ನವದೆಹಲಿ: ಹೊಸ ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಬಂಧನ ಬೆನ್ನಲ್ಲೇ ಆಮ್ ಆದ್ಮಿ ಪಕ್ಷಕ್ಕೆ (AAP) ಮತ್ತೊಂದು ಶಾಕ್ ಎದುರಾಗಿದೆ.
ಎಎಪಿಯ ದೆಹಲಿ ಸಚಿವ ರಾಜ್ ಕುಮಾರ್ ಆನಂದ್ (Raaj Kumar Anand) ಸರ್ಕಾರ ಮತ್ತು ಪಕ್ಷವನ್ನು ತೊರೆದಿದ್ದಾರೆ. ಇದನ್ನೂ ಓದಿ: ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಕೇಜ್ರಿವಾಲ್ ಮೇಲ್ಮನವಿ ಸಲ್ಲಿಕೆ
Advertisement
Advertisement
ಭ್ರಷ್ಟಾಚಾರ ವಿರುದ್ಧ ಹೋರಾಡುವ ಕುರಿತು ಎಎಪಿಯ ಬಲವಾದ ಸಂದೇಶವನ್ನು ನೋಡಿದ ನಂತರ ನಾನು ಎಎಪಿಗೆ ಸೇರಿದ್ದೆ. ಇಂದು ಪಕ್ಷ ಭ್ರಷ್ಟತೆ ಮಧ್ಯೆ ಸಿಲುಕಿದೆ. ಅದಕ್ಕಾಗಿಯೇ ನಾನು ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ ಎಂದು ಸಮಾಜ ಕಲ್ಯಾಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಚಿವರಾಗಿದ್ದ ಆನಂದ್ ಸ್ಪಷ್ಟಪಡಿಸಿದ್ದಾರೆ.
Advertisement
ಕೇಜ್ರಿವಾಲ್ ಅವರ ಬಂಧನ ಮತ್ತು ಮದ್ಯ ನೀತಿಯ ಪ್ರಕರಣದಿಂದ ಪಕ್ಷದ ಮೇಲಾದ ಪರಿಣಾಮದಿಂದಾಗಿ ರಾಜ್‌ಕುಮಾರ್ ಆನಂದ್ ಅವರು, ತಮ್ಮ ಸಚಿವ ಸ್ಥಾನ ಮತ್ತು ಎಎಪಿಗೆ ರಾಜೀನಾಮೆ ನೀಡಿದ್ದಾರೆ. ಹೀಗೆ ರಾಜೀನಾಮೆ ನೀಡಿದ ದೆಹಲಿ ಸರ್ಕಾರದ ಮೊದಲ ಮಂತ್ರಿಯಾಗಿದ್ದಾರೆ. ಇದನ್ನೂ ಓದಿ: ಕೇಜ್ರಿವಾಲ್ ಇತರರೊಂದಿಗೆ ಸೇರಿ ಪಿತೂರಿ ನಡೆಸಿದ್ದಾರೆ – ಜಾಮೀನು ಅರ್ಜಿ ವಜಾ
Advertisement
ದೆಹಲಿ ಮದ್ಯ ನೀತಿ ಪ್ರಕರಣ ಮತ್ತು ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಸೇರಿದಂತೆ ಪ್ರಮುಖ ನಾಯಕರ ಬಂಧನ ಬಳಿಕ ಪಕ್ಷದಲ್ಲಿ ಅಚ್ಚರಿದಾಯಕ ಬೆಳವಣಿಗೆಗಳು ನಡೆಯುತ್ತಿವೆ.