ಶಿವಮೊಗ್ಗ: ಕೆರೆಯ ಮಧ್ಯದಲ್ಲಿ ಸಿಲುಕಿದ್ದ ಪಕ್ಷಿಯನ್ನು ರಕ್ಷಿಸಲು ಹೋಗಿ ಯುವಕ ಮೃತಪಟ್ಟರುವ ಘಟನೆ ಇಲ್ಲಿನ ಬೊಮ್ಮನಕಟ್ಟೆ ಕೆರೆಯಲ್ಲಿ ನಡೆದಿದೆ.
ಮೃತ ಯುವಕನನ್ನು ಮಹದೇವ (23) ಎಂದು ಗುರುತಿಸಲಾಗಿದೆ.
ಕೆರೆಯ ಸಮೀಪ ಹೋಗುತ್ತಿದ್ದ ಯುವಕ ಮಹದೇವ ಕೆರೆಯ ಮಧ್ಯದಲ್ಲಿ ಪಕ್ಷಿಯೊಂದು ಸಿಲುಕಿಕೊಂಡಿರುವುದನ್ನು ಗಮನಿಸಿದ್ದಾನೆ. ತಕ್ಷಣವೇ ತನ್ನಿಬ್ಬರು ಸ್ನೇಹಿತರ ಸಹಾಯದೊಂದಿಗೆ ಕೆರೆಗೆ ಇಳಿದಿದ್ದಾನೆ. ಆದರೆ ಕೆರೆಯಲ್ಲಿ ಹೂಳು ತುಂಬಿಕೊಂಡಿದ್ದ ಹಿನ್ನೆಲೆಯಲ್ಲಿ ಮಹದೇವನ ಸ್ನೇಹಿತರು ನೀರಿಗಿಳಿಯಲು ಹಿಂಜರಿದಿದ್ದಾರೆ. ಆದರೆ ಮಹದೇವ ಪಕ್ಷಿಯನ್ನು ರಕ್ಚಿಸಲು ಮುಂದಾಗಿದ್ದಾನೆ. ಈ ವೇಳೆ ಕೆರೆಯಲ್ಲಿ ಸಿಲುಕಿಕೊಂಡು ಮೃತಪಟ್ಟಿದ್ದಾನೆ. ಇದನ್ನೂ ಓದಿ: ಇತಿಹಾಸ ಬರೆದ ಪವರ್ ಸ್ಟಾರ್ ಪುಣ್ಯಸ್ಮರಣೆ- ದಾಖಲೆ ಪ್ರಮಾಣದಲ್ಲಿ ನೇತ್ರದಾನಕ್ಕೆ ಅರ್ಜಿ
ಸ್ನೇಹಿತ ಮುಳುಗುತ್ತಿರುವುದನ್ನು ಗಮನಿಸಿದ ಸ್ನೇಹಿತರು ಸ್ಥಳದಲ್ಲಿದ್ದ ಸೀರೆ ಹಾಗೂ ಹಗ್ಗ ತಂದು ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದರೆ ಎಷ್ಟೇ ಪ್ರಯತ್ನಪಟ್ಟರು ಮಹದೇವ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ತೆಲಂಗಾಣ: ಊಟ ಮುಗಿಸಿ ಬರುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಯಾದಗಿರಿಯ ಯುವಕರಿಬ್ಬರು ಸಾವು!
ಘಟನಾ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿ ಯುವಕನ ಮೃತ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನೆ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.