ಕೇಜ್ರಿವಾಲ್‌ ಬಂಧನ ಬೆನ್ನಲ್ಲೇ ಮತ್ತೊಬ್ಬ ದೆಹಲಿ ಸಚಿವರಿಗೆ ಇ.ಡಿ ಸಮನ್ಸ್‌

Public TV
1 Min Read
Kailash Gahlot AAP

ನವದೆಹಲಿ: ದೆಹಲಿ ಮದ್ಯ ನೀತಿ ಹಗರಣ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (Arvind Kejriwal) ಬಂಧನಕ್ಕೊಳಗಾಗಿದ್ದಾರೆ. ಅವರ ಬೆನ್ನಲ್ಲೇ ದೆಹಲಿ ಸಚಿವ ಕೈಲಾಶ್‌ ಗೆಹ್ಲೋಟ್‌ಗೆ (Kailash Gahlot) ಇ.ಡಿ ಸಮನ್ಸ್‌ ನೀಡಿದೆ.

ಎಎಪಿ ನಾಯಕ ಗೆಹ್ಲೋಟ್‌ ಅವರು ದೆಹಲಿ ಸರ್ಕಾರದಲ್ಲಿ ಗೃಹ, ಸಾರಿಗೆ ಮತ್ತು ಕಾನೂನು ಸಚಿವರಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಕರೆದಿದೆ. ಇದನ್ನೂ ಓದಿ: ರಾಹುಲ್‌ ಗಾಂಧಿ ವಿರುದ್ಧ ಕಣಕ್ಕಿಳಿದಿರೋ ಬಿಜೆಪಿ ಅಭ್ಯರ್ಥಿ ಮೇಲೆ 242 ಕ್ರಿಮಿನಲ್‌ ಕೇಸ್‌

Arvind Kejriwal 3

ಇ.ಡಿ ಸಮನ್ಸ್‌ ಬರುತ್ತಿದ್ದಂತೆ ಗೆಹ್ಲೋಟ್ ಅವರು ಈಗಾಗಲೇ ತನಿಖಾ ಸಂಸ್ಥೆಯ ಕಚೇರಿಯನ್ನು ತಲುಪಿದ್ದಾರೆ. ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಿದ ಕೆಲವೇ ದಿನಗಳಲ್ಲಿ ಸಮನ್ಸ್ ಬಂದಿದೆ.

ಈ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಕೈಲಾಶ್ ಗಹ್ಲೋಟ್ ಅವರನ್ನು ಕೇಳಲಾಗಿತ್ತು. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಇಡಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮುಲಾಯಂ ಸರ್ಕಾರದಿಂದ ರಕ್ಷಣೆ – ಅನ್ಸಾರಿಯನ್ನು ಬಂಧಿಸಿದ್ದಕ್ಕೆ ಡಿಎಸ್‌ಪಿಗೆ ರಾಜೀನಾಮೆ ಶಿಕ್ಷೆ!

ARVIND KEJRIWAL

ಮದ್ಯ ನೀತಿ ಹಗರಣದಲ್ಲಿ 600 ಕೋಟಿಗೂ ಹೆಚ್ಚು ಹಣವನ್ನು ಲಂಚವಾಗಿ ಪಡೆಯಲಾಗಿದೆ. ಆ ಹಣವನ್ನು ಗೋವಾ ಮತ್ತು ಪಂಜಾಬ್‌ ಚುನಾವಣಾ ಪ್ರಚಾರಕ್ಕಾಗಿ ಬಳಸಲಾಗಿದೆ ಎಂದು ಇ.ಡಿ ತಿಳಿಸಿದೆ.

ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಮೂವರು ಪ್ರಮುಖರನ್ನು ಬಂಧಿಸಲಾಗಿದೆ. ಎಎಪಿ ಸಂಸದ ಸಂಜಯ್ ಸಿಂಗ್ ಮತ್ತು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನಕ್ಕೆ ಒಳಗಾಗಿದ್ದಾರೆ.

Share This Article