ಮುಂಬೈ: ಬಾಲಿವುಡ್ ಮಿ. ಪರ್ಫೆಕ್ಟ್ ಅಮಿರ್ ಖಾನ್ ಮಗಳು ಯುವಕನಿಂದ ಮುತ್ತು ಪಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಅಮಿರ್ ಮಗಳು ಇರಾ ಖಾನ್ ತಮ್ಮ ಇನ್‍ಸ್ಟಾಗ್ರಾಂನಲ್ಲಿ ತನ್ನ ಸ್ನೇಹಿತ ಜೊತೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಅದನ್ನು ಗೆಳೆಯ ಮಿಶಾಲ್‍ನಿಗೂ ಟ್ಯಾಗ್ ಮಾಡಿದ್ದಾರೆ.
ಇರಾ ಇನ್‍ಸ್ಟಾಗ್ರಂನಲ್ಲಿ ಮಿಶಾಲ್ ಜೊತೆಯಿರುವ ಮೂರು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೂರು ಫೋಟೋಗಳಲ್ಲಿ ಒಂದು ಫೋಟೋದಲ್ಲಿ ಮಿಶಾಲ್, ಇರಾ ಹಣೆಗೆ ಮುತ್ತು ನೀಡುತ್ತಿದ್ದಾರೆ. ಈ ಫೋಟೋ ನೋಡಿದ ಅಭಿಮಾನಿಗಳು ಇಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾತನಾಡುತ್ತಿದ್ದಾರೆ.
ಮಿಶಾಲ್ ಒಬ್ಬ, ನಟ, ನಿರ್ಮಾಪಕ ಹಾಗೂ ಕಂಪೋಸರ್. ಮಿಶಾಲ್ ಕೂಡ ಇರಾ ಜೊತೆಯಿರುವ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಇರಾ ಜೊತೆ ಇರುವ ಒಂದು ಪೋಸ್ಟ್‍ಗೆ ‘ಚಾರ್ಮರ್’ ಎಂದು ಬರೆದಿದ್ದಾರೆ.
ಇರಾ ಖಾನ್, ಅಮಿರ್ ಖಾನ್‍ನ ಮೊದಲ ಪತ್ನಿ ರೀನಾ ದತ್ತ ಅವರ ಎರಡನೇ ಮಗಳು. ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡುವ ‘ಕಾಫಿ ವಿತ್ ಕರಣ್’ ಕಾರ್ಯಕ್ರಮದಲ್ಲಿ ಅಮಿರ್ ಖಾನ್ ಭಾಗವಹಿಸಿದ್ದರು. ಈ ವೇಳೆ ತಮ್ಮ ಮಗಳು ಇರಾ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ ಎಂದು ಹೇಳಿದ್ದರು.