ನವದೆಹಲಿ: ವಿರೋಧ ಪಕ್ಷಗಳ ಗದ್ದಲದ ನಡುವೆ ಮತದಾರರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ಜೋಡಣೆ ಮಸೂದೆ ಇಂದು ಲೋಕಸಭೆಯಲ್ಲಿ ಅಂಗೀಕಾರ ಸಿಕ್ಕಿದೆ.
Advertisement
ಇಂದು ಬೆಳಗ್ಗೆ ಲೋಕಸಭೆಯಲ್ಲಿ ಕೇಂದ್ರ ಕಾನೂನು ಸಚಿವ ಕಿರಣ್ ರಿಜುಜು ಚುನಾವಣಾ ಕಾನುನು(ತಿದ್ದುಪಡಿ) ಮಸೂದೆಯನ್ನು ಮಂಡಿಸಿದರು. ಈ ವೇಳೆ ಈ ಬಗ್ಗೆ ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದವು. ಬಳಿಕ ಮಧ್ಯಾಹ್ನ 2:45 ಗಂಟೆಗೆ ಲೋಕಸಭೆಯಲ್ಲಿ ಧ್ವನಿ ಮತದ ಮೂಲಕ ಮಸೂದೆಯನ್ನು ಪಾಸ್ ಮಾಡಲಾಯಿತು. ಇದನ್ನೂ ಓದಿ: ನಿಮ್ಮ ಫೋನ್‍ನಲ್ಲಿ ಆಧಾರ್ ಕಾರ್ಡ್ ಡೌನ್‍ಲೋಡ್ ಮಾಡುವುದು ಹೇಗೆ?
Advertisement
Advertisement
ಕಾಂಗ್ರೆಸ್ ಸದಸ್ಯರು ಇದರಿಂದ ವ್ಯಕ್ತಿಯ ಖಾಸಗಿ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಉಡುಪಿಯ ಇಬ್ಬರಲ್ಲಿ ಓಮಿಕ್ರಾನ್ ವೈರಸ್ ಪತ್ತೆ
Advertisement
ಮಸೂದೆಯಲ್ಲಿ ಏನಿದೆ?
ಮತದಾರರು ವೋಟರ್ ಐಡಿ ಜೊತೆಗೆ ಆಧಾರ್ ಸಂಖ್ಯೆಯನ್ನೂ ಜೋಡಿಸಬಹುದು. ಇದು ಕಡ್ಡಾಯವಲ್ಲ. ಆಧಾರ್ ಮತ್ತು ಮತದಾರರ ಚೀಟಿ ಜೋಡಣೆಯಾದರೆ ಹಲವು ಪ್ರಯೋಜನಗಳಿದ್ದು, ಮುಖ್ಯವಾಗಿ ನಕಲಿ ಮತದಾನ ಮಾಡುವುದು ತಪ್ಪಲಿದೆ.
ಮತಗಟ್ಟೆ ಅಧಿಕಾರಿಯು ಮತದಾರರ ಆಧಾರ್ ಗುರುತಿನ ಚೀಟಿ ಪಡೆದು ದಾಖಲು ಮಾಡಿಕೊಳ್ಳುತ್ತಾರೆ. ಒಮ್ಮೆ ಮತದಾರರ ಆಧಾರ್ ಕಾರ್ಡ್ ಸಂಖ್ಯೆ ದಾಖಲಾದರೆ, ಮತ್ತೊಂದು ಬೂತ್‍ಗೆ ಹೋಗಿ ನಕಲಿ ಮತದಾನ ಮಾಡಲು ಸಾಧ್ಯವಿಲ್ಲ. ಇದನ್ನೂ ಓದಿ: ಓಮಿಕ್ರಾನ್ ಆತಂಕ – ವಿದೇಶದಿಂದ ಬಂದ 17 ಜನ ಕ್ವಾರಂಟೈನ್