ರಾಮನಗರ: ಆಶ್ರಯ ನೀಡುವುದಾಗಿ ಕರೆದೊಯ್ದು ಯುವತಿ ಮೇಲೆ ಅತ್ಯಾಚಾರವೆಸಗಿ ನಂತರ ಬಲವಂತವಾಗಿ ಮದುವೆ (Forcefully Marriage) ಮಾಡಿಕೊಂಡಿರುವ ಆರೋಪವೊಂದು ರಾಮನಗರದಿಂದ ಕೇಳಿಬಂದಿದೆ.
ರಾಮನಗರ (Ramanagar) ದ ಕೆಂಪೇಗೌಡ ವೃತ್ತದ ಬಳಿ ಘಟನೆ ನಡೆದಿದೆ. ಈ ಸಂಬಂಧ ಪ್ರೀತಿ ಎಂಬ ಮಹಿಳೆಯನ್ನು ಬಂಧಿಸಲಾಗಿದ್ದು, ಮತ್ತಿಬ್ಬರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಪ್ರಕರಣ..?: 19 ವರ್ಷದ ಯುವತಿ ಮನೆಯವರ ಜೊತೆಗೆ ಜಗಳವಾಡಿಕೊಂಡು ಬಂದಿದ್ದಳು. ಹೀಗೆ ಬಸ್ ನಿಲ್ದಾಣದ ಬಳಿ ಕೂತಿದ್ದ ಯುವತಿಯನ್ನ ಪ್ರೀತಿ ಎಂಬಾಕೆ ಪುಸಲಾಯಿಸಿ ತನ್ನ ವೃದ್ಧಾಶ್ರಮಕ್ಕೆ ಕರೆತಂದಿದ್ದಳು. ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಗಂಭೀರವಾಗಿ ಗಾಯಗೊಂಡಿದ್ದ ಬೆಂಗಳೂರು ವಿವಿ ವಿದ್ಯಾರ್ಥಿನಿ ಸಾವು
ಬಳಿಕ ಯುವತಿಯನ್ನು ಗೃಹಬಂಧನದಲ್ಲಿಟ್ಟಿದ್ದು, ಪ್ರೀತಿ ಸಹೋದರ ಯೋಗೇಶ್ ನಿರಂತರ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರ ಎಸಗಿದ್ದರಿಂದ ಯುವತಿ ಗರ್ಭಿಣಿಯಾಗಿದ್ದು, ಬಳಿಕ ಪ್ರೀತಿಯೇ ಯುವತಿಗೆ ಗರ್ಭಪಾತ ಮಾಡಿಸಿದ್ದಳು.
ಅಲ್ಲದೆ ಘಟನೆ ಬಗ್ಗೆ ಹೊರಗಡೆ ಹೇಳಿದ್ರೆ ಯುವತಿಯ ಅಣ್ಣನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ನೊಂದ ಯುವತಿ ರಾಮನಗರ ಮಹಿಳಾ ಠಾಣೆಗೆ ದೂರು ನೀಡಿದ್ದಾಳೆ. ದೂರು ಸ್ವೀಕರಿಸಿದ ಪೊಲೀಸರು ಆರೋಪಿಗಳ ಮೇಲೆ ಎಫ್‍ಐಆರ್ ದಾಖಲು ಮಾಡಿಕೊಂಡಿದ್ದಾರೆ.