ಹುಬ್ಬಳ್ಳಿ: ಕ್ಷುಲ್ಲಕ ಕಾರಣಕ್ಕೆ ಯುವಕನೊಬ್ಬನನ್ನು ಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಪ್ರಕರಣವೊಂದು ನಡೆದಿರುವ ಬಗ್ಗೆ ಹುಬ್ಬಳ್ಳಿಯಲ್ಲಿ (Hubballi) ಬೆಳಕಿಗೆ ಬಂದಿದೆ.
ಹೊಸೂರಿನ ಸಂದೀಪ್ ಸೊಲಂಕಿ ಎಂಬ ಯುವಕನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಲಾಗಿದೆ. ಇನ್‍ಸ್ಟಾ ಇನ್‍ಬಾಕ್ಸ್ ನಲ್ಲಿ ಬೈಯ್ದು ಮೆಸೇಜ್ ಹಾಕಿದ್ದ ಅನ್ನೋ ಕಾರಣಕ್ಕೆ ಹಲ್ಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರಾಥಮಿಕ ಶಾಲಾ ಹಂತದಲ್ಲಿ NEP ಜಾರಿ ಮಾಡೋದಿಲ್ಲ: ಮಧು ಬಂಗಾರಪ್ಪ
ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡುತ್ತಿರುವ ದೃಶ್ಯ ಮೊಬೈಲ್‍ನಲ್ಲಿ ಸೆರೆಹಿಡಿಯಲಾಗಿದ್ದು, ಇದೀಗ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೆಟ್ಲಮೆಂಟ್ ಏರಿಯಾದ ಬಡ್ಡಿಂಗ್ ರೌಡಿಗಳಿಂದ ಈ ಕೃತ್ಯ ನಡೆದಿದೆ ಎನ್ನಲಾಗಿದೆ.
ಸಂತ್ರಸ್ತ ಸಂದೀಪ್ ಇನ್‍ಸ್ಟಾಗ್ರಾಂನಲ್ಲಿ ರೀಲ್ ಮಾಡಿದ್ದೆ ಪ್ರಕರಣಕ್ಕೆ ಮೂಲ ಕಾರಣ ಎನ್ನಲಾಗಿದೆ. ಸೆರೆಯಾದ ಹಲ್ಲೆಯ ದೃಶ್ಯದಲ್ಲಿ ಕೆಲವರ ಮುಖ ಪರಿಚಯ ಸಿಕ್ಕಿದ್ದು, ಸೆಟ್ಲಮೆಂಟ್ ಏರಿಯಾದ ಗಂಗಾಧರ, ನಗರದ ಪ್ರಜ್ವಲ್ ಗಾಯಕವಾಡ, ಗಬ್ಬೂರಿನ ಜಸ್ಟೀನ್ ಮಂಜ್ಯಾ @ ಮಂಜುನಾಥ್ ಅಂಗಡಿ ಹಾಗೂ ಸೆಟ್ಲಮೆಂಟ್ ಏರಿಯಾದ ಮಂಜ್ಯಾ @ ಮಂಜುನಾಥ್ ಎಂಬುದಾಗಿ ಗುರುತಿಸಲಾಗಿದೆ. ಇನ್ನು ವೀಡಿಯೋದಲ್ಲಿ ದುಷ್ಕರ್ಮಿಗಳು ಮರಾಠಿ ಹಾಗೂ ಕನ್ನಡದಲ್ಲಿ ಮಾತನಾಡಿರುವುದು ಬಯಲಾಗಿದೆ.
ಪ್ರಕರಣ ಸಂಬಂಧ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರ್ ಸಂತೋಷ್ ಬಾಬು ಸುದ್ದಿಗೊಷ್ಠಿ ನಡೆಸಿ ಮಾತನಾಡಿ, ಎರಡು ವೀಡಿಯೋ ಮೂಲಕ ನಮ್ಮ ಗಮನಕ್ಕೆ ವಿಷಯ ಬಂದಿದೆ. ಈ ಸಂಬಂಧ ಒಟ್ಟು ಐವರನ್ನು ವಶಕ್ಕೆ ಪಡೆಯಲಾಗಿದೆ. ಪ್ರಜ್ವಲ್, ವಿನಾಯಕ್, ಗಣೇಶ್, ಸಚಿನ್ ಹಾಗೂ ಮಂಜು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದ ಎಂದರು.
ಇನ್‍ಸ್ಟಾದಲ್ಲಿ ಸಂತ್ರಸ್ತ ಸಂದೀಪ್, ಪ್ರಜ್ವಲ್ ತಾಯಿಗೆ ಬೈದಿದ್ದ. ಆದರೆ ಈ ಬಗ್ಗೆ ಸಂದೀಪ್ ಇದುವೆರಗೂ ದೂರು ಕೊಟ್ಟಿಲ್ಲ. ಯಾರ ಸಂಪರ್ಕದಲ್ಲಿ ಸಹ ಇಲ್ಲ. ಮೂರು ನಾಲ್ಕು ತಿಂಗಳ ಹಿಂದೆ ನಡೆದ ಘಟನೆ ಇದಾಗಿದೆ. ಹುಬ್ಬಳ್ಳಿಯ ಸೆಟ್ಲಮೆಂಟ್ ನಲ್ಲಿ ನಡೆದ ಘಟನೆ ಆದರೆ ಸ್ಥಳ ಯಾವುದಿ ಎಂದು ಖಚಿತವಾಗಿಲ್ಲ. ಪೊಲೀಸರು ಈ ತರಹದ ಘಟನೆ ಆಗೋ ಮುಂಚೆ ಎಚ್ಚೆತ್ತುಕೊಳ್ಳಬೇಕಿತ್ತು. ವೀಡಿಯೋದಲ್ಲಿ ಇರುವ ಸಂದೀಪ್‍ಗಾಗಿ ಹುಡುಕಾಡುತ್ತಿದ್ದೇವೆ ಎಂದು ಹೇಳಿದರು.
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]