ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಲೇಡಿ ಪಿಎಸ್‍ಐ (Lady PSI) ಗೀತಾಂಜಲಿ ಶಿಂಧೆ ಕಿರುಕುಳ ಆರೋಪ ಹಿನ್ನೆಲೆ ಡೆತ್‍ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಯುವಕ ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾನೆ.
ಯುವಕ ತಾಯಣ್ಣ ಆತ್ಮಹತ್ಯೆ ನಿರ್ಧಾರ ಬದಲಿಸಿ ಪಿಎಸ್‍ಐ ವಿರುದ್ಧ ಡಿಐಜಿಗೆ ದೂರು ನೀಡಿದ್ದಾನೆ. ಬಳ್ಳಾರಿಯಲ್ಲಿ ಡಿಐಜಿಗೆ ದೂರು ಕೊಡಲು ತೆರಳಿದ್ದ ತಾಯಣ್ಣನನ್ನ ಪೊಲೀಸರು ವಾಪಸ್ ಸಿರವಾರಗೆ ಕರೆದುಕೊಂಡು ಬಂದಿದ್ದಾರೆ. ಇದನ್ನೂ ಓದಿ: ಲೇಡಿ PSI ಕಿರುಕುಳ ಆರೋಪ- ಡೆತ್‌ನೋಟ್ ಬರೆದಿಟ್ಟು ಯುವಕ ನಾಪತ್ತೆ
Advertisement
Advertisement
ಪೊಲೀಸರು ಯುವಕ ತಾಯಣ್ಣನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಮನೆಗೆ ಕಳುಹಿಸಿಕೊಟ್ಟಿದ್ದಾರೆ. ದಾಯಾದಿಗಳ ಜಮೀನು ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ಪಿಎಸ್‍ಐ ಕಿರುಕುಳ ನೀಡಿರುವ ಆರೋಪವಿದೆ. ಡಿಸೆಂಬರ್ 3 ರಂದು ಬೆಳಗ್ಗಿನ ಜಾವದಿಂದ ಕಾಣೆಯಾಗಿದ್ದ ಯುವಕ ತಾಯಣ್ಣ ಡಿಸೆಂಬರ್ 5 ರಂದು ಬಳ್ಳಾರಿಯಲ್ಲಿ ಪತ್ತೆಯಾಗಿದ್ದಾನೆ.
Advertisement
ಯುವಕ ನಾಪತ್ತೆ ಹಿನ್ನೆಲೆ ಸಿರವಾರ ಠಾಣೆ ಪಿಎಸ್‍ಐ ಗೀತಾಂಜಲಿ ಶಿಂಧೆ ವಿರುದ್ಧ ಈಗಾಗಲೇ ಎಫ್‍ಐಆರ್ (First Information Report) ದಾಖಲು ಮಾಡಲಾಗಿದೆ. ಯುವಕ ತಾಯಣ್ಣ ಸಹೋದರ ಬಸವಲಿಂಗ ಸಿರವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ಪಿಎಸ್‍ಐ ಕಿರುಕುಳ ಹೆಚ್ಚಾಗಿದ್ದಕ್ಕೆ ಡೆತ್ ನೋಟ್ ಬರೆದಿಟ್ಟು ಹೋಗಿದ್ದೆ, ಈಗ ಮೇಲಾಧಿಕಾರಿಗಳಿಂದ ನ್ಯಾಯಸಿಗಬಹುದು ಅನ್ನೋ ನಂಬಿಕೆಯಿದೆ ಅಂತ ತಾಯಣ್ಣ ಹೇಳಿದ್ದಾನೆ.