ನಟನೆಯಿಂದ ದೂರ ಉಳಿಯಲಿದ್ದಾರಂತೆ ಬಾಲಿವುಡ್ ನಟ ಆಮೀರ್ ಖಾನ್

Public TV
1 Min Read
lal singh chaddha 1

ಲಾಲ್ ಸಿಂಗ್ ಚಡ್ಡಾ ಸಿನಿಮಾದ ಸೋಲು ಆಮೀರ್ ಖಾನ್ ಅವರನ್ನು ಭಾರೀ ನಿದ್ದೆಗೆಡಿಸಿದೆಯಂತೆ. ಈ ಸಿನಿಮಾದ ಬಗ್ಗೆ ಅವರಿಗೆ ಅಪಾರ ನಂಬಿಕೆಯಿತ್ತು. ಈ ಸಿನಿಮಾ ಅದ್ಭುತ ಯಶಸ್ಸು ಗಳಿಸುತ್ತದೆ ಎಂದೇ ನಂಬಲಾಗಿತ್ತು. ಬಾಕ್ಸ್ ಆಫೀಸು ತುಂಬುವುದರ ಜೊತೆಗೆ ವಿಮರ್ಶಕರು ಕೂಡ ಮೆಚ್ಚಿ ಮಾತನಾಡುತ್ತಾರೆ ಎಂದು ಆಮೀರ್ ಬಲವಾಗಿ ನಂಬಿದ್ದರು. ಆದರೆ ಆ ನಂಬಿಕೆ ಸುಳ್ಳಾಯಿತು. ಅಂದುಕೊಂಡಷ್ಟು ಸಿನಿಮಾ ಗೆಲ್ಲಲಿಲ್ಲ. ಬಾಕ್ಸ್ ಆಫೀಸ್ ನಲ್ಲೂ ಕಮಾಯಿ ಮಾಡಲಿಲ್ಲ. ಹಾಗಾಗಿ ಆಮೀರ್ ಅವರಿಗೆ ಹಿನ್ನೆಡೆ ಆಯಿತು.

lal singh chaddha 1 1

ಸಿನಿಮಾ ರಿಲೀಸ್ ಗೂ ಮುನ್ನ ಟ್ರೇಲರ್ ಭಾರೀ ಸದ್ದು ಮಾಡಿತ್ತು. ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿಯೇ ಈ ಸಿನಿಮಾದ ಬಗ್ಗೆ ಸಿನಿ ಪಂಡಿತರು ಕೂಡ ತಮ್ಮದೇ ಆದ ರೀತಿಯಲ್ಲಿ ಲೆಕ್ಕಾಚಾರ ಹಾಕಿದ್ದರು. ದಾಖಲೆಯ ರೀತಿಯಲ್ಲಿ ಈ ಸಿನಿಮಾ ಹಣ ಮಾಡುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ, ಬಾಯ್ಕಾಟ್ ಈ ಸಿನಿಮಾವನ್ನು ಮಕಾಡೆ ಮಲಗಿಸಿತು. ಜನರನ್ನು ಥಿಯೇಟರ್ ಗೆ ಕರೆದುಕೊಂಡು ಬರುವಲ್ಲಿ ತೊಂದರೆ ಮಾಡಿತು. ಇದನ್ನೂ ಓದಿ: ಧ್ರುವ ಸರ್ಜಾ ಚಿತ್ರಕ್ಕೆ ಮಾಲಾಶ್ರೀ ಪುತ್ರಿ ರಾಧನಾ ರಾಮ್ ನಾಯಕಿ

lal singh chaddha 2

ಲಾಲ್ ಸಿಂಗ್ ಚಡ್ಡಾ ಸೋಲು, ಆಮೀರ್ ಅವರಿಗೆ ನೋವು ತಂದಿದೆ. ಇಂಥದ್ದೊಂದು ಸಿನಿಮಾ ಮಾಡಿದಾಗ ಜನ ಸ್ವೀಕರಿಸಲಿಲ್ಲ ಎಂದು ತಮ್ಮನ್ನು ತಾವೇ ಪ್ರಶ್ನಿಸಿಕೊಂಡಿದ್ದಾಗಿದೆ. ಈ ಎಲ್ಲ ಕಾರಣದಿಂದಾಗಿ ಆಮೀರ್ ಖಾನ್ ಸ್ವಲ್ಪ ದಿನ ಸಿನಿಮಾ ರಂಗದಿಂದಲೇ ದೂರ ಉಳಿಯುವಂತಹ ಮಾತುಗಳನ್ನು ಆಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಟನೆಯಿಂದಲೇ ದೂರ ಸರಿಯುವುದಾಗಿ ಕಾರ್ಯಕ್ರಮವೊಂದರಲ್ಲಿ ಘೋಷಿಸಿದ್ದಾರಂತೆ. ಈ ನಿರ್ಧಾರ ಆಮೀರ್ ಅಭಿಮಾನಿಗಳಿಗೆ ಭಾರೀ ನಿರಾಸೆಯನ್ನುಂಟು ಮಾಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *