ಬೆಂಗಳೂರು: ಕ್ಯಾಬ್ ಬುಕ್ ಮಾಡಿದ್ದ ಯುವತಿಯ ಮೇಲೆ ಇಬ್ಬರು ಕಾಮುಕರು ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಂಗಳೂರಿನ (Bengaluru) ಕಮ್ಮನಹಳ್ಳಿಯಲ್ಲಿ (Kammanahalli)) ನಡೆದಿದೆ.
ಜ.27ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ಯುವತಿಯೊಬ್ಬಳು ಕಮ್ಮನಹಳ್ಳಿಯಿಂದ ವೈಟ್‌ಫೀಲ್ಡ್‌ಗೆ ಉಬರ್ ಕ್ಯಾಬ್ ಬುಕ್ ಮಾಡಿದ್ದಳು. ಕ್ಯಾಬ್ ಬರುತ್ತಿದ್ದಂತೆ ಯುವತಿ ಕಾರಿನೊಳಗೆ ಕುಳಿತುಕೊಂಡಿದ್ದಾಳೆ. ಇದೇ ವೇಳೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬಂದು ಕಾರಿನೊಳಗೆ ಕೂತಿದ್ದಾರೆ.ಇದನ್ನೂ ಓದಿ: ವಿಮಾನ – ಹೆಲಿಕಾಪ್ಟರ್ ದುರಂತ; ಎಲ್ಲಾ 64 ಮಂದಿ ದುರ್ಮರಣ, 28 ಮೃತದೇಹ ಪತ್ತೆ
ಆಗ ಭಯಗೊಂಡ ಯುವತಿ ಕಾರಿನಿಂದ ಇಳಿದು ಓಡಿದ್ದಾಳೆ. ಆಕೆಯ ಬೆನ್ನಟ್ಟಿ ಹೋದ ಕಾಮುಕರು ಕುತ್ತಿಗೆ ಹಿಡಿದು ನೆಲಕ್ಕೆ ಬೀಳಿಸಿದ್ದಾರೆ. ಮತ್ತೊಬ್ಬ ಬಟ್ಟೆ ಬಿಚ್ಚಲು ಯತ್ನಿಸಿ, ಯುವತಿಯ ಎದೆಭಾಗ ಮುಟ್ಟಿ ಕಿರುಕುಳ ನೀಡಿದ್ದಾನೆ. ಯುವತಿ ಜೋರಾಗಿ ಕಿರುಚಿಕೊಳ್ಳುತ್ತಿದಂತೆ ಅಕ್ಕಪಕ್ಕದಲ್ಲಿದ್ದ ಜನರು ಬಂದಿದ್ದಾರೆ. ಬರುವಷ್ಟರಲ್ಲಿ ಇಬ್ಬರು ಅಪರಿಚಿತ ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಘಟನೆ ಬಗ್ಗೆ ಬಣಸವಾಡಿ ಪೊಲೀಸ್ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದು, ಇಬ್ಬರು ಯುವಕರ ವಿರುದ್ಧ ಎಫ್.ಐ.ಆರ್ ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಾಮುಕರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.ಇದನ್ನೂ ಓದಿ: Mahakumbh 2025 | ಕಾಲ್ತುಳಿತಕ್ಕೆ ಬಲಿಯಾದವರ ಮೃತದೇಹ ಬೆಳಗಾವಿಗೆ – ಕುಟುಂಬಸ್ಥರಲ್ಲಿ ಆಕ್ರಂದನ