‘ಲಾಲ್ ಸಿಂಗ್ ಚಡ್ಡಾ’ದಿಂದ ಆಮೀರ್ ಖಾನ್ ಕಳೆದುಕೊಂಡಿದ್ದು ಬರೋಬ್ಬರಿ 100 ಕೋಟಿ?

Public TV
1 Min Read
lal singh chaddha 2 1

ಬಾಲಿವುಡ್ ನಟ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಸೋಲುತ್ತಿದ್ದಂತೆಯೇ ಅದರ ಲೆಕ್ಕಾಚಾರಗಳು ಶುರುವಾಗಿವೆ. ಸಿನಿಮಾದ ಬಜೆಟ್, ಥಿಯೇಟರ್ ಕಲೆಕ್ಷನ್, ಓಟಿಟಿ ಮಾರಾಟ ಹೀಗೆ ಲಾಭ ಹಾನಿಯ ಎಣಿಕೆ ಪ್ರಾರಂಭವಾಗಿವೆ. ಹಾಗಾಗಿ ಈ ಸಿನಿಮಾದಿಂದ ಆಮೀರ್ ಖಾನ್ ಕಳೆದುಕೊಂಡಿದ್ದು ಎಷ್ಟು ಎನ್ನುವ ಅಂದಾಜು ಸಿಕ್ಕಿದೆ.

lal singh chaddha 4

ಲಾಲ್ ಸಿಂಗ್ ಚಡ್ಡಾ ಸಿನಿಮಾ ಅಂದುಕೊಂಡಷ್ಟು ಬಾಕ್ಸ್ ಆಫೀಸಿನಲ್ಲಿ ಗಳಿಕೆ ಮಾಡಲಿಲ್ಲ. ಬಾಯ್ಕಾಟ್ ಬೆದರಿಕೆಗೆ ಅದು ಬಳಲಿ ಬೆಂಡಾಯಿತು. ನಿರೀಕ್ಷೆ ಮಟ್ಟ ತಲುಪುವುದು ಇರಲಿ, ಹಾಕಿದ ಬಂಡವಾಳ ಕೂಡ ವಾಪಸ್ಸು ಆಗಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ನಿರ್ಮಾಪಕರಿಗೆ ಈ ಸಿನಿಮಾ ಭಾರೀ ಹಾನಿಯನ್ನುಂಟು ಮಾಡಿದೆಯಂತೆ. ಇದನ್ನೂ ಓದಿ:ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ‘ಗಂಡುಮಗ’ ಎಂದು ಹಾಡಿ ಹೊಗಳಿದ ಜಗ್ಗೇಶ್

lal singh chaddha 1

ಒಂದು ಅಂದಾಜಿನ ಪ್ರಕಾರ ಆಮೀರ್ ಖಾನ್ ಈ ಸಿನಿಮಾದಿಂದ ನೂರು ಕೋಟಿ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾ ನಿರ್ಮಾಣದಲ್ಲಿ ಆಮೀರ್ ಖಾನ್ ಕೂಡ ತೊಡಗಿಕೊಂಡಿದ್ದರಿಂದ, ಹಾಗಾಗಿ  ಈ ಪ್ರಮಾಣದಲ್ಲಿ ಹಣ ಕೈಬಿಟ್ಟು ಹೋಗಿದೆಯಂತೆ. ಲಾಲ್ ಸಿಂಗ್ ಚಡ್ಡಾ ಸಿನಿಮಾದಿಂದಾಗಿ ಆಮೀರ್ ಖಾನ್ ಅವರಿಗೆ ಅವಕಾಶಗಳು ಕೂಡ ಕೈ ತಪ್ಪುತ್ತಿವೆಯಂತೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *