ಬೆಂಗಳೂರು: ಕಣ್ತುಂಬ ಕನಸು, ಜೀವನದ ಬಗ್ಗೆ ನೂರೆಂಟು ಆಸೆ. ಬದುಕಿ ಬಾಳಬೇಕಿದ್ದ ಜೀವ, ಕುಟುಂಬಕ್ಕೆ ಆಸರೆಯಾಗಬೇಕಿದ್ದವ ಇಂದು ಮಸಣ ಸೇರಿದ್ದಾನೆ.
Advertisement
ಹೌದು, ಬೆಂಗಳೂರಿನ ರಾಮಮೂರ್ತಿ ನಗರ (Ramamurthynagar) ದ ನಿವಾಸಿ ವಿಜೇತ್ (24) ಓದು ಮುಗಿಸಿ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿದೆ ಅಷ್ಟೇ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ಇಂದು ಪ್ರಾಣಬಿಟ್ಟಿದ್ದಾನೆ ಅಂತ ವಿಜೇತ್ ಕುಟುಂಬ ಆರೋಪಿಸಿದೆ. ಇದನ್ನೂ ಓದಿ: ಹೆಂಡತಿ ಮಕ್ಕಳನ್ನು ಕೊಂದು ತಾನೂ ಕೈ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನ
Advertisement
Advertisement
ಮೊನ್ನೆ ಜ್ವರ ಬಂದಿದೆ ಅಂತಾ ವಿಜೇತ್ ಕ್ಲಿನಿಕ್‍ಗೆ ತೆರಳಿ ಇಂಜೆಕ್ಷನ್ ಹಾಕಿಸಿಕೊಂಡಿದ್ದ. ಅದು ಸೆಪ್ಟಿಕ್ ಆಗಿದೆ. ತಕ್ಷಣ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಆಸ್ಪತ್ರೆಯವರು ಸರ್ಜರಿ ಮಾಡಬೇಕು ಅಂತಾ ಹೇಳಿ ಸರ್ಜರಿ ಮಾಡಿದ್ದಾರೆ. ಆದರೆ ಕುಟುಂಬಸ್ಥರ ಆರೋಪದ ಪ್ರಕಾರ ಸರ್ಜರಿ ವೇಳೆಯಲ್ಲಿ ತೀವ್ರ ರಕ್ತಸ್ರಾವವಾಗಿದೆ. ಆಮೇಲೆ ತರಾತುರಿಯಲ್ಲಿ ರಕ್ತ ತರುವಂತೆ ಕುಟುಂಬಸ್ಥರಿಗೆ ವೈದ್ಯರು ಹೇಳಿದ್ರಂತೆ. ಆದರೆ ಬ್ಲಡ್ ತರುವಷ್ಟರಲ್ಲಿ ವಿಜೇತ್ ಸಾವನ್ನಪ್ಪಿದ್ದಾನೆ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ.
Advertisement
ವಿಜೇತ್ ಸಾವಿಗೆ ವೈದ್ಯರ ನಿರ್ಲಕ್ಷ್ಯ ಅಂತಾ ಆರೋಪಿಸಿ ಕುಟುಂಬಸ್ಥರು ಆಸ್ಪತ್ರೆಯಲ್ಲಿ ಗಲಾಟೆ ಮಾಡಿದ್ರು. ಆಸ್ಪತ್ರೆಯ ಗಾಜನ್ನು ಪುಡಿ ಮಾಡಿದ್ದಾರೆ. ಮನೆ ಮಗನ ಸಾವಿಗೆ ಇಡೀ ಕುಟುಂಬಸ್ಥರು ಕಣ್ಣೀರು ಹಾಕಿ ವೈದ್ಯರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಆದರೆ ವಿಜೇತ್ ಸಾವಿನ ಬಗ್ಗೆ ಆಸ್ಪತ್ರೆಯವರು ಕಾರಣ ಬೇರೆ ನೀಡುತ್ತಿದ್ದಾರೆ. ಹೀಗಾಗಿ ಸಿಟ್ಟಿಗೆದ್ದ ಕುಟುಂಬಸ್ಥರು ರಾಮಮೂರ್ತಿ ನಗರ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಆಸ್ಪತ್ರೆಯ ನಿರ್ಲಕ್ಷ್ಯದ ಬಗ್ಗೆ ಸರಿಯಾದ ತನಿಖೆ ಯಾಗಬೇಕು ಅಂತಾ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಜ್ವರ ಬಂತು ಹೋದ ಯುವಕ ಸಾವಿನ ಮನೆ ಸೇರಿದ್ದಾನೆ. ಇಡೀ ಮನೆಗೆ ಆಧಾರವಾಗಿದ್ದ ಮನೆ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.