ನವದೆಹಲಿ: ವಿವೇಕ್ ಅಗ್ನಿಹೋತ್ರಿ ಅವರ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ, ಇದೀಗ ಸಿನಿಮಾವಾಗಿ ಉಳಿದಿಕೊಂಡಿಲ್ಲ. ಅದನ್ನು ರಾಜಕೀಯ ಇಚ್ಛಾಶಕ್ತಿಗೆ ಮತ್ತು ಕೋಮಿನ ನಡುವಿನ ವೈಷಮ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ ಎನ್ನುವ ಆರೋಪವಿದೆ. ಹೀಗಾಗಿ ಬಾಲಿವುಡ್ ಖಾನ್ ನಟರು ಈ ಕುರಿತು ಏನು ಹೇಳುತ್ತಾರೆ ಎನ್ನುವ ಕುತೂಹಲ ಬಿಟೌನ್‌ಗೆ ಇತ್ತು. ಈ ಕುರಿತು ನಟಿ ಕಂಗನಾ ರಣಾವತ್ ಬಹಿರಂಗವಾಗಿಯೇ ಹೇಳಿಕೆ ನೀಡಿ ‘ಬಾಲಿವುಡ್ ಏಕೆ ಮೌನವಹಿಸಿದೆ? ಈ ಸಿನಿಮಾದ ಬಗ್ಗೆ ಯಾಕೆ ಯಾರು ತುಟಿ ಬಿಚ್ಚುತ್ತಿಲ್ಲ’ ಎಂದು ಪ್ರಶ್ನೆ ಕೇಳಿದ್ದರು. ನೇರವಾಗಿ ಖಾನ್ ಗುಂಪಿಗೆ ಹೇಳದೇ, ಪರೋಕ್ಷವಾಗಿ ಶಾರೂಖ್ ಖಾನ್, ಸಲ್ಮಾನ್ ಖಾಗ್, ಆಮೀರ್ ಖಾನ್‌ಗೆ ಅವರು ಟಾಂಗ್ ಕೊಟ್ಟಿದ್ದರು. ಇದೀಗ ಈ ಸಿನಿಮಾದ ಬಗ್ಗೆ ಆಮೀರ್ ಖಾನ್ ಮೌನ ಮುರಿದಿದ್ದಾರೆ. ಈ ಚಿತ್ರವನ್ನು ಅವರು ನೋಡದೇ ಇದ್ದರೂ, ಹಾಡಿ ಹೊಗಳಿದ್ದಾರೆ.
ಕಾಶ್ಮೀರಿ ಪಂಡಿತರ ಹತ್ಯಾಕಾಂಡವನ್ನು ತೆರೆ ಮೇಲೆ ಬಿಂಬಿಸಿರುವ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಾಜಕೀಯ ತಿರುವು ಪಡೆದು ವಿವಾದಕ್ಕೆ ಸಿಲುಕಿದೆ. ಅನ್ಯ ಕೋಮಿನ ಸಮುದಾಯವನ್ನು ಸಿನಿಮಾದಲ್ಲಿ ಉಗ್ರರೆಂದೇ ಬಿಂಬಿಸಲಾಗಿದೆ ಎಂಬ ಆರೋಪವೂ ಸಿನಿಮಾದ ಮೇಲಿದೆ. ಆದರೆ ಸಿನಿಮಾ ಕುರಿತು ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಚಿತ್ರದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ರಿಯಲ್ ಸ್ಟೋರಿ : ಅಕ್ಕಿ ಡ್ರಮ್ ನಲ್ಲಿ ಕೊಲ್ಲಲ್ಪಟ್ಟ ನಿಜವಾದ ಕಾಶ್ಮೀರಿ ಪಂಡಿತ ಇವರು
Advertisement
Advertisement
ಎಸ್.ಎಸ್.ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆಮೀರ್ ಖಾನ್, ಕಾಶ್ಮೀರ್ ಫೈಲ್ಸ್ ಸಿನಿಮಾ ಕುರಿತು ಪ್ರತಿಕ್ರಿಯಿಸಿದ್ದಾರೆ. ಎಲ್ಲರೂ ಸಿನಿಮಾವನ್ನು ನೋಡಬೇಕು ಎಂದು ತಿಳಿಸಿದ್ದಾರೆ.
Advertisement
“ನಾನು ಖಂಡಿತ ಈ ಸಿನಿಮಾ ನೋಡುತ್ತೇನೆ. ಈ ಕಥೆಯು ನಮ್ಮ ಇತಿಹಾಸದ ಒಂದು ಭಾಗವಾಗಿದೆ. ಕಾಶ್ಮೀರಿ ಪಂಡಿತರಿಗೆ ಏನಾಯಿತು ಎಂಬುದನ್ನು ಚಿತ್ರಿಸಲಾಗಿದೆ. ಇದು ನಿಜಕ್ಕೂ ದುಃಖಕರ ಸಂಗತಿ. ಅಂತಹ ವಿಷಯಗಳ ಮೇಲೆ ಮೂಡಿಬರುವ ಯಾವುದೇ ಚಲನಚಿತ್ರವನ್ನು ಎಲ್ಲಾ ಭಾರತೀಯರು ನೋಡಬೇಕು” ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿವೆ ಮಾದಕ ನಟಿ ಸನ್ನಿ ಲಿಯೋನ್ ಅಭಿಮಾನಿ ಸಂಘ: ತಮಾಷೆಯಲ್ಲ, ನಿಜ
Advertisement
“ಮಾನವೀಯತೆ ಮೇಲೆ ವಿಶ್ವಾಸವಿಟ್ಟರುವ ಎಲ್ಲ ಜನರ ಭಾವನೆಗಳನ್ನು ಈ ಚಿತ್ರ ಮುಟ್ಟಿದೆ. ಆಶಯ ತುಂಬಾ ಚೆನ್ನಾಗಿದೆ. ಖಂಡಿತಾ ಸಿನಿಮಾ ನೋಡುತ್ತೇನೆ. ಸಿನಿಮಾ ಯಶಸ್ವಿಯಾಗಿರುವುದು ಖುಷಿ ತಂದಿದೆ” ಎನ್ನುವುದು ಆಮೀರ್ ಮಾತು.
1990 ರಲ್ಲಿ ಕಾಶ್ಮೀರಿ ಪಂಡಿತರ ನರಮೇಧದ ಸುತ್ತ ಹೆಣೆದಿರುವ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’. ವಿವೇಕ್ ಅಗ್ನಿಹೋತ್ರಿ ಅವರು ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಇದನ್ನೂ ಓದಿ : ತಮಿಳಲ್ಲ, ಬಾಲಿವುಡ್ ಗೆ ಹಾರಿದ ರಜನಿಕಾಂತ್ ಪುತ್ರಿ ಐಶ್ವರ್ಯಾ