ಚಿಕ್ಕಬಳ್ಳಾಪುರ: ತನ್ನ ಪ್ರಿಯತಮೆ ಬೇರೊಬ್ಬನೊಂದಿಗೆ ಮದುವೆಯಾಗುತ್ತಿದ್ದಾಳೆಂದು ಕಲ್ಯಾಣ ಮಂಟಪಕ್ಕೆ ನುಗ್ಗಿ ಪಾಗಲ್ ಪ್ರೇಮಿಯೊಬ್ಬ ರಂಪಾಟ ಮಾಡಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಮುಂದಾದ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.
ನಿತೀಶ್ ಎಂಬಾತ ಮದುವೆ ಮಂಟಪದಲ್ಲಿ ಗಲಾಟೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದಾತ. ಈತ ಮೂಲತಃ ಬೆಂಗಳೂರಿನ ಗೋರಿಪಾಳ್ಯದವನು. ಬುಧವಾರ ರಾತ್ರಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀಕ್ಷೇತ್ರ ಘಾಟಿ ಸುಬ್ರಮಣ್ಯಕ್ಕೆ ಬಂದಿದ್ದಾನೆ. ಜತೆಗೆ ಕ್ಷೇತ್ರಕ್ಕೆ ಬಂದವನೆ ಸೀದಾ ದೇವಸ್ಥಾನದ ಪಕ್ಕದಲಿರುವ ಖಾಸಗಿ ಕಲ್ಯಾಣ ಮಂಟಪಕ್ಕೆ ತೆರಳಿದ್ದು ಎಲ್ಲರೂ ಮದುವೆಗೆ ಬಂದವನು ಅಂತಲೆ ಅಂದುಕೊಂಡಿದ್ದಾರೆ. ಆದ್ರೆ ಅಷ್ಟರಲ್ಲೇ ನೋಡ ನೋಡ್ತಿದ್ದಂತೆ ಯುವತಿಯ ವಿರುದ್ದ ಕೂಗಾಡಿದ ಪಾಗಲ್ ಪ್ರೇಮಿ ತನನ್ನ ಪ್ರೀತಿಸಿ ಬೇರೊಬ್ಬನನ್ನ ಮದುವೆಯಾಗ್ತಿದ್ದಿಯಾ ಅಂತ ಗಲಾಟೆ ಮಾಡಿದ್ದಾನೆ. ಇದನ್ನೂ ಓದಿ: ಅವಳ ಜೊತೆ 3 ದಿನ, ಇವಳ ಜೊತೆ 3 ದಿನ, ಭಾನುವಾರ ರಜೆ – ಗಂಡನೊಂದಿಗೆ ಹೆಂಡತಿಯರ `ಅಗ್ರಿಮೆಂಟ್’
ಈ ವೇಳೆ ಕಲ್ಯಾಣ ಮಂಟಪದಲ್ಲಿದ್ದ ಯುವತಿಯ ಸಂಬಂಧಿಕರು ಯುವಕನನ್ನ ಥಳಿಸಿದ್ದು, ನಂತರ ಕಲ್ಯಾಣ ಮಂಟಪದಿಂದ ಹೊರಗೆ ಹಾಕಿದ್ದಾರೆ. ಈ ವೇಳೆ ಮತ್ತದೇ ವಿಚಾರಕ್ಕೆ ಯುವಕ ಮತ್ತು ಯುವತಿಯ ಕುಟುಂಬಸ್ಥರ ನಡುವೆ ಗಲಾಟೆ ನಡೆದಿದ್ದು, ಯುವತಿಗಾಗಿ ಯುವಕನೇ ಬ್ಲೇಡ್‌ನಿಂದ ಕುತ್ತಿಗೆ ಕೊಯ್ದುಕೊಂಡಿದ್ದಾನೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಪ್ರಕರಣ ಏನು?
ಪಾಗಲ್ ಪ್ರೇಮಿ ನಿತೇಶ್ ಮತ್ತು ನವವಧು ಇಬ್ಬರೂ ಶಾಲೆಯಲ್ಲಿ ಓದುವಾಗಿನಿಂದಲೂ ಸ್ನೇಹಿತರು. ಹಳೆ ಫ್ರೆಂಡ್ಸ್ ವಾಟ್ಸಪ್ ಗ್ರೂಪ್ ಮಾಡಿದಾಗ ಮತ್ತೆ ಸ್ನೇಹವಾಗಿ ಸುತ್ತಾಡಿದ್ದರಂತೆ. ಈ ವೇಳೆ ಇಬ್ಬರ ನಡುವೆ ಪ್ರೀತಿಯಿತ್ತು ಎನ್ನಲಾಗಿದೆ. ಆದರೆ ಯುವಕನನ್ನ ಮದುವೆಯಾಗಲು ಯುವತಿ ನಿರಾಕರಿಸಿದ್ದಳು ಅಂತಾ ಹಲವು ಭಾರಿ ಮನೆ ಬಳಿ ಹೋಗಿ ಯುವಕ ಗಲಾಟೆ ಮಾಡಿದ್ದ. ಈ ಬಗ್ಗೆ ಯುವತಿ ಹಾಗೂ ಆಕೆಯ ಪೋಷಕರು ಗೋರಿಪಾಳ್ಯ ಠಾಣೆಗೆ ದೂರು ಸಹ ನೀಡಿದ್ದರು. ಇಷ್ಟೆಲ್ಲ ಆದರೂ ಬಿಡದ ಪಾಗಲ್ ಪ್ರೇಮಿ ಬುಧವಾರ ಸೀದ ಮದುವೆ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಇದನ್ನೂ ಓದಿ: ಚೀತಾ ಹೆಲಿಕಾಪ್ಟರ್ ಪತನ – ಭಾರತೀಯ ಸೇನೆಯ ಇಬ್ಬರು ಪೈಲಟ್‌ಗಳು ಹುತಾತ್ಮ
ಯುವಕನ ಗಲಾಟೆಯಿಂದ ಬೆಚ್ಚಿಬಿದ್ದ ವರನ ಕಡೆಯವರು ಮದುವೆಯನ್ನ ರದ್ದುಗೊಳಿಸಿಕೊಂಡು ವಾಪಸ್ ಹೋಗಿದ್ದಾರೆ. ಮದುವೆ ಮನೆ ಬಳಿಗೆ ಬಂದಿದ್ದ ಪಾಗಲ್ ಪ್ರೇಮಿ ಮೇಲೆ ಯುವತಿಯ ಕಡೆಯವರು ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಯುವಕನ ಹೇಳಿಕೆ ಆಧಾರಿಸಿ ದೊಡ್ಡಬಳ್ಳಾಪುರ ಪೊಲೀಸರು ಯುವತಿಯ ಸಂಬಂಧಿಕರ ಮೇಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕತ್ತು ಕೊಯ್ದುಕೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.