-ಮಾನಸಿಕ ಅಸ್ವಸ್ಥೆಯಂತೆ ವರ್ತಿಸಿದ ಯುವತಿ ಡಿಮ್ಹಾನ್ಸ್ಗೆ ಸಿಫ್ಟ್
ದಾವಣಗೆರೆ: ಗಾಂಜಾ ಗುಂಗಿನಲ್ಲಿದ್ದ ಯುವತಿಯೊಬ್ಬಳು ಕಾರು ಚಾಲನೆ ಮಾಡಿಕೊಂಡು ಒಬ್ಬಳೇ ಬಂದು, ಗ್ರಾಮಸ್ಥರೊಂದಿಗೆ ರಂಪಾಟ ಮಾಡಿಕೊಂಡ ಘಟನೆ ಹರಿಹರ ಸಮೀಪದ ಮಾಕನೂರು ಗ್ರಾಮದಲ್ಲಿ ನಡೆದಿದೆ. ಮಾಹಿತಿ ಪಡೆದು ಸ್ಥಳಕ್ಕೆ ಆಗಮನಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು, ಚಿಕಿತ್ಸೆಗಾಗಿ ಧಾರವಾಡ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದಿದ್ದಾರೆ.
ಆಗಿದ್ದೇನು?:
ಯುವತಿಯನ್ನು ಮುಂಬೈ ಮೂಲದವಳು ಎನ್ನಲಾಗಿದ್ದು, ಗಾಂಜಾ ಮತ್ತಿನಲ್ಲಿ ಒಬ್ಬಳೇ ಕಾರು ಚಾಲನೆ ಮಾಡಿಕೊಂಡ ಬಂದಿದ್ದಾಳೆ. ಹರಿಹರ ತಾಲೂಕಿನ ಮಾಕನೂರು ಗ್ರಾಮದ ಹೊರ ವಲಯದಲ್ಲಿ ಕಾರು ನಿಲ್ಲಿಸಿ, ಕಟ್ಟೆಯ ಮೇಲೆ ಮಲಗಿದ್ದಳು. ಈ ವೇಳೆ ತುಂತುರು ಮಳೆಯಾಗಿದ್ದರಿಂದ ಕುಣಿಯಲು ಪ್ರಾರಂಭಿಸಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ಆಕೆಯನ್ನು ಗ್ರಾಮಕ್ಕೆ ಕರೆದುಕೊಂಡು ಹೋಗಿ ಉಪಚಾರ ಮಾಡಿದ್ದಾರೆ.
Advertisement
ನನಗೆ ಸೀರೆ ಬೇಕು ಅಂತಾ ಹಠಹಿಡಿದ ಯುವತಿಗೆ, ಗ್ರಾಮಸ್ಥರು ಹಳೇ ಸೀರೆಯೊಂದನ್ನು ನೀಡಿದ್ದಾರೆ. ಅದನ್ನು ತೊಟ್ಟ ಆಕೆ, ತನಗೆ ತೊಚಿದಂತೆ ಸ್ಥಳೀಯರನ್ನು ನಿಂದಿಸಲು ಆರಂಭಿಸಿದ್ದಾಳೆ. ಆಕೆಯ ವರ್ತನೆಯಿಂದ ಬೇಸತ್ತ ಗ್ರಾಮಸ್ಥರು, ಹರಿಹರ ಪೊಲೀಸರಿಗೆ ಮಾಹಿತಿ ನೀಡಿ ಅವರ ವಶಕ್ಕೆ ಕೊಟ್ಟಿದ್ದಾರೆ. ಆಗ ತನ್ನಲ್ಲಿದ್ದ ಹಣ ಕಾಣೆಯಾಗಿದೆ, ಮರಳಿ ಕೊಡಿ ಅಂತಾ ಯುವತಿ ಮತ್ತಷ್ಟು ಗಲಾಟೆ ಮಾಡಿದ್ದಾಳೆ.
Advertisement
Advertisement
ತಾನು ಏನು ಮಾಡುತ್ತಿದ್ದೇನೆ ಅಂತಾ ಯುವತಿಗೆ ಅರಿವಿಲ್ಲ. ಹೀಗಾಗಿ ಆಕೆಗೆ ಚಿಕಿತ್ಸೆ ಕೊಡಿಸಬೇಕು ಎಂದು ಪೊಲೀಸರು ಯುವತಿಯನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಅಲ್ಲಿಯೂ ಸುಮ್ಮನಿರದ ಯುವತಿ ಎಲ್ಲರ ಮೇಲೆ ರೇಗಾಡಿದ್ದಾಳೆ. ನನಗೆ ಸಿಗರೇಟ್ ಬೇಕು. ಇಂತಹದ್ದೇ ಬ್ರ್ಯಾಂಡ್ ಬೇಕು ಅಂತ ಪೊಲೀಸರಿಗೆ ಕೇಳಿದ್ದಾಳೆ. ಹೆಚ್ಚಾಗಿ ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಾತನಾಡುತ್ತಿದ್ದ ಯುವತಿ ಅವಾಚ್ಯ ಪದಗಳಲ್ಲಿ ನಿಂದಿಸುತ್ತಿದ್ದಳು.
Advertisement
ಪೊಲೀಸರು, ವೈದ್ಯರು ವಿಳಾಸ ಕೇಳಿದರೆ ಇಂಗ್ಲಿಷ್‍ನಲ್ಲಿಯೇ ಮಾತನಾಡುತ್ತಿದ್ದಳು. ನನಗೆ ಮಹಿಳೆಯೊಬ್ಬರು ಹಲ್ಲೆ ಮಾಡಿದ್ದಾರೆ ಎಂದು ಹೇಳಿದ್ದಾಳೆ. ಇತ್ತ ಯುವತಿಯ ವರ್ತನೆಯಿಂದ ರೋಸಿಹೋದ ಪೊಲೀಸರು ಅವಳನ್ನು ಧಾರವಾಡದ ಮಾನಸಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv