ಚಿತ್ರದುರ್ಗ: ಭಾರೀ ಮಳೆಯಿಂದಾಗಿ ಭರ್ತಿಯಾಗಿದ್ದ ಜಲಾಶಯದಲ್ಲಿ ಈಜಲು ತೆರಳಿದ್ದ ಯುವಕನೊಬ್ಬ ನೀರುಪಾಲಾಗಿರುವ ಘಟನೆ ಜವನಗೊಂಡನಹಳ್ಳಿಯಲ್ಲಿ ನಡೆದಿದೆ.
Advertisement
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಜವನಗೊಂಡನಹಳ್ಳಿ ಬಳಿ ಇರುವ ಗಾಯತ್ರಿ ಜಲಾಶಯದಲ್ಲಿ ಭಾನುವಾರ ಮಧ್ಯಾಹ್ನ ಈಜಲು ತೆರಳಿದ್ದ ಜವನಗೊಂಡನಹಳ್ಳಿಯ ಕೆ.ಹೆಚ್ ಬಡಾವಣೆಯ ನಿವಾಸಿ ಸಲ್ಮಾನ್ (24) ನೀರುಪಾಲಾದ ಯುವಕ. ಇದನ್ನೂ ಓದಿ: ರಾಷ್ಟ್ರದಲ್ಲಿಯೇ ಚುನಾವಣೆಗೆ ಕುಟುಂಬದವರೇ ಹೆಚ್ಚು ಮಂದಿ ಸ್ಪರ್ಧಿಸಿರುವ ಪಕ್ಷ ಜೆಡಿಎಸ್: ಕೆ.ಎಸ್.ಈಶ್ವರಪ್ಪ
Advertisement
ಸಂಪೂರ್ಣ ಭರ್ತಿಯಾಗಿದ್ದ ಜಲಾಶಯದಲ್ಲಿ ನೀರು ರಭಸವಾಗಿ ಹರಿಯುತ್ತಿತ್ತು. ಈ ವೇಳೆ ಜಲಾಶಯಕ್ಕೆ ಈಜಲು ಧುಮುಕಿರುವ ಸಲ್ಮಾನ್ ನೀರಿನಲ್ಲಿ ಮುಳುಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ಧಾವಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ಸತತ ಒಂದು ಗಂಟೆ ಕಾಲ ಕಾರ್ಯಾಚರಣೆ ನಡೆಸಿದರು. ಇದನ್ನೂ ಓದಿ: ತಂಗಿಯ ಗಂಡನ ಜೊತೆಗೆ ಅಕ್ಕನ ಅನೈತಿಕ ಸಂಬಂಧ – ಆಡಿಯೋ ಲೀಕ್
Advertisement
Advertisement
ದೋಣಿ ಸಹಾಯದಿಂದ ಕಾರ್ಯಾಚರಣೆ ನಡೆಸಿದ ಸಿಬ್ಬಂದಿ ಮೃತದೇಹವನ್ನು ಹೊರ ತೆಗೆದಿದ್ದಾರೆ. ಮೃತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಜಿಲ್ಲಾಡಳಿತದಿಂದ ನೀರಿಗಿಳಿಯದಂತೆ ಸೂಚನೆ ನೀಡಿದ್ದರೂ ಜಿಲ್ಲೆಯಲ್ಲಿ ಯುವಕ ನೀರು ಪಾಲಾಗಿದ್ದಾನೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಸಿಪಿಐ ರಾಘವೇಂದ್ರ ಭೇಟಿ ನೀಡಿ ಪರಿಶೀಲಿಸಿದರು.