– ಧಾರವಾಡದಿಂದ ಕಾಶ್ಮೀರಕ್ಕೆ ಬೈಕ್‌ನಲ್ಲಿ ತೆರಳಿ ರೆಕಾರ್ಡ್
ಧಾರವಾಡ: ಸಾಧಿಸುವ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಧಾರವಾಡದ (Dharwad) ಯುವತಿಯೊಬ್ಬಳು ಸಾಕ್ಷಿಯಾಗಿದ್ದಾಳೆ. ಬೈಕ್ ರೈಡರ್ (Bike Raider) ಆದ ಈಕೆ ಉತ್ತರ ಕಾಶ್ಮೀರಕ್ಕೆ (North Kashmir) ಒಬ್ಬಂಟಿಯಾಗಿ ಹೋಗಿ ಹೊಸ ದಾಖಲೆ ಬರೆದಿದ್ದಾಳೆ.
ವಿದ್ಯಾಕಾಶಿ ಧಾರವಾಡದ ಯುವತಿ 18ನೇ ವಯಸ್ಸಿಗೆ ಹೊಸ ದಾಖಲೆ ನಿರ್ಮಿಸಿದ್ದಾಳೆ. ನಗರದ ಆರ್.ಎನ್ ಶೆಟ್ಟಿ ಕ್ರೀಡಾಂಗಣ ಬಳಿಯ ನಿವಾಸಿ ಪ್ರತೀಕ್ಷಾ ಹರವಿಶಟ್ಟರ್ ಬಿಸಿಎ ವ್ಯಾಸಂಗ ಮಾಡುತ್ತಿದ್ದಾಳೆ. ಬೈಕ್ ರೈಡಿಂಗ್ ಹವ್ಯಾಸವಿರುವ ಪ್ರತೀಕ್ಷಾ ಸೋಲೋ ಬೈಕ್ ರೈಡಿಂಗ್ ಮೂಲಕ ಉತ್ತರ ಕಾಶ್ಮೀರಕ್ಕೆ ಹೋಗಿಬಂದಿದ್ದಾಳೆ. ಸುಮಾರು 6 ಸಾವಿರ ಕಿಲೋ ಮೀಟರ್ ದೂರದ ರಸ್ತೆ ಕ್ರಮಿಸಿ ಬಂದಿರುವ ಪ್ರತೀಕ್ಷಾ 10 ದಿನಗಳಲ್ಲಿ ಈ ಸಾಧನೆ ಮಾಡುವ ಉದ್ದೇಶ ಹೊಂದಿದ್ದರು. ಆದರೆ 9 ದಿನಗಳಲ್ಲೇ ತಮ್ಮ ಗುರಿ ಸಾಧಿಸಿದ್ದಾರೆ. ದಾರಿಯುದ್ದಕ್ಕೂ ಜನರ ಸಹಕಾರ ಕೊಟ್ಟರು ಎನ್ನುತ್ತಾರೆ ಪ್ರತೀಕ್ಷಾ. ಇದನ್ನೂ ಓದಿ: ಸಿದ್ದರಾಮುಲ್ಲ ಖಾನ್ ಎನ್ನುತ್ತಾ ಸರ್ಕಾರದ ವಿರುದ್ಧ ರೊಚ್ಚಿಗೆದ್ದ ಸಂಸದ ಅನಂತ್ ಕುಮಾರ್ ಹೆಗಡೆ
ಬೈಕ್ ರೈಡರ್ ಪ್ರತೀಕ್ಷಾಗೆ ಇಲ್ಲಿಂದ ಕಾಶ್ಮೀರದವರೆಗೆ ಹೋಗಲು ಸಹಾಯ ಆಗಿದ್ದು ಜಿಪಿಎಸ್ ಲೊಕೇಷನ್. ನಡುರಸ್ತೆಯಲ್ಲಿ ದಾರಿ ಗೊಂದಲವಾದಾಗ ಸಹೋದರಿ ಕೋಮಲ್ ಜಿಪಿಎಸ್ ಮೂಲಕ ಸಹಾಯ ಮಾಡಿದ್ದಾರೆ. ದಾಖಲೆ ಮಾಡಲೆಂದೇ ಈ ರೈಡ್ ಮಾಡಿದ್ದು ಎನ್ನಲಾಗಿದೆ. ಈ ಹಿಂದೆ 21 ವರ್ಷದ ಕೇರಳ ಯುವತಿ ಕಾಶ್ಮೀರದವರೆಗೆ ಒಬ್ಬಂಟಿ ಹೋಗಿರುವ ದಾಖಲೆ ಇದೆ. ಇದಾದ ನಂತರ ಪ್ರತೀಕ್ಷಾಳ ಸಹೋದರಿ ಕೋಮಲ್ 19 ವರ್ಷದವಳಿದ್ದಾಗ ಕಾಶ್ಮೀರಕ್ಕೆ ಹೋಗಿದ್ದರು. ಈಗ 18 ವರ್ಷದ ಪ್ರತೀಕ್ಷಾ ಅಕ್ಕನ ದಾಖಲೆಯನ್ನೂ ಮುರಿದಿದ್ದಾರೆ. ಪ್ರತೀಕ್ಷಾ ಸಾಧನೆಗೆ ಅಕ್ಕ ಕೋಮಲ್ ಹಾಡಿಹೊಗಳಿದ್ದಾರೆ. ಇದನ್ನೂ ಓದಿ: ಬೈಕ್ ಟ್ಯಾಕ್ಸಿಗೆ ಕೇಂದ್ರ ಅಸ್ತು- ರಾಜ್ಯ ಸರ್ಕಾರಕ್ಕೆ ಕ್ಯಾಬ್ ಅಸೋಸಿಯೇಷನ್ ಎಚ್ಚರಿಕೆ
ಸದ್ಯ ನಮ್ಮ ರಾಜ್ಯದ ಹೆಮ್ಮೆಯ ಯುವತಿ ಒಬ್ಬಂಟಿಯಾಗಿ ಕಾಶ್ಮೀರ ಲಾಲ್ ಚೌಕಗೆ ಒಬ್ಬಂಟಿಯಾಗಿ ಹೋಗಿಬಂದು ಹೊಸ ದಾಖಲೆ ಬರೆದಿದ್ದಾಳೆ. ಇವರ ಈ ಸಾಧನೆ ಜನರು ಕೊಂಡಾಡಿದರಷ್ಟೇ ಸಾಲದು. ದಾಖಲೆ ಪುಸ್ತಕದಲ್ಲೂ ದಾಖಲಾಗಬೇಕಿದೆ. ಇದನ್ನೂ ಓದಿ: ದೆಹಲಿಯಲ್ಲಿ ಪ್ರತಿಭಟಿಸ್ತಿರೋರು ರೈತರಲ್ಲ, ದೇಶದ್ರೋಹಿಗಳು: ಅನಂತ್ ಕುಮಾರ್ ಹೆಗಡೆ