ಬೆಂಗಳೂರು: ಹೆತ್ತ ತಾಯಿ ಒಡವೆಯನ್ನು ತಾನೇ ಕದ್ದು ಸತ್ಯ ಹೇಳಿದ ಸ್ನೇಹಿತನನ್ನು ಕೊಂದಿರುವ ಘಟನೆ ಬೆಂಗಳೂರಿನ ಕೋಣನಕುಂಟೆಯಲ್ಲಿ (Konanakunte) ನಡೆದಿದೆ.
ರಾಹುಲ್ ಕೊಲೆಯಾದ ಯುವಕ. ಪ್ರೀತಿ ಕೊಲೆ ಆರೋಪಿ. ಇವರಿಬ್ಬರೂ ಸ್ನೇಹಿತರು. ಒಬ್ಬ ಇಂಜಿನಿಯರಿಂಗ್ ಓದುತ್ತಿದ್ರೆ, ಮತ್ತೊಬ್ಬ ಪಿಯುಸಿ ಡ್ರಾಪ್‌ಔಟ್ ಆಗಿದ್ದ. ಕೋಣನಕುಂಟೆಯ ಕೃಷ್ಷಪ್ಪ ಲೇಔಟ್‌ನಲ್ಲಿ ಪ್ರೀತಂ ಮನೆಯಿದೆ. ಇಲ್ಲಿಗೆ ಪ್ರತಿ ದಿನ ರಾಹುಲ್ ಬರ್ತಿದ್ದ. ಇಬ್ಬರೂ ಜೊತೆಯಲ್ಲಿ ಊಟ ಮಾಡ್ತಿದ್ರು, ಕಾಲ ಕಳೆಯುತ್ತಿದ್ದರು. 25 ರಂದು ಮನೆಯಲ್ಲಿ ಪ್ರೀತಂನ ತಾಯಿಯ ಚಿನ್ನದ ಒಡವೆಗಳು ಕಳ್ಳತನವಾಗಿದೆ. ಮನೆಯಲ್ಲಿ ಎಷ್ಟೇ ಹುಡುಕಿದರೂ ಸಿಕ್ಕಿರಲಿಲ್ಲ. ಇದನ್ನೂ ಓದಿ: ರಸ್ತೆಯಲ್ಲಿ ಆಟವಾಡುತ್ತಿದ್ದ ಬಾಲಕಿಗೆ ಕಾರು ಡಿಕ್ಕಿ – ಅಪ್ರಾಪ್ತ ಚಾಲಕನಿಗೆ ಸ್ಥಳೀಯರಿಂದ ಧರ್ಮದೇಟು
ಇಬ್ಬರು ಕೂಡ ಒಬ್ಬರ ಮೇಲೆ ಒಬ್ಬರು ಹೇಳಿದ್ದಾರೆ. ಆದರೆ, ಪ್ರೀತಂನ ಬ್ಯಾಗ್‌ನಲ್ಲಿ ಚಿನ್ನದ ಒಡವೆಗಳನ್ನು ನೋಡಿದ ರಾಹುಲ್, ಅವರ ತಾಯಿಯ ಬಳಿ ಹೇಳಿದ್ದಾನೆ. ಇದರಿಂದ ಸಿಟ್ಟಾದ ಪ್ರೀತಂ ನಿನ್ನ ಬಳಿ ಮಾತನಾಡಬೇಕು ಎಂದು ರಾಹುಲ್‌ನ ಕರೆಸಿಕೊಂಡು ಜಗಳ ಮಾಡಿ ಚಾಕುವಿನಿಂದ ಇರಿದಿದ್ದಾನೆ. ಜೊತೆಯಲ್ಲಿ ಬಂದಿದ್ದ ಸ್ನೇಹಿತರು ಗಾಯಾಳುವನ್ನು ಮಣಿಪಾಲ ಆಸ್ಪತ್ರೆಗೆ ಸೇರಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೋಣನಕುಂಟೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡದಿದ್ದಾರೆ.
ತನ್ನ ಮನೆಯಲ್ಲಿ ತಾನೇ ಒಡವೆಗಳನ್ನು ಕಳ್ಳತನ ಮಾಡಿದ್ದ ಪ್ರೀತಂ ಸಿಕ್ಕಿ ಹಾಕಿಕೊಂಡಿದ್ದಲ್ಲದೇ, ಈ ವಿಚಾರವನ್ನು ಅಮ್ಮನ ಬಳಿ ಮತ್ತು ಸ್ನೇಹಿತರ ಬಳಿ ಹೇಳಿ ಮರ್ಯಾದೆ ತೆಗೆದಿದ್ದಾನೆ ಎಂದು ಕೋಪಗೊಂಡು ರಾಹುಲ್‌ನ ಕೊಲೆ ಮಾಡಿದ್ದಾನೆ. ಇದನ್ನೂ ಓದಿ: ಮಂಡ್ಯ| ಅಲಂಕಾರಿಕ ಗಿಡ ಅಂತ ಮನೆ ಮುಂದೆಯೇ ಗಾಂಜಾ ಬೆಳೆದ ಭೂಪ
 


 
		 
		 
		 
		 
		
 
		 
		 
		