ತಂದೆಗೆ ಬೈದನೆಂದು ಯುವಕನಿಗೆ ಚಾಕುವಿನಿಂದ ಇರಿದ!

Public TV
1 Min Read
HUBBALLI STAB

ಹುಬ್ಬಳ್ಳಿ: ತನ್ನ ತಂದೆಗೆ ಬೈದ ಅನ್ನೋ ಕಾರಣಕ್ಕೆ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹಳೆ ಹುಬ್ಬಳ್ಳಿ (Hubballi) ಯ ಅರವಿಂದ ನಗರದದಲ್ಲಿ ಬುಧವಾರ ತಡ ರಾತ್ರಿ ಈ ಘಟನೆ ನಡೆದಿದೆ. ಶಿವರಾಜ್ ಹೊಸಮನಿ ಎಂಬವರು ಹಲ್ಲೆಗೆ ಒಳಗಾದ ವ್ಯಕ್ತಿ. ಬಾಷಾ ಹಾಗೂ ಆತನ ಸ್ನೇಹಿತರು ಶಿವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

Police Jeep 1

ಹಲ್ಲೆಗೊಳಗಾದ ಶಿವರಾಜ್ ಬಾಷಾ ತಂದೆ (Father) ಯನ್ನು ಬೈದಿದ್ದ ಎನ್ನಲಾಗಿದೆ. ಇದರಿಂದ ಕೋಪಗೊಂಡ ಬಾಷಾ ತನ್ನ ಸ್ನೇಹಿತರ ಜೊತೆ ಸೇರಿ ಶಿವರಾಜ್ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರತಿಭಟನೆ ವೇಳೆ ಶಿವಸೇನೆ ಮುಖಂಡ ಗುಂಡಿನ ದಾಳಿಗೆ ಬಲಿ

ಹಲ್ಲೆಗೆ ಒಳಗಾದ ವ್ಯಕ್ತಿಯನ್ನು ಕಿಮ್ಸ್ (KIIMS) ನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಸದ್ಯ ಹಳೆ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *