ಚಿಕ್ಕಬಳ್ಳಾಪುರ: ರಸ್ತೆಗೆ ಕಸ (Garbage) ಸುರಿಯುತ್ತಿದ್ದ ಯುವಕನ ಬೈಕ್‌ನ್ನು (Bike) ಚಿಕ್ಕಬಳ್ಳಾಪುರ (Chikkaballapura) ನಗರಸಭೆ ಸಿಬ್ಬಂದಿ ಸೀಜ್ ಮಾಡಿದ್ದಾರೆ.
ನಗರದ ಕಂದವಾರ ರಸ್ತೆಯಲ್ಲಿ ಯುವಕ ಕಸ ಸುರಿಯುತ್ತಿದ್ದ. ಈ ವೇಳೆ ನಗರಸಭೆ ಸಿಬ್ಬಂದಿ ಪ್ರಶ್ನಿಸಿ, ದಂಡ ಕಟ್ಟುವಂತೆ ಸೂಚಿಸಿದ್ದಾರೆ. ಆಗ ಯುವಕ ಸಿಬ್ಬಂದಿ ಬಳಿ ಗಲಾಟೆ ಮಾಡಿದ್ದಾನೆ. ಅಲ್ಲದೇ ದಂಡ ಕಟ್ಟಲ್ಲ, ಏನ್ ಮಾಡ್ತೀರೋ ಮಾಡಿ ಎಂದು ಅವಾಜ್ ಹಾಕಿದ್ದಾನೆ. ದಂಡ ಕಟ್ಟದ ಕಾರಣ ಯುವಕನ ಬೈಕ್‌ನ್ನ ನಗರಸಭೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ರಸ್ತೆಯಲ್ಲಿ ಸುರಿದ್ರೆ ನಿಮ್ಮ ಮನೆ ಮುಂದೆನೇ ಬೀಳುತ್ತೆ ಕಸ ಹುಷಾರ್ – 5 ರಿಂದ 10 ಸಾವಿರ ದಂಡದ ಎಚ್ಚರಿಕೆ!
ಬೈಕ್ ವಶಕ್ಕೆ ಪಡೆಯುವ ವೇಳೆ ಬೈಕ್ ಕೀ ತಗುಲಿ ಮಹಿಳಾ ಅಧಿಕಾರಿ ಶಿಲ್ಪಾ ಸುರೇಶ್ ಅವರಿಗೆ ಗಾಯವಾಗಿದೆ. ಇದನ್ನೂ ಓದಿ: ಮಗಳ ಶವ ಪರೀಕ್ಷೆಗೆ ಲಂಚ ವಸೂಲಿ; ಕಣ್ಣೀರಿಟ್ಟ ಮಾಜಿ ಸಿಎಫ್‌ಒ – ಎಸ್‌ಐ, ಕಾನ್‌ಸ್ಟೇಬಲ್ ಅಮಾನತು
 


 
		 
		 
		 
		 
		
 
		 
		 
		 
		