ನವದೆಹಲಿ: ಆಧಾರ್ ರೀತಿಯ ವಿಶಿಷ್ಟ ಗುರುತು ಸಂಖ್ಯೆಯನ್ನು ಹಸುಗಳಿಗೂ ನೀಡಲು ಹೊರಟಿರುವ ಕೇಂದ್ರದ ಪ್ರಸ್ತಾಪಕ್ಕೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಕಿಡಿ ಕಾರಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಅವರು ಆಧಾರ್ ವ್ಯವಸ್ಥೆ ಜಾರಿಗೆ ತಗಲುವ ವೆಚ್ಚವನ್ನು ಯಾರು ಭರಿಸುತ್ತಾರೆ ಎಂದು ಮೋದಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಮೋದಿಜೀ ಏನಾಯ್ತು? ಈಗ ನೀವು ಹಸುಗಳಿಗೂ ಆಧಾರ್ ಕಾರ್ಡ್ ನೀಡುತ್ತೀರಾ. ಇದಕ್ಕೆ ಎಷ್ಟು ಖರ್ಚಾಗುತ್ತದೆ? ಇದರ ಗುತ್ತಿಗೆ ಗೋ ರಕ್ಷಕರಿಗೆ ಸಿಗುತ್ತಾ ಎಂದು ಪ್ರಶ್ನಿಸಿದ್ದಾರೆ. ಈ ಆಧಾರ್ ಬಂದ ನಂತರ ಮಾಂಸ ವ್ಯಾಪಾರ ಮಾಡುವ ಮುಸ್ಲಿಮ್ ಬಾಂಧವರಿಗೆ ಗೋ ರಕ್ಷಕರಿಂದ ರಕ್ಷಣೆ ಸಿಗುತ್ತದೆ ಎಂದು ಭರವಸೆ ನೀಡುತ್ತೀರಾ ಎಂದು ಕೇಳಿದ್ದಾರೆ.
Advertisement
ಮೋದಿ ಭಕ್ತರೇ.. ಅಹಿಂಸಾತ್ಮಕವಾಗಿ ಗೋವುಗಳನ್ನು ರಕ್ಷಣೆ ಮಾಡುವುದನ್ನು ತಿಳಿದುಕೊಳ್ಳಿ. ದೇಶ ಒಡೆಯುವುದನ್ನು ನಿಲ್ಲಿಸಿ ಎಂದು ಟ್ವೀಟ್ ಮಾಡಿದ್ದಾರೆ.
Advertisement
ದೇಶಾದ್ಯಂತ ಇರುವ ಪ್ರತಿ ಹಸು ಮತ್ತು ಅದರ ಸಂತತಿಗೆ “ವಿಶಿಷ್ಟ ಗುರುತಿನ ಸಂಖ್ಯೆ’ಯನ್ನು ಕಡ್ಡಾಯಗೊಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಸೋಮವಾರ ಸುಪ್ರೀಂಗೆ ಸಲ್ಲಿಸಿತ್ತು.
Advertisement
ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಿದ್ದ ಸಮಿತಿಯ ವರದಿಯನ್ನು ಕೋರ್ಟ್ಗೆ ಒಪ್ಪಿಸಿದ ಕೇಂದ್ರ, ಹಸುಗಳ ಕಳ್ಳಸಾಗಣೆ ತಡೆಯಲು ಪ್ರತಿ ಜಿಲ್ಲೆ ಯಲ್ಲೂ ಕನಿಷ್ಠ 500 ಹಸುಗಳ ವಾಸಕ್ಕೆ ಅಗತ್ಯ ವಿರುವ ಗೋಶಾಲೆ ನಿರ್ಮಿಸಿ, ಬಿಡಾಡಿ ದನಗಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದೆ. ಅಷ್ಟೇ ಅಲ್ಲದೇ ಬಿಡಾಡಿ ದನಗಳನ್ನು ಪೋಷಿಸುವ ಜವಾಬ್ದಾರಿ ಆಯಾ ರಾಜ್ಯ ಸರ್ಕಾರಗಳದ್ದಾಗಿದೆ ಎಂದು ಹೇಳಿದೆ.
Advertisement
अब गाय भैंसों का आधार कॉर्ड बनेगा और उसको बनाने पर कितना ख़र्च आयेगा ? उसका ठेका भी शायद "गौ रक्षकों" को मिलेगा ?
— digvijaya singh (@digvijaya_28) April 25, 2017
क्या उसके बाद भी मुस्लिम पशु पालकों की "गौ रक्षकों" से सुरक्षा हो पायेगी ?
— digvijaya singh (@digvijaya_28) April 25, 2017
लेकिन मोदी भक्त कश्मीर की घटनाओं पर ऐतराज़ करते हैं और बजरंग दल और वीएचपी के कार्यकर्ताओं का समर्थन करते हैं। यह दोहरा मापदण्ड नहीं है ?
— digvijaya singh (@digvijaya_28) April 25, 2017
देश में कुछ घूमंतु जातियाँ हैं जो हिंदुओं और मूसलमानों दोनों की हैं, सदियों से पशुओं का व्यापार करती आई हैं।
— digvijaya singh (@digvijaya_28) April 25, 2017
उनके ख़िलाफ़ तथा कथित "गौ रक्षक" जो हिंसक कार्यवाही कर रहे हैं वह गौ रक्षा नहीं है जुर्म है। मोदी जी ठीक कहते हैं इनमें से ८५% गुण्डे हैं
— digvijaya singh (@digvijaya_28) April 25, 2017
क्या यह "गौ रक्षक" बूढ़े और बीमार गौ वंशों के लिये गौ शाला चलाते हैं ? सेवा करते हैं ? क्यों करेंगे ?
— digvijaya singh (@digvijaya_28) April 25, 2017
इन्हें तो गुण्डा गर्दी करनी है। मोदी भक्तों , सही गौ रक्षा अहिंसक होती है हिंसक नहीं। ज़रा समझो। देश को मत बॉंटो।
— digvijaya singh (@digvijaya_28) April 25, 2017