ಕಾರವಾರ: ಸ್ನೇಹಿತರೊಂದಿಗೆ ಈಜಲು ಹೋಗಿ ನೀರು ಪಾಲಾಗಿದ್ದ ಯುವಕ ಶವವಾಗಿ ಪತ್ತೆಯಾದ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲ ತಾಲೂಕಿನ ಕೈಗಡಿ ಬ್ರಿಡ್ಜ್ ಬಳಿ ನಡೆದಿದೆ.
ಬುಧವಾರ ಕೈಗಡಿ ಬ್ರಿಡ್ಜ್ ಸಮೀಪ ಪ್ರವಾಸಕ್ಕೆ ಬಂದಿದ್ದ ಆರು ಯುವಕರ ತಂಡ ನೀರಿನಲ್ಲಿ ಇಳಿದಾಗ ಅಂಕೋಲ ತಾಲೂಕಿನ ಸಬಗೇರಿಯ ಸಾಗರ್ ದೇವಾಡಿಗ ನೀರಿನಲ್ಲಿ ಮುಳಗಿ ತೇಲಿಹೋಗಿದ್ದ. ಈತನ ಶೋಧ ಕಾರ್ಯಕ್ಕೆ ಪೊಲೀಸರು, ಅರಣ್ಯ ಇಲಾಖೆ, ಅಗ್ನಿಶಾಮಕ ದಳ ಅವಿರತ ಪ್ರಯತ್ನ ನಡೆಸಿದ್ದರು.
ಇಂದು ಕಾಣೆಯಾದ ಅಣತಿ ದೂರದಲ್ಲಿಯೇ ಯುವಕನ ಶವವನ್ನು ಕಾರ್ಯಾಚರಣೆಯಲ್ಲಿ ಭಾಗಿಯಾದ ಕೈಗಡಿ ನಿವಾಸಿಗಳಾದ ಗಣಪ ಸಿದ್ದಿ, ರಾಮ ಸಿದ್ದಿ, ವೆಂಕಸಿದ್ದಿ ಹಾಗೂ ನಾರಾಯಣ ಸಿದ್ದಿ ಎಂಬವರು ಪತ್ತೆ ಮಾಡಿ ಹೊರತಂದಿದ್ದಾರೆ. ಘಟನೆ ಸಂಬಂಧ ಅಂಕೋಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.