– ಎತ್ತಿನ ಬಂಡಿಯಲ್ಲಿ ನವ ವಧುವರನ ಮೆರವಣಿಗೆ
ಹುಬ್ಬಳ್ಳಿ: ಮದುವೆ (Marriage) ಅಂದ್ರೆ ಸಡಗರ, ಸಂಭ್ರಮ, ಖುಷಿ, ಮೋಜು… ಹಿಂದೆಲ್ಲಾ ಹಳ್ಳಿಗಳಲ್ಲಿ ಮದುವೆ ಅಂದ್ರೆ ಅದೊಂದು ಊರ ಹಬ್ಬದಂತಿತ್ತು. ವಾರಗಟ್ಟಲೇ ಬಂದು ಬಳಗ ಮನೆಯಲ್ಲಿ ಕೂಡಿಕೊಂಡು, ಊರಿನವರಿಗೆಲ್ಲಾ ಊಟ ಹಾಕಿ ಖುಷಿಪಡುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಮದುವೆ ಎನ್ನುತ್ತಿದ್ದಂತೆ ಡಿಜೆ ಸಾಂಗು, ಬ್ರೇಕ್ ಡ್ಯಾನ್ಸು ಕಾಮನ್ ಆಗಿಬಿಟ್ಟಿದೆ.
Advertisement
ಈ ಆಧುನಿಕ ಆಡಂಬರಗಳ ನಡುವೆಯೂ ಹಳೇ ಸಂಪ್ರದಾಯವನ್ನೇ ಮರೆತು ಬಿಟ್ಟಿದ್ದೇವೆ. ಆದರೆ ಇಲ್ಲೊಬ್ಬ ಯುವ ರೈತ (Youth Farmer) ತನ್ನ ಮದುವೆಯನ್ನು ದಶಕಗಳ ಹಿಂದಿನ ಸಂಪ್ರದಾಯದಂತೆ ಮಾಡಿಕೊಂಡಿದ್ದಾನೆ. ಇದನ್ನೂ ಓದಿ: 100 ಯೂನಿಟ್ ವಿದ್ಯುತ್ ಫ್ರೀ – ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಘೋಷಣೆ
Advertisement
Advertisement
ಹೌದು.. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಪ್ರವೀಣ್ ಹಾಗೂ ಗದಗ ಜಿಲ್ಲೆಯ ಅಂತೂರ ಬೆಂತೂರ ಗ್ರಾಮದ ವಿದ್ಯಾ ನವಜೋಡಿ ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಹಿಂದಿನ ದಿನ ರಾತ್ರಿ ನವ ವಧುವರರನ್ನು, ಸಿಂಗರಿಸಿದ ಚಕ್ಕಡಿ, ಎತ್ತುಗಳ ಬಂಡಿಯ ಮೇಲೆ ಊರು ತುಂಬಾ ಮೆರವಣಿಗೆ ಮಾಡಿಸಿದ್ದಾರೆ. ಇದನ್ನೂ ಓದಿ: ದೇಶದಲ್ಲೇ ಅತ್ಯುತ್ತಮವಾದ ಕಾನೂನು ವ್ಯವಸ್ಥೆ ಕೇರಳದಲ್ಲಿದೆ – ಪಿಣರಾಯಿ ವಿಜಯನ್
Advertisement
ಪ್ರವೀಣ್ ರೈತನ ಮಗನಾಗಿದ್ದು, ಆಧುನಿಕತೆಯ ಡಿಜೆ, ಡ್ಯಾನ್ಸ್ ಬಿಟ್ಟು ಹಳೆಯ ಸಂಪ್ರದಾಯ ನೆನಪಿಸುವ ನಿಟ್ಟಿನಲ್ಲಿ, ಈ ಕಾರ್ಯಕ್ಕೆ ಮುಂದಾಗಿದ್ದಾನೆ. ಯುವಕನ ಈ ಚಿಂತನೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.