ಹಾವೇರಿ: ಶಿಗ್ಗಾಂವಿ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಅಮೆರಿಕದಿಂದ ಬಂದು ಯುವತಿಯೊಬ್ಬರು ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.
ಯುಎಸ್‌ಎಯಿಂದ ಆಗಮಿಸಿರುವ ಅನುಷಾ ತನ್ನ ತಾಯಿ ಜೊತೆಗೆ ಆಗಮಿಸಿ ವೋಟ್ ಮಾಡಿದ್ದಾರೆ. ಮಮ್ಲೇದೇಸಾಯಿ ಶಾಲೆಯ ಆಗಮಿಸಿ ಮತದಾನ ಮಾಡಿದ್ದಾರೆ. ಆ ಮೂಲಕ ಯುವಜನತೆಗೆ ಮಾದರಿಯಾಗಿದ್ದಾರೆ.
ಮತದಾನದ ಬಳಿಕ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅನುಷಾ, ನಾನು ಅಮೆರಿಕದ ಟೆಕ್ಸಾಸ್ ರಾಜ್ಯದಲ್ಲಿದ್ದೇನೆ. ಇದು ನನ್ನ ಲಕ್. ಕಡ್ಡಾಯ ಮತದಾನ ಮಾಡುವುದು ಎಲ್ಲರ ಹಕ್ಕು. ಈಗ ಮತದಾನ ಮಾಡಿದ್ದು ವಾಪಸ್ ಹೋಗುವ ತಯಾರಿಯಲ್ಲಿದ್ದೇವೆ ಎಂದು ತಿಳಿಸಿದರು.
ನಾಯಕತ್ವ ಗುಣ ಇರುವ ವ್ಯಕ್ತಿಯನ್ನು ಆರಿಸುವುದು ನಮ್ಮೆಲ್ಲರ ಕರ್ತವ್ಯ. ಎಂಥವರು ಆಯ್ಕೆಯಾಗಿ ಬಂದರೆ ನಮ್ಮ ಕ್ಷೇತ್ರ ಉನ್ನತಿ ಪಡೆಯುತ್ತದೆ ಎಂಬುದನ್ನು ಆಲೋಚನೆ ಮಾಡಿ ವೋಟ್ ಮಾಡಿದ್ದೇನೆ ಎಂದು ಹೇಳಿದರು.