ನವದೆಹಲಿ: ಮುಂಬರುವ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ (Gujarat assembly election) ಎಎಪಿ (AAP) ಪಕ್ಷವೇ ನಾಶವಾಗಲಿದೆ. ರಾಜಕೀಯದ ಆಸೆಗಾಗಿ ಎಎಪಿ ಪ್ರಧಾನಿ ಮೋದಿಯವರ (Narendra Modi) ತಾಯಿಯನ್ನು ಅಗೌರವಗೊಳಿಸಿದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ (Smriti Irani) ಎಎಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ (Gopal Italia) ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದಾಗಿ ಆರೋಪಿಸಲಾಗಿದೆ. ಈ ಹಿನ್ನೆಲೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಎಎಪಿ ವಿರುದ್ಧ ಶುಕ್ರವಾರ ಚಾಟಿ ಬೀಸಿದ್ದಾರೆ.
Advertisement
Advertisement
ನಮ್ಮ ಪ್ರಧಾನಿಯವರ 100 ವರ್ಷದ ತಾಯಿಯನ್ನು ಎಎಪಿ ನಾಯಕರು ಅವಮಾನಿಸಿ, ತಮ್ಮ ರಾಜಕೀಯವನ್ನು ಬೆಳಗಿಸಲು ಮುಂದಾಗಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಎಎಪಿ ಪಕ್ಷವನ್ನು ನಾಶ ಮಾಡುವುದಾಗಿ ಗುಜರಾತ್‌ನ ಜನರು ಪ್ರತಿಜ್ಞೆ ಮಾಡಿದ್ದಾರೆ ಎಂದು ಹೇಳಿದರು.
Advertisement
ಮೋದಿಯವರ ತಾಯಿ ಮಾಡಿದ ಒಂದು ತಪ್ಪು ಏನೆಂದರೆ, ಅವರು ಕೇಜ್ರಿವಾಲ್ ಅವರ ರಾಜಕೀಯ ಆಸೆಗಳನ್ನು ಈಡೇರಿಸದಂತೆ ತಡೆಯುವ ಮಗನಿಗೆ ಜನ್ಮ ನೀಡಿದರು. ಈಗ ಅವರು ನೀಡಿರುವ ಅಗೌರವಕ್ಕೆ ಗುಜರಾತ್ ನ್ಯಾಯ ಒದಗಿಸುತ್ತದೆ ಎಂದು ಹೇಳಿಕೆ ನೀಡಿದರು. ಇದನ್ನೂ ಓದಿ: ಹಿಮಾಚಲ ಪ್ರದೇಶದಲ್ಲಿ ನ.12ಕ್ಕೆ ಚುನಾವಣೆ, ಡಿ. 8ಕ್ಕೆ ಮತ ಎಣಿಕೆ
Advertisement
ಅರವಿಂದ್ ಕೇಜ್ರಿವಾಲ್ ಅವರೆ, ನಿಮ್ಮ ಆಶೀರ್ವಾದದಿಂದ ಗೋಪಾಲ್ ಇಟಾಲಿಯಾ ತಮ್ಮ ಚರಂಡಿ ಬಾಯಿಯಿಂದ ಹೀರಾಬೆನ್ (Heeraben Modi) ಅವರನ್ನು ನಿಂದಿಸಿದ್ದಾರೆ. ನಾನು ಯಾವುದೇ ಆಕ್ರೋಶವನ್ನು ವ್ಯಕ್ತಪಡಿಸುವುದಿಲ್ಲ. ಗುಜರಾತಿಗಳು ಎಷ್ಟು ಕೋಪಗೊಂಡಿದ್ದಾರೆಂದು ತೋರಿಸಲು ಬಯಸುವುದಿಲ್ಲ. ಆದರೆ ಈಗಾಗಲೇ ನಿಮ್ಮ ಭವಿಷ್ಯದ ಬಗ್ಗೆ ತೀರ್ಮಾನ ಆಗಿದೆ. ಚುನಾವಣೆಯ ಸಂದರ್ಭದಲ್ಲಿ ಗುಜರಾತ್‌ನ ಜನರೇ ನಿಮಗೆ ಪಾಠ ಕಲಿಸುತ್ತಾರೆ ಎಂದು ಕಿಡಿ ಕಾರಿದರು.
AAP पार्टी के नेता ने प्रधान सेवक की 100 वर्षीय मां का अपमान इसलिए किया, क्योंकि वो अपनी राजनीति चमकाना चाहते हैं।
गुजरात और गुजरातियों ने ये संकल्प लिया है कि AAP पार्टी को आगामी चुनाव में ध्वस्त करेंगे।
– श्रीमती @smritiirani pic.twitter.com/jxsUhrnr7r
— BJP (@BJP4India) October 14, 2022
ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರು ಹೀರಾಬೆನ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ವೀಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಕಾಣಿಸಿಕೊಂಡಿದೆ. ಆದರೆ ಆ ವೀಡಿಯೋ ಯಾವ ದಿನಾಂಕದ್ದು ಎಂಬುದು ತಿಳಿದುಬಂದಿಲ್ಲ. ಇದನ್ನೂ ಓದಿ: ನವೆಂಬರ್‌ನಲ್ಲಿ ಕರ್ನಾಟಕಕ್ಕೂ ಬರಲಿದೆ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲು