BollywoodCinemaLatestMain Post

ವೇಟ್ ಲಾಸ್‍ಗಾಗಿ 15 ದಿನ ಉಪವಾಸ ಮಾಡಿದ ಅಮಿರ್ ಖಾನ್ ಪುತ್ರಿ

ಮುಂಬೈ: ಬಾಲಿವುಡ್ ನಟ ಅಮಿರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ದೇಹ ಸೌಂದರ್ಯವನ್ನು ಕಪಾಡಿಕೊಳ್ಳಲು ತಾವು ಮಾಡುತ್ತಿರುವ ಸಾಹಸದ ಕುರಿತಾಗಿ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಸ್ಟಾರ್ ಮಕ್ಕಳ ಎಂದರೆ ಅಭಿಮಾನಿಗಳು ಸಖತ್ ಇಷ್ಟ ಪಡುತ್ತಾರೆ. ಅವರ ದಿನಚರಿ ಕುರಿತಾಗಿ ತಿಳಿದುಕೊಳ್ಳಲು ಆಸಕ್ತಿ ತೋರಿಸುತ್ತಾರೆ. ಏನು ಮಾಡುತ್ತಾರೆ? ಯಾವ ರೀತಿಯ ಬಟ್ಟೆ ತೊಡುತ್ತಾರೆ, ಹೀಗೆ ಪ್ರತಿ ವಿಚಾರವನ್ನೂ ಗಮನಿಸುವ ಅಭಿಮಾನಿಗಳಿಗಾಗಿ ಇರಾ ಖಾನ್ ತಮ್ಮ ದೇಹ ಸೌಂದರ್ಯದ ಕುರಿತಾಗಿ ತಿಳಿಸಿಕೊಟ್ಟಿದ್ದಾರೆ.

 

View this post on Instagram

 

A post shared by Ira Khan (@khan.ira)

ನನ್ನ ಜೀವನದ ಬಹುಪಾಲು ನಾನು ತುಂಬಾ ಆ್ಯಕ್ಟಿವ್ ಆಗಿದ್ದೇನು. ಆದರೆ ಕಳೆದ ನಾಲ್ಕೈದು ವರ್ಷಗಳಿಂದ ನನ್ನಲ್ಲಿ ಆಲಸ್ಯ ಹೊಕ್ಕಿದೆ. ನಾನು ಗೊಂದಲದಲ್ಲಿದ್ದೇನೆ. ಈ ಎಲ್ಲಾ ಕಾರಣದಿಂದ ದೇಹದ ತೂಕ 20 ಕೆ.ಜಿ. ಹೆಚ್ಚಿದೆ. ತೂಕ ಇಳಿಸಿಕೊಳ್ಳುವ ಪ್ರಯತ್ನವನ್ನು ಆರಂಭಿಸಿದ್ದೇನೆ. ನನಗೆ ಏನೆಲ್ಲ ಸಾಧ್ಯವೋ ಅದನ್ನು ಮಾಡುತ್ತಿದ್ದೇನೆ. ಹೆಚ್ಚು ಶ್ರಮ ಹಾಕುತ್ತಿದ್ದೇನೆ. ನಾನು ಇತ್ತೀಚೆಗೆ 15 ದಿನಗಳ ಕಾಲ ಉಪವಾಸ ಮಾಡಿದ್ದೆ. ತೂಕ ಇಳಿಸಿಕೊಳ್ಳೋಕೆ ಸಾಕಷ್ಟು ಶ್ರಮ ಬೇಕು ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ. ದನ್ನೂ ಓದಿ: ಜನಪ್ರಿಯ ಗಾಯಕಿ ಲತಾ ಮಂಗೇಶ್ಕರ್‌ಗೆ ಕೊರೊನಾ – ಐಸಿಯುವಿನಲ್ಲಿ ಚಿಕಿತ್ಸೆ

1986ರಲ್ಲಿ ನಟಿ ರೀನಾ ದತ್ತ ಜೊತೆ ಆಮಿರ್ ಖಾನ್ ಮೊದಲ ಮದುವೆ ಆಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಪುತ್ರ ಜುನೈದ್, ಪುತ್ರಿ ಇರಾ ಜನಿಸಿದರು. 2002ರಲ್ಲಿ ಆಮಿರ್ ಮತ್ತು ರೀನಾ ಡಿವೋರ್ಸ್ ಪಡೆದುಕೊಂಡರು. ಇಬ್ಬರ ಮಕ್ಕಳ ಜವಾಬ್ದಾರಿಯನ್ನು ರೀನಾ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ಜನವರಿ ಅಂತ್ಯಕ್ಕೆ ನಿತ್ಯ 60 ಸಾವಿರ ಪ್ರಕರಣಗಳು ಪತ್ತೆ ಸಾಧ್ಯತೆ – ದೆಹಲಿಯಲ್ಲಿ ಖಾಸಗಿ ಕಚೇರಿಗಳು ಬಂದ್

Leave a Reply

Your email address will not be published.

Back to top button