ಬೆಂಗಳೂರು: ಸಿಸಿಬಿ ಪೊಲೀಸರ ದಾಳಿಗೆ ಹೆದರಿ ಪಬ್ ಬಿಲ್ಡಿಂಗ್ನಿಂದ ಹಾರಿ ಬಿದ್ದು ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಿದ್ದ ರಭಸಕ್ಕೆ ಯುವತಿ ಕೋಮಾ ಸ್ಥಿತಿಗೆ ತಲುಪಿದ್ದಾರೆ. ಕಳೆದ 25 ರಂದು ಬೆಂಗಳೂರಿನ ಅಶೋಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬ್ರಿಗೇಡ್ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.
Advertisement
ಪೊಲೀಸರ ದಾಳಿಯಿಂದ ಭಯಗೊಂಡ ಯುವತಿ ಬ್ರಿಗೇಡ್ ಪಬ್ ಕಟ್ಟಡದ ನಾಲ್ಕನೇ ಮಹಡಿಯಿಂದ ಹಾರಿದ್ದಾರೆ. ಸಿಸಿಬಿ ಪೊಲೀಸರ ಎದುರಲ್ಲೇ ಈ ಘಟನೆ ನಡೆದಿದೆ.
Advertisement
Advertisement
ದಾಳಿ ನಡೆದ ದಿನ ಒಂದೇ ಬಾರೀ ಮೂರು ಕಡೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಎರಡು ಪಬ್ಗಳ ಮೇಲಿನ ದಾಳಿ ಸಂಬಂಧ ಪ್ರತ್ಯೇಕ ಕೇಸ್ ದಾಖಲಿಸಿದ್ದರು. ಆದರೆ ಬ್ರಿಗೇಡ್ ಪಬ್ ಕಟ್ಟಡದಿಂದ ಯುವತಿ ಹಾರಿ ಗಂಭೀರವಾಗಿ ಗಾಯಗೊಂಡ ಕೇಸನ್ನು ದಾಖಲಿಸಿಕೊಂಡಿಲ್ಲ. ಹೀಗಾಗಿ ಸಿಸಿಬಿ ಪೊಲೀಸರ ವಿರುದ್ಧ ಕೇಸ್ ಮುಚ್ಚಿಹಾಕುತ್ತಿರುವ ಆರೋಪ ಕೇಳಿಬಂದಿದೆ.