ಮುಂಬೈ: ಬಿಟೌನ್ ಸ್ಟಾರ್ ಬಾಲಿವುಡ್ ಬಾದ್‍ಶಾ ಶಾರುಕ್ ಖಾನ್ ಆಯೋಜಿಸಿದ್ದ ಪಾರ್ಟಿಯೊಂದಕ್ಕೆ ನಟ ಆಮೀರ್ ಖಾನ್ ಟಿಫನ್ ಒಯ್ದಿದ್ದ ಕಥೆಯನ್ನು ಸ್ವತಃ ತಾವೇ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.
ಹೌದು, ಮಿಸ್ಟರ್ ಪರ್ಫೆಕ್ಟ್ ಎಂದೇ ಖ್ಯಾತಿ ಪಡೆದಿರುವ ಆಮೀರ್ ಖಾನ್ ಬರೀ ಸಿನಿಮಾರಂಗದಲ್ಲಿ ಮಾತ್ರವಲ್ಲ ನಿಜ ಜೀವನದಲ್ಲೂ ಎಷ್ಟು ಪರ್ಫೆಕ್ಟ್ ಎನ್ನುವುದನ್ನು ಸಾಬೀತು ಮಾಡಿದ್ದಾರೆ. ಬಾಲಿವುಡ್ ಅಂಗಳದಲ್ಲಿ ತನ್ನದೆಯಾದಂತಹ ಚಾಪು ಮೂಡಿಸಿದ್ದ ಆಮೀರ್ ಖಾನ್ ಪೋಷಕ ಪಾತ್ರದಲ್ಲಿ ನಟಿಸಿದ್ದ ಸಿನಿಮಾ `ದಂಗಲ್’, ಈ ಚಿತ್ರಕ್ಕಾಗಿ ಬರೋಬ್ಬರಿ 30 ಕೆ.ಜಿ ತೂಕವನ್ನು ಹೆಚ್ಚಿಸಿಕೊಂಡು, ತಮ್ಮ ದೇಹವನ್ನು ತಾವು ನಿರ್ವಹಿಸುತ್ತಿದ್ದ ಪಾತ್ರಕ್ಕೆ ಒಪ್ಪುವಂತೆ ಮಾಡಿಕೊಂಡಿದ್ದರು. ಬಳಿಕ ಈ ತೂಕವನ್ನು ಇಳಿಸಲು ಸಾಕಷ್ಟು ವ್ಯಾಯಾಮ, ಡಯೆಟ್ ಅಂತ ಶುರು ಮಾಡಿದ್ದರು.
ಇದೇ ವೇಳೆ ಒಮ್ಮೆ ಶಾರುಕ್ ಖಾನ್ ಅವರು ತಮ್ಮ ಮನೆಯಲ್ಲಿ ಆಯೋಜಿಸಿದ್ದ ಪಾರ್ಟಿಗೆ ಆಮೀರ್ ಹಾಗೂ ಇತರೇ ಬಿಟೌನ್ ಗಣ್ಯರನ್ನು ಆಮಂತ್ರಿಸಿದ್ದರು. ಆಗ ಪಾರ್ಟಿಗೆ ಆಮೀರ್ ಟಿಫಿನ್ ಬಾಕ್ಸ್ ಒಯ್ದಿದ್ದರಂತೆ. ಹೌದು, ಯಾವುದೇ ಕೆಲಸವಾಗಲಿ ಆಮೀರ್ ಸಂಪೂರ್ಣ ಪರಿಶ್ರಮ ಪಡುತ್ತಾರೆ. ತಾವು ಮಾಡುವ ಕೆಲಸಕ್ಕೆ ಯಾರು ಬೆರಳು ಮಾಡಬಾರದು ಅಂತ ಎಚ್ಚರಿಕೆಯಿಂದ ಮನಸ್ಸಿಟ್ಟು ಕೆಲಸ ಮಾಡುತ್ತಾರೆ. ಈ ಪಾರ್ಟಿ ವೇಳೆ ಡಯೆಟ್‍ನಲ್ಲಿದ್ದ ಅಮೀರ್ “ನಾನು ನನ್ನ ಡಯೆಟ್‍ಗೆ ಮೋಸ ಮಾಡಲ್ಲ. ಅದಕ್ಕೆ ಮನೆಯಿಂದ ಟಿಫನ್ ತಂದಿದ್ದೆ ಎಂದು ಪಾರ್ಟಿಯಲ್ಲಿ ಹೇಳಿದ್ದೆ” ಎಂದು ಟಿಫನ್ ಬಾಕ್ಸ್ ಕಥೆಯನ್ನ ಹಂಚಿಕೊಂಡಿದ್ದಾರೆ.
ಸದ್ಯ ಈ ಟಿಫಿನ್ ಬಾಕ್ಸ್ ಕಥೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳು ಆಮೀರ್ ಅವರ ಬದ್ಧತೆಯನ್ನು ಮೆಚ್ಚಿದ್ದಾರೆ.
https://www.instagram.com/p/Bvhq-rshISS/?utm_source=ig_embed