ಸಲಿಂಗಕಾಮಿ ಗೆಳೆಯನಿಗಾಗಿ ದೊಡ್ಡಮ್ಮನ ಮನೆಯಲ್ಲೇ ಕಳ್ಳತನ ಮಾಡಿದ್ದ ದತ್ತು ಪುತ್ರ ಅರೆಸ್ಟ್

Public TV
1 Min Read
pratham accused

ಬೆಂಗಳೂರು: ಸಲಿಂಗಕಾಮಿ ಗೆಳೆಯನಿಗಾಗಿ ದೊಡ್ಡಮ್ಮನ ಮನೆಗೆ ಕನ್ನ ಹಾಕಿ ಚಿನ್ನಾಭರಣ ದೋಚಿದ್ದ ದತ್ತು ಪುತ್ರನನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.

ಪ್ರಥಮ್ ಬಂಧಿತ ಆರೋಪಿ. ದತ್ತು ಪಡೆದು ಸಾಕಿದ್ದ ಮಗನಿಂದಲೇ ದೊಡ್ಡಮ್ಮನ ಮನೆಗೆ ಕನ್ನ ಹಾಕಲಾಗಿದೆ. ಹೊಸಕೆರೆಹಳ್ಳಿಯ ಡಾಕ್ಟರ್ ಶಾಂತಿಯವರ ಕುಟುಂಬ ಮುಂಬೈಗೆ ಹೋಗಿದ್ದಾಗ ಚಿನ್ನಾಭರಣ ಕಳ್ಳತನವಾಗಿತ್ತು. ಈ ಬಗ್ಗೆ ಗಿರಿನಗರ ಪೊಲೀಸ್ ಠಾಣೆಗೆ ಡಾಕ್ಟರ್ ಶಾಂತಿ ದೂರು ನೀಡಿದ್ದರು.

ಡಾಕ್ಟರ್ ತಂಗಿ ಮಗ ಬಂದು ಹೋಗಿದ್ದ ಬಗ್ಗೆ ಅನುಮಾನಗೊಂಡ ಪೊಲೀಸರಿಗೆ, ಏಕಾಏಕಿ ಪ್ರಥಮ್ ಅಕೌಂಟ್‌ಗೆ ಹಣ ಬಂದಿರೋದು ಗೊತ್ತಾಗಿತ್ತು. ವಿಚಾರಣೆ ವೇಳೆ ಆರೋಪಿ ತಾನೇ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ. ಕಳ್ಳತನವಾದ ಮನೆ ಮಾಲೀಕೆ ಡಾಕ್ಟರ್ ಶಾಂತಿಯ ತಂಗಿ ಮಗನಾಗಿದ್ದ ಪ್ರಥಮ್.‌ ಮಕ್ಕಳು ಇಲ್ಲ ಅಂತ ಪ್ರಥಮ್‌ನನ್ನ ದತ್ತು ಪಡೆದು ಡಾಕ್ಟರ್ ಶಾಂತಿ ತಂಗಿ ಸಾಕಿದ್ದರು. ಸ್ವಂತ ಮಗನಂತೆ ಚೆನ್ನಾಗಿ ಸಾಕಿ ಬಿಬಿಎ ಸಹ ಓದಿಸಿದ್ದರು.

ಆಗಾಗ ದೊಡ್ಡಮ್ಮನ ಮನೆಗೆ ಹೋಗಿ ಬರುತ್ತಿದ್ದ ಆರೋಪಿ ಪ್ರಥಮ್ ಸಲಿಂಗಕಾಮಿಯಾಗಿದ್ದ. ಪ್ರಥಮ್ ತನ್ನ ಬಾಯ್‌ಫ್ರೆಂಡ್‌ಗಾಗಿ ದೊಡ್ಡಮ್ಮನ ಮನೆಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಬಂಧಿತ ಆರೋಪಿಯಿಂದ 258 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿ ಚೆನ್ನೈನಲ್ಲಿದ್ದ ತನ್ನ ಬಾಯ್‌ಫ್ರೆಂಡ್‌ಗಾಗಿ ಕಳ್ಳತನ ಮಾಡಿದ್ದ. ಮೊದಲು ಬ್ಯಾಂಕ್ ಮ್ಯಾನೇಜರ್ ಆಗಿದ್ದ ಆರೋಪಿ, ನಂತರ ಬಾಯ್‌ಫ್ರೆಂಡ್‌ಗಾಗಿ ಕೆಲಸ ಬಿಟ್ಟು ಚೆನ್ನೈನಲ್ಲಿ ಕೆಲಸ ಹುಡುಕಿದ್ದ. ಕದ್ದ ಚಿನ್ನ ಮಾರಾಟ ಮಾಡಿ ಹಲವು ಬಾರಿ ವಿಮಾನದಲ್ಲಿ ಓಡಾಡಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.

Share This Article