ವಿಜಯನಗರ: ಮದುವೆಯಾಗಲು (Marriage) ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಮನನೊಂದು ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ್ಲಿಗಿ (Kudligi) ತಾಲೂಕಿನ ಗುಡೇಕೋಟೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಿ.ಮಧುಸೂಧನ್ (26) ಮೃತ ಯುವಕ ಎಂದು ತಿಳಿದು ಬಂದಿದೆ. ಆತ ಜ.5 ರಂದೇ ವಿಷ ಸೇವಿಸಿದ್ದು, ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ. ಯುವಕ ಯಾಕೆ ವಿಷ ಸೇವಿಸಿದ್ದಾನೆ ಎಂಬ ವಿಚಾರ ಮೊದಲಿಗೆ ತಿಳಿದು ಬಂದಿರಲಿಲ್ಲ. ಆತ ಮೃತಪಟ್ಟ ಬಳಿಕ ಪೊಲೀಸರು ಆತನ ಸ್ನೇಹಿತರನ್ನು ವಿಚಾರಿಸಿದಾಗ ಯುವಕನ ಸಾವಿಗೆ ಕಾರಣ ತಿಳಿದು ಬಂದಿದೆ. ಇದನ್ನೂ ಓದಿ: 14 ವರ್ಷದ ಮಗ ಆತ್ಮಹತ್ಯೆ ಮಾಡ್ಕೊಂಡ ಬೇಸರದಲ್ಲಿ ತಂದೆಯೂ ಸೂಸೈಡ್
ಮೃತ ಯುವಕ ಸ್ನೇಹಿತರೊಂದಿಗೆ, ಮದುವೆ ವಯಸ್ಸಾಗಿದ್ದರೂ ನನಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂಬ ಬೇಸರವನ್ನು ಹೇಳಿಕೊಂಡಿದ್ದ. ಆತನ ತಂದೆ ಮಾನಸಿಕ ಅಸ್ವಸ್ಥರಾಗಿದ್ದು, ಯುವಕನ ಮದುವೆಗೆ ಹೆಣ್ಣು ಕೊಡಲು ಯಾರೂ ಮುಂದೆ ಬರುತ್ತಿರಲಿಲ್ಲ ಎನ್ನಲಾಗಿದೆ.
ಈ ಸಂಬಂಧ ಗುಡೇಕೋಟೆ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಪ್ರೇಯಸಿಯ ಬದಲು ಎಕ್ಸಾಂ ಬರೆಯಲು ಹೆಣ್ಣಿನಂತೆ ವೇಷ ತೊಟ್ಟು ಪೊಲೀಸರ ಅತಿಥಿಯಾದ!