ಬೆಂಗಳೂರು: ಕಟ್ಟಡದಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿರುವ ಘಟನೆ ರಾಜ್ಯರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ.
ಮೂರು ದಿನದ ಹಿಂದೆ ಪೀಣ್ಯ ಎಸ್‍ಆರ್‌ಎಸ್ ಸರ್ಕಲ್ ಬಳಿ ಮೂವರು ಯುವಕರು ಗಾಂಜಾ ಸೇದುತ್ತಿದ್ದರು. ಈ ಬಗ್ಗೆ ಪೀಣ್ಯ ಪೊಲೀಸರಿಗೆ ಮಾಹಿತಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಬೀಟ್ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಆದರೆ ಅಲ್ಲಿದ್ದ ಯುವಕರು ಪೊಲೀಸರನ್ನು ನೋಡಿ ಓಡಲು ಶುರು ಮಾಡಿದ್ದರು. ಇದನ್ನೂ ಓದಿ: ಅತಿಥಿ ಶಿಕ್ಷಕರಿಗೆ ಸರ್ಕಾರದಿಂದ ಗುಡ್‍ನ್ಯೂಸ್- 2,500 ರೂ. ಗೌರವ ಧನ ಹೆಚ್ಚಿಸಿ ಆದೇಶ
ಈ ವೇಳೆ ರವಿ ಎಂಬ ಯುವಕ ಬಿಲ್ಡಿಂಗ್ ಹತ್ತಿ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಬಿಲ್ಡಿಂಗ್ ಹಾರುವ ವೇಳೆ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ. ಕೂಡಲೇ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರವಿ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧಿಸಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಜನತೆ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆಂಬ ಭರವಸೆ ನನಗಿದೆ: ಠಾಕ್ರೆ ಪರ ಪ್ರಕಾಶ್ ರಾಜ್ ಬ್ಯಾಟ್