ಬಾಲಿವುಡ್ ನಟ ಆಮೀರ್ ಖಾನ್ (Aamir Khan) ಅವರಿಗೆ ವಿಚಿತ್ರ ಆಸೆ ಇದೆಯಂತೆ. ಆ ಆಸೆಯನ್ನು ಅವರು ಕಾಮಿಡಿ ವಿತ್ ಕಪಿಲ್ ಶೋನಲ್ಲಿ (Kapil Sharma) ಹೇಳಿಕೊಂಡಿದ್ದಾರೆ. ಸಮಯದ ಪಾಲನೆ ಬಗ್ಗೆ ಸದಾ ಮಾತನಾಡುವ ಆಮೀರ್, ಈ ಕಾರ್ಯಕ್ರಮಕ್ಕೆ (Show) ಸಮಯ ಹೊಂದಿಸಿಕೊಂಡು ಭಾಗಿಯಾಗಿದ್ದಾರೆ. ಜೊತೆಗೆ ತಮ್ಮ ವಿಚಿತ್ರ ಆಸೆಯೊಂದನ್ನು ಹೇಳುವ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದ್ದಾರೆ.
ಆಮೀರ್ ಅವರಿಗೆ ಇರುವ ಆಸೆಯಂದರೆ, ಶಾರ್ಟ್ಸ್ ಧರಿಸಿಕೊಂಡು ಕಾರ್ಯಕ್ರಮದಲ್ಲಿ ಭಾಗಿಯಾಗಬೇಕು ಎನ್ನುವುದು ಆಗಿದೆ. ಆದರೆ, ಅದಕ್ಕೆ ಅವರ ಮಕ್ಕಳು ಬಿಡುವುದಿಲ್ಲವಂತೆ. ನನ್ನ ಮಕ್ಕಳು ನನ್ನ ಮಾತನ್ನು ಕೇಳೋದಿಲ್ಲ ಎಂದೂ ಅವರು ಅಳಲು ತೋಡಿಕೊಂಡಿದ್ದಾರೆ. ಜೊತೆಗೆ ಪ್ರಶಸ್ತಿ ಸಮಾರಂಭಕ್ಕೆ ತಾವು ಏಕೆ ಹೋಗುವುದಿಲ್ಲ ಎನ್ನುವುದನ್ನೂ ಹೇಳಿದ್ದಾರೆ.
ಆಮೀರ್ ಖಾನ್ ಬಾಲಿವುಡ್ ಕಂಡ ಬುದ್ದಿವಂತಹ ನಟ, ನಿರ್ಮಾಪಕ. ಎರಡು ಮದುವೆಯಾಗಿ ಇಬ್ಬರಿಗೂ ಡಿವೋರ್ಸ್ ಕೊಟ್ಟಿದ್ದರು. ಈಗಲೂ ಇಬ್ಬರ ಜೊತೆಯೂ ಬಲು ಪ್ರೀತಿಯಿಂದ ನಡೆದುಕೊಳ್ಳುತ್ತಾರೆ. ಅಗತ್ಯ ಬಿದ್ದಾಗ ಭೇಟಿ ಮಾಡುತ್ತಾರೆ. ಜೊತೆಗೆ ಮಕ್ಕಳನ್ನು ಜತನದಿಂದ ಕಾಪಾಡಿದ್ದಾರೆ. ಹಾಗಾಗಿ ಶೋನಲ್ಲಿ ಯಾವೆಲ್ಲ ವಿಚಾರಗಳನ್ನು ಅವರು ಹೇಳಿಕೊಳ್ಳಲ್ಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕು.
ಸದ್ಯ ಪ್ರೊಮೋ ಮಾತ್ರ ಬಿಡುಗಡೆಯಾಗಿದೆ. ಮುಂದಿನ ದಿನಗಳಲ್ಲಿ ಪೂರ್ತಿ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಪ್ರಸಾರವಾಗಲಿದೆ.