ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಕ್ಸಸ್‌ಗೆ ಶುಭಹಾರೈಸಿದ ಆಮೀರ್ ಖಾನ್

Public TV
1 Min Read
aamir khan

ಲ್ಲು ಅರ್ಜುನ್ (Allu Arjun) ನಟನೆಯ ‘ಪುಷ್ಪ 2’ (Pushpa 2) ಗಲ್ಲಾಪೆಟ್ಟಿಗೆಯಲ್ಲಿ ಗೆದ್ದು ಬೀಗಿದೆ. ಬಹುಭಾಷೆಗಳಲ್ಲಿ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಬಾಕ್ಸಾಫೀಸ್‌ನಲ್ಲಿ ಒಟ್ಟು 1760 ಕೋಟಿ ರೂ. ಗಳಿಕೆ ಮಾಡಿ ಮುನ್ನುಗ್ಗುತ್ತಿರುವ ಸಿನಿಮಾಗೆ ಆಮೀರ್ ಖಾನ್ (Aaamir Khan) ಶುಭಹಾರೈಸಿದ್ದಾರೆ. ಇದನ್ನೂ ಓದಿ:BBK 11: ಐಶ್ವರ್ಯಾ ಸಖತ್ ಆಗಿದ್ದಾಳೆ ಎಂದ ರಜತ್‌ಗೆ ಪತ್ನಿ ಕ್ಲಾಸ್

rashmika mandanna 1 3

ಬ್ಲಾಕ್ ಬಸ್ಟರ್ ಯಶಸ್ಸು ಕಂಡಿರುವ ‘ಪುಷ್ಪ 2’ಗೆ ಆಮೀರ್ ಖಾನ್ ನಿರ್ಮಾಣ ಸಂಸ್ಥೆಯಿಂದ ಅಭಿನಂದನೆಗಳು. ಈ ಯಶಸ್ಸು ಹೀಗೆ ಮುಂದುವರೆಯಲಿ ಎಂದು ಆಮೀರ್ ಖಾನ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಅದಕ್ಕೆ ‘ಪುಷ್ಪ 2’ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಕೂಡ ಆಮೀರ್‌ಗೆ ಧನ್ಯವಾದ ತಿಳಿಸಿದೆ.

ಇನ್ನೂ ಡಿ.5ರಂದು ‘ಪುಷ್ಪ 2’ ಸಿನಿಮಾ ರಿಲೀಸ್ ಆಗಿತ್ತು. ಅಲ್ಲು ಅರ್ಜುನ್‌ಗೆ ರಶ್ಮಿಕಾ ಮಂದಣ್ಣ (Rashmika Mandanna) ನಾಯಕಿಯಾಗಿ ನಟಿಸಿದರು. ಪುಷ್ಪರಾಜ್ ಮತ್ತು ಶ್ರೀವಲ್ಲಿ ಜೋಡಿ ಈ ಬಾರಿಯೂ ಬೆಳ್ಳಿಪರದೆಯಲ್ಲಿ ಮೋಡಿ ಮಾಡೋದ್ರಲ್ಲಿ ಗೆದ್ದಿದೆ. ಇದನ್ನೂ ಓದಿ:ಬೇರೇ ಹೀರೋಗಳಿಗೆ ಟಾಂಟ್ ಮಾಡಬೇಡಿ: ಸ್ಟಾರ್ಸ್‌ ಫ್ಯಾನ್ಸ್ ವಾರ್ ಬಗ್ಗೆ ಸುದೀಪ್ ರಿಯಾಕ್ಷನ್

rashmika mandanna 4

ಅಲ್ಲು ಅರ್ಜುನ್ ಜೊತೆ ರಶ್ಮಿಕಾ, ಶ್ರೀಲೀಲಾ, ಡಾಲಿ ಧನಂಜಯ, ತಾರಕ್ ಪೊನ್ನಪ್ಪ, ಜಗಪತಿ ಬಾಬು, ಅನಸೂಯ, ಫಹಾದ್ ಫಾಸಿಲ್ ಸೇರಿದಂತೆ ಅನೇಕರು ನಟಿಸಿದ್ದಾರೆ.

Share This Article