BollywoodCinemaLatestMain Post

ಶಾಕಿಂಗ್‌ ನ್ಯೂಸ್ : ಸಿನಿಮಾ ರಂಗ ಬಿಡಲು ನಿರ್ಧರಿಸಿದ್ದರಂತೆ ಆಮಿರ್ ಖಾನ್

ಬಾಲಿವುಡ್ ನಟ ಆಮಿರ್ ಖಾನ್ ಶಾಕಿಂಗ್‌ ಸುದ್ದಿ ಕೊಟ್ಟಿದ್ದಾರೆ. ಕೆಲವು ತಿಂಗಳ ಹಿಂದೆ ಸಿನಿಮಾ ರಂಗವನ್ನು ಬಿಟ್ಟು ದೂರ ಸರಿಯಬೇಕು ಎನ್ನುವ ನಿರ್ಧಾರ ಮಾಡಿದ್ದರಂತೆ. ಈ ಕುರಿತಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ‘ನಾನು ಸಿನಿಮಾ ರಂಗದಿಂದ ದೂರ ಉಳಿಯಲು ನಿರ್ಧಾರ ಮಾಡಿದ್ದೆ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಿನಿಮಾರಂಗವನ್ನು ಬಿಟ್ಟು ಬಿಡಬೇಕು ಎಂದು ಆಮಿರ್ ಖಾನ್‌ ಅವರಿಗೆ ಅನಿಸಿದ್ದಕ್ಕೆ ಬಲವಾದ ಕಾರಣ ಇದೆ. ಇಷ್ಟು ವರ್ಷಗಳ ತಮ್ಮ ವೃತ್ತಿಜೀವನದ ಬಗ್ಗೆ ಅವರು ಆತ್ಮಾವಲೋಕನ ಮಾಡಿಕೊಂಡಿದ್ದಾರೆ. ಇದ್ದಕ್ಕಿದ್ದಂತೆ ಇಂಥಹ ನಿರ್ಧಾರಕ್ಕೆ ಬರಲು ಕಾರಣವೇನು ಎಂದು ಅವರೇ ವಿವರವಾಗಿ ಹೇಳಿದ್ದಾರೆ.

23ನೇ ವಯಸ್ಸಿನಲ್ಲೇ ಅವರು ಹೀರೋ ಆದವರು. ಆ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡುತ್ತ ಕೆಲಸದಲ್ಲಿ ಬ್ಯುಸಿ ಆಗಿಬಿಟ್ಟರು. ಈ ಪಯಣದಲ್ಲಿ ಅವರಿಗೆ ಮನೆ, ಸಂಸಾರ, ಹೆಂಡತಿ, ಮಕ್ಕಳ ಕಡೆಗೆ ಗಮನ ಹರಿಸಲು ಸಾಧ್ಯವಾಗಲಿಲ್ಲ. ಆ ಬಗ್ಗೆ ಅವರಿಗೆ ಈಗ ಪಶ್ಚಾತಾಪ ಕಾಣುತ್ತಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಮೊದಲ ವಿಮರ್ಶೆ : ಹೇಗಿದೆ ರಾಕಿಭಾಯ್ KGF 2 ಹವಾ

ಸಿನಿಮಾದಲ್ಲಿಯೇ ಸಮಯ ಕಳೆದುಬಿಟ್ಟೆ ಅಂತ ನನಗೆ ಅನಿಸುತ್ತದೆ. ಈ ಪಯಣದಲ್ಲಿ ನಾನು ನನ್ನ ಪ್ರೀತಿಪಾತ್ರರ ಬಗ್ಗೆ ಗಮನವೇ ನೀಡಲಿಲ್ಲ. ಅಪ್ಪ-ಅಮ್ಮ, ಸಹೋದರರು, ಮಕ್ಕಳು, ಮೊದಲ ಹೆಂಡತಿ ರೀನಾ, ಎರಡನೇ ಹೆಂಡತಿ ಕಿರಣ್ ರಾವ್, ಅತ್ತೆ-ಮಾವ ಹೀಗೆ ಯಾರಿಗೂ ಕೂಡ ನಾನು ಸಮಯ ನೀಡಲು ಸಾಧ್ಯವಾಗಲಿಲ್ಲ

ನನ್ನ ಮಗಳಿಗೆ ಈಗ 23 ವರ್ಷ ವಯಸ್ಸು. ಚಿಕ್ಕವಳಿದ್ದಾಗ ಅವಳು ನನ್ನ ತುಂಬಾನೇ ಮಿಸ್ ಮಾಡಿಕೊಂಡಿರುತ್ತಾಳೆ ಎಂಬುದು ನನಗೆ ಗೊತ್ತು. ಆಕೆಗೆ ಅವಳದ್ದೇ ಆದ ಭಾವನೆಗಳು ಇರುತ್ತವೆ. ಆ ಸಂದರ್ಭದಲ್ಲಿ ಅವಳ ಜೊತೆ ನಾನು ಇರಲಿಲ್ಲ. ಆಕೆಯ ಭಾವನೆಗಳ ಬಗ್ಗೆ ನನಗೆ ತಿಳಿದಿರಲೇ ಇಲ್ಲ. ಆದರೆ ನನ್ನ ನಿರ್ದೇಶಕರ ಕನಸು, ಭಯ, ಭರವಸೆಗಳ ಬಗ್ಗೆ ನನಗೆ ತಿಳಿದಿತ್ತು. ಹೀಗಾಗಿ ಅವರು ಸಿನಿಮಾ ದಿಂದ ದೂರವಾಗುವ ನಿರ್ಧಾರಕ್ಕೆ ಬಂದಿದ್ದೆ. ಈ ಬೇಸರವನ್ನು ಮಾಜಿ ಪತ್ನಿ ಕಿರಣ್ ಬಳಿ ಹೇಳಿಕೊಂಡಿದ್ದೆನು ಎಂದಿದ್ದಾರೆ. ಇದನ್ನೂ ಓದಿ : ಕಾಂಗ್ರೆಸ್ ಅವಧಿಯಲ್ಲಿ ನಡೆದ ಭಯೋತ್ಪಾದನೆ ತಿಳಿಯಲು ‘ದಿ ಕಾಶ್ಮೀರ್ ಫೈಲ್ಸ್’ ನೋಡಿ: ಅಮಿತ್ ಶಾ

ಆಮಿರ್ ಈ ನಿರ್ಧಾರಕ್ಕೆ ಕುಟುಂಬಸ್ಥರು ಒಪ್ಪಿಗೆ ನೀಡಲಿಲ್ಲ. ಫ್ಯಾಮಿಲಿ ಮತ್ತು ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡುವಂತೆ ಹೆಂಡತಿ-ಮಕ್ಕಳು ಸಲಹೆ ನೀಡಿದರಂತೆ.

ಕಣ್ಣೀರಿಟ್ಟಿದ್ದ ಕಿರಣ್ ರಾವ್: ನನ್ನ ನಿರ್ಧಾರ ತಿಳಿದು ಕಿರಣ್ ರಾವ್ ಅವರಿಗೆ ತೀವ್ರ ನೋವಾಗಿತ್ತು. ಕಣ್ಣೀರು ತುಂಬಿಕೊಂಡ ಅವರು ಈ ನಿರ್ಧಾರ ಬದಲಾಯಿಸುವಂತೆ ಸಲಹೆ ನೀಡಿದರು. ನಿಮ್ಮ ನರನಾಡಿಗಳಲ್ಲಿ ಸಿನಿಮಾ ಪ್ರವಹಿಸುತ್ತಿದೆ ಅಂತ ಹೇಳಿದರು ಎಂದು ಆಮಿರ್ ಖಾನ್ ಹೇಳಿದ್ದಾರೆ.

Leave a Reply

Your email address will not be published.

Back to top button