ಕೇಜ್ರಿವಾಲ್‌ ಬಂಧನ ಖಂಡಿಸಿ ದೇಶಾದ್ಯಂತ ಎಎಪಿಯಿಂದ ಸಾಮೂಹಿಕ ಉಪವಾಸ

Public TV
1 Min Read
AAP

ನವದೆಹಲಿ: ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಬಂಧನ ಖಂಡಿಸಿ ಎಎಪಿ (Mass Fasting From AAP) ಪಕ್ಷವು ಇಂದು ದೇಶಾದ್ಯಂತ ಸಾಮೂಹಿಕ ಉಪವಾಸವನ್ನು ಕೈಗೊಂಡಿದೆ.

ದೆಹಲಿಯ ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಈ ಸತ್ಯಾಗ್ರಹದಲ್ಲಿ ಎಎಪಿ ಪಕ್ಷದ ಉನ್ನತ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದಾರೆ. ಇದನ್ನೂ ಓದಿ: ಬೆಳಗ್ಗೆದ್ದು ಸೆಲ್‌ ಕ್ಲೀನ್‌, ಯೋಗ ನಂತ್ರ 2 ಪೀಸ್‌ ಬ್ರೆಡ್-‌ ಜೈಲಲ್ಲಿರೋ ಕೇಜ್ರಿವಾಲ್‌ ದಿನಚರಿ ಹೇಗಿದೆ?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರನ್ನು ಬಂಧಿಸಿದಾಗಿನಿಂದ ಇಡೀ ದೇಶದಲ್ಲಿ ಇದರ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಮಾರ್ಚ್ 21 ರಂದು ಬಂಧನವಾದ ದಿನದಿಂದ ಇಲ್ಲಿಯವರೆಗೆ ಜನರು ಬೀದಿಗಿಳಿದಿದ್ದಾರೆ. ಹೀಗಾಗಿ ದೇಶಾದ್ಯಂತ ಮತ್ತು ಪ್ರಪಂಚದಾದ್ಯಂತ ಜನರು ಕೇಜ್ರಿವಾಲ್‌ಗಾಗಿ ಸಾಮೂಹಿಕ ಉಪವಾಸವನ್ನು ಆಚರಿಸುತ್ತಿದ್ದಾರೆ ಎಂದು ದೆಹಲಿ ಸಚಿವ ಗೋಪಾಲ್ ರೈ ಹೇಳಿದ್ದಾರೆ.

ದೆಹಲಿಯ ಜನರು ಕೇಜ್ರಿವಾಲ್ ಅವರನ್ನು ತುಂಬಾ ಪ್ರೀತಿಸುತ್ತಾರೆ. ಅವರನ್ನು ಸಿಎಂ ಎಂದು ಪರಿಗಣಿಸದೆ ತಮ್ಮ ಮಗ ಅಥವಾ ಸಹೋದರ ಎಂದು ಪರಿಗಣಿಸುತ್ತಾರೆ. ಅರವಿಂದ್ ಕೇಜ್ರಿವಾಲ್ ಬೇಗ ಬಿಡುಗಡೆಯಾಗಲಿ ಎಂದು ಎಲ್ಲರೂ ಬಯಸುತ್ತಾರೆ. ಬಿಜೆಪಿಯ ಇಡಿ ಮತ್ತು ಸಿಬಿಐಗೆ ಮದ್ಯ ಹಗರಣದ ಒಂದು ಪೈಸೆಯೂ ತೋರಿಸಲು ಸಾಧ್ಯವಾಗಿಲ್ಲ ಎಂದು ಸಚಿವೆ ಅತಿಶಿ ಹೇಳಿದ್ದಾರೆ.

ಮದ್ಯ ಹಗರಣಕ್ಕೆ (Liquor Scam) ಸಂಬಂಧಿಸಿದಂತೆ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (ED) ಬಂಧನಕ್ಕೊಳಗಾದ ಕೇಜ್ರಿವಾಲ್‌ ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ನಂತರ ಸೋಮವಾರ ತಿಹಾರ್ ಜೈಲಿಗೆ ಸ್ಥಳಾಂತರಿಸಲಾಯಿತು.

Share This Article