ಬಾಗಲಕೋಟೆ: ಯುಕೆಪಿ ಯೋಜನೆ ಆಸ್ತಿ ಪರಿಹಾರ ವಿಚಾರಕ್ಕೆ ಸಂಬಂಧಿಸಿದಂತೆ ತನಗೂ ಪರಿಹಾರದ ಪಾಲು ಬರಬೇಕು ಎಂದು ತಮ್ಮನೊಂದಿಗೆ ಅಕ್ಕ ಹಾಗೂ ಆಕೆಯ ಪತಿ ಜಗಳ ತೆಗೆದು ಹತ್ಯೆ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.
ಇಲ್ಲಿನ ನವನಗರದ ಸೆಕ್ಟರ್ ನಂಬರ್ 63ರಲ್ಲಿ ಘಟನೆ ನಡೆದಿದೆ. ವೀರೇಶ್ ಹಡಗಲಿಮಠ (24) ಕೊಲೆಯಾದ ಯುವಕ. ಇದನ್ನೂ ಓದಿ: ಏಕ್ ಲವ್ ಯಾ ಸಿನಿಮಾ ತಂಡದಿಂದ ಅಪ್ಪುಗೆ ಅವಮಾನ- ಶಾಂಪೇನ್ ಚಿಮ್ಮಿಸಿ ಸಂಭ್ರಮ
ಅಕ್ಕ ಮಧುಶ್ರೀಯನ್ನು ಬೆಳಗಾವಿಯ ಅವದೂತ ಎಂಬಾತನಿಗೆ ಮದುವೆ ಮಾಡಿಕೊಡಲಾಗಿತ್ತು. ಬಾಮೈದುನನಿಗೆ ಬಾವ ಅವದೂತ ಹಾಗೂ ಸಹಚರರು ಸೇರಿ ಚಾಕುವಿನಿಂದ ಇರಿದಿದ್ದಾರೆ. ಅಕ್ಕ ಮಧುಶ್ರೀ ಹಾಗೂ ವೀರೇಶ್ ಹಡಗಲಿಮಠ ನಡುವೆ ಪರಿಹಾರ ಹಣಕ್ಕಾಗಿ ಮೇಲಿಂದ ಮೇಲೆ ಜಗಳ ನಡೆಯುತ್ತಿತ್ತು. ಮುಳುಗಡೆ ಪರಿಹಾರ 30 ಲಕ್ಷ ರೂ. ಬಂದಿದ್ದು, ಅದರಲ್ಲಿ ನಮಗೂ ಪಾಲು ಕೊಡಬೇಕೆಂದು ಅಕ್ಕ ಪಟ್ಟು ಹಿಡಿದು ಗಲಾಟೆ ತೆಗೆದಿದ್ದರು. ಆದರೆ ನಿನ್ನೆ ಸಂಜೆ ಇದೇ ವಿಚಾರಕ್ಕೆ ಶುರುವಾದ ಜಗಳ ತಮ್ಮನ ಕೊಲೆಯಲ್ಲಿ ಅಂತ್ಯವಾಗಿದೆ. ಇದನ್ನೂ ಓದಿ: ಅಪ್ಪುಗೆ ಶ್ರದ್ಧಾಂಜಲಿ ಸಲ್ಲಿಸಲು ಸೈಕಲ್‍ನಲ್ಲಿ ಬೆಂಗಳೂರಿಗೆ ಜಾಥಾ ಹೊರಟ ಅಭಿಮಾನಿ
ಸ್ಥಳಕ್ಕೆ ಬಾಗಲಕೋಟೆಯ ನವನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.