ಬಾಲಿವುಡ್ ನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಚಿತ್ರ ಆಮೀರ್ ಖಾನ್ ನಟನೆಯ ಲಗಾನ್. ಈ ಸಿನಿಮಾ ರಿಲೀಸ್ ಆಗಿ 21 ವರ್ಷಗಳ ಕಳೆದಿವು. ಆಮೀರ್ ಖಾನ್ ವೃತ್ತಿ ಬದುಕಿನ ಅಪರೂಪದ ಸಿನಿಮಾ ಇದಾಗಿದ್ದು, ಅವರ ವೃತ್ತಿ ಜೀವನವನ್ನೇ ಬದಲಿಸಿತು. ಹಾಗಾಗಿ ಈ ಸಿನಿಮಾದ ಮೇಲೆ ಆಮೀರ್ ಅವರಿಗೆ ವಿಶೇಷ ಅಭಿಮಾನವಿದೆ. ಹಾಗಾಗಿ ಎರಡು ದಶಕದ ನಂತರವೂ ಆ ಸಿನಿಮಾ ಸಂಭ್ರಮವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ಆಮೀರ್.
15 ಜೂನ್ 2001ರಲ್ಲಿ ತೆರೆಕಂಡ ಲಗಾನ್ ಸಿನಿಮಾ, ಭಾರತೀಯ ಯುವಕರಲ್ಲಿ ದೇಶಪ್ರೇಮದ ಕಿಚ್ಚನ್ನು ಹೊತ್ತಿಸಿತ್ತು. ಅಶುತೋಷ್ ಗೋವಾರಿಕರ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಚಿತ್ರದಲ್ಲಿ ಆಮೀರ್ ಜೊತೆ ಗ್ರೇಸಿಂಗ್ ಮತ್ತು ರಾಚೆಲ್ ಕೂಡ ನಟಿಸಿದ್ದರು. ಈ ಸಿನಿಮಾ ಭಾರತೀಯ ಸಿನಿಮಾ ರಂಗದ ಬಹುತೇಕ ದಾಖಲೆಗಳನ್ನು ಉಡಿಸ್ ಮಾಡಿತ್ತು. ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಕಮಾಲ್ ಮಾಡಿತ್ತು. ಇಂತಹ ಸಿನಿಮಾದ ಸಕ್ಸಸ್ಗೆ ತಮ್ಮ ಮಾಜಿ ಪತಿ ರೀನಾ ದತ್ ಕಾರಣ ಎಂದಿದ್ದಾರೆ ಆಮೀರ್ ಖಾನ್. ಇದನ್ನೂ ಓದಿ: ಶಿವಣ್ಣ – ತಲೈವಾ ಸಿನಿಮಾಗೆ `ಜೈಲರ್’ ಟೈಟಲ್ ಫಿಕ್ಸ್
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಆಮೀರ್ ಖಾನ್, ‘ಸಾಮಾನ್ಯವಾಗಿ ರೀನಾ ಸಿನಿಮಾಗಳಿಂದ ದೂರವೇ ಇರುತ್ತಾರೆ. ಅವರಿಗೆ ಚಿತ್ರರಂಗದಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಸಿನಿಮಾ ಬಗ್ಗೆ ಏನೂ ಗೊತ್ತಿರಲಿಲ್ಲ. ಆದರೂ, ಕೊಟ್ಟಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಿದ್ದರು. ಈ ಗೆಲುವಿನ ಪಾಲಲ್ಲಿ ಅವರದ್ದೂ ಪಾಲು ಇದೆ ಎಂದು ಬರೆದುಕೊಂಡಿದ್ದಾರೆ.