ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರು ಕನಸಿನ ಪ್ರಾಜೆಕ್ಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ‘ಮಹಾಭಾರತ’ (Mahabharat) ಸಿನಿಮಾ ಮಾಡುವುದು ನನ್ನ ಕನಸಾಗಿತ್ತು. ಅದನ್ನು ಇದೇ ವರ್ಷ ನನಸು ಮಾಡಿಕೊಳ್ಳುತ್ತೇನೆ ಎಂದು ಆಮೀರ್ ಖಾನ್ ಹೇಳಿದ್ದಾರೆ. ಇದನ್ನೂ ಓದಿ:ಶಾ ಬಾನೋ ಸಿನಿಮಾಗೆ ಬಣ್ಣ ಹಚ್ಚಲಿದ್ದಾರೆ ಯಾಮಿ ಗೌತಮ್, ಇಮ್ರಾನ್ ಹಾಶ್ಮಿ
ರಾಮಾಯಣ ಆಯಿತು, ಈಗ ಮಹಾಭಾರತದ ಸಿನಿಮಾ ಮಾಡಲು ಬಾಲಿವುಡ್‌ನಲ್ಲಿ ತಯಾರಿ ನಡೆಯುತ್ತಿದೆ. ಆಮೀರ್ ಮಾತನಾಡಿ, ‘ಮಹಾಭಾರತ’ ನನ್ನ ದೊಡ್ಡ ಕನಸುಗಳಲ್ಲಿ ಒಂದು. ಈ ವರ್ಷ ನಾನು ಇದರ ಕೆಲಸ ಆರಂಭಿಸುತ್ತೇನೆ. ಇದನ್ನು ‘ದಿ ಲಾರ್ಡ್ ಆಫ್ ದಿ ರಿಂಗ್ಸ್’ ಮಾದರಿಯಲ್ಲಿ ಹಲವಾರು ಭಾಗಗಳಲ್ಲಿ ತರಲು ಪ್ಲ್ಯಾನ್ ಮಾಡಿದ್ದೇನೆ ಎಂದಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್ ಉಗ್ರರ ದಾಳಿ ಖಂಡಿಸಿದ ಬಾಲಿವುಡ್ ಸ್ಟಾರ್ಸ್
ಇದರ ಬರವಣಿಗೆಗೆ ಕೊಂಚ ಸಮಯ ಬೇಕಿದೆ. ಆದರೆ ಇದರಲ್ಲಿ ನಾನು ನಟಿಸುತ್ತೇನೋ ಇಲ್ಲವೋ ಖಚಿತವಿಲ್ಲ. ಆದರೆ ಪ್ರತಿಯೊಂದು ಪಾತ್ರಕ್ಕೂ ಸೂಕ್ತ ನಟರನ್ನೇ ಆಯ್ಕೆ ಮಾಡುತ್ತೇನೆ ಎಂದು ಮಹಾಭಾರತ ಸಿನಿಮಾ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದಾರೆ.
ಅಂದಹಾಗೆ, ಕಡೆಯದಾಗಿ 2022ರಲ್ಲಿ ‘ಲಾಲ್ ಸಿಂಗ್ ಚಡ್ಡಾ’ ಚಿತ್ರದಲ್ಲಿ ಆಮೀರ್ ನಟಿಸಿದ್ದರು. ಈಗ ‘ಸಿತಾರ್ ಜಮೀನ್ ಪರ್’ ಚಿತ್ರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.