ಕೊಪ್ಪಳ: ಕಳೆದ ಎರಡು ದಿನಗಳ ಹಿಂದೆ ಕೊಪ್ಪಳದಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಟ್ರಯಾಂಗಲ್ ಲವ್‌ಗೆ (Triangle Love) ಯುವಕ ಕೊಲೆ ಮಾಡಲಾಗಿದೆ ಎಂಬ ವಿಚಾರ ತನಿಖೆಯಲ್ಲಿ ಬಯಲಾಗಿದ್ದು, ಪ್ರಕರಣದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆ. 3ರಂದು ನಡುರಸ್ತೆಯಲ್ಲಿ 27 ವರ್ಷದ ಯುವಕನನ್ನ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಟ್ರಯಾಂಗಲ್ ಲವ್ ಸ್ಟೋರಿ ವಿಚಾರವಾಗಿ ನಡೆದ ಕೊಲೆ ಇದೀಗ ಸದ್ದು ಮಾಡುತ್ತಿದೆ. ಕೊಲೆ ಮಾಡಿದ ಓರ್ವ ಆರೋಪಿ ಠಾಣೆಗೆ ಶರಣಾಗಿದ್ದು, ಇದೀಗ ಪೊಲೀಸರು ಕೊಲೆಗೆ ಸಹಾಯ ಮಾಡಿದ ಮೂವರನ್ನು ಬಂಧಿಸಿದ್ದಾರೆ. ಕೊಲೆಗೆ ಪೊಲೀಸ್ ವರಿಷ್ಠಾಧಿಕಾರಿ ಹೊಸ ಟ್ವಿಸ್ಟ್ ಕೊಟ್ಟರೆ, ಹತ್ಯೆಯಾದ ಯುವಕನ ತಂದೆ ಮತ್ತೊಂದು ತಿರುವು ಟ್ವಿಸ್ಟ್ ಕೊಟ್ಟಿದ್ದಾರೆ. ಇನ್ನು ಇದೇ ಕೊಲೆಯನ್ನ ರಾಜಕೀಯವಾಗಿ ಬಳಸಿಕೊಳ್ಳಲು ರಾಜಕೀಯ ನಾಯಕರು ಮುಂದಾಗಿದ್ದಾರೆ. ಇದನ್ನೂ ಓದಿ: ಉತ್ತರಕಾಶಿ ಮೇಘಸ್ಫೋಟ | ಕೊಚ್ಚಿ ಹೋದ ಗ್ರಾಮ – ಹಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ
ಹಿಂದೂ ಯುವಕ ಗವಿಸಿದ್ದಪ್ಪನನ್ನು ಸಾಧಿಕ್ ಎಂಬ ಅನ್ಯಕೋಮಿನ ಯುವಕ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದ. ಬಳಿಕ ತಾನೇ ಪೊಲೀಸರಿಗೆ ಶರಣಾಗಿದ್ದ. ಹತ್ಯೆಯಾದ ಗವಿಸಿದ್ದಪ್ಪ, ಸಾಧಿಕ್ ಪ್ರೀತಿಸುತ್ತಿದ್ದ ಹುಡುಗಿಗೆ ತೊಂದರೆ ಕೊಟ್ಟಿದ್ದ. ಅದಕ್ಕಾಗಿ ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ. ಅಸಲಿಗೆ ಇದು ಟ್ರಯಾಂಗಲ್ ಲವ್ ಸ್ಟೋರಿಗಾಗಿ ನಡೆದ ಕೊಲೆ ಎಂಬುದು ಗೊತ್ತಾಗಿದೆ. ಸಾಧಿಕ್ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದ. ಆದ್ರೆ ಆಕೆ ಸಾಧಿಕ್‌ನೊಂದಿಗೆ ಬ್ರೇಕಪ್ ಮಾಡಿಕೊಂಡು, ಗವಿಸಿದ್ದಪ್ಪನನ್ನು ಪ್ರೀತಿಸುತ್ತಿದ್ದಳು. ಗವಿಸಿದ್ದಪ್ಪನನ್ನೇ ಮದುವೆಯಾಗುವುದಾಗಿ ಓಡಿ ಹೋಗಿದ್ದಳು. ಅಪ್ರಾಪ್ತೆಯಾಗಿದ್ದ ಕಾರಣ ಗವಿಸಿದ್ದಪ್ಪನಿಗೆ ಹಿರಿಯರು ಬುದ್ಧಿವಾದ ಹೇಳಿ ಸುಮ್ಮನಿರಿಸಿದ್ದರು. ಇದಾದ ಮೇಲೆ ಆತನೂ ಕೂಡ ಸೈಲೆಂಟ್ ಆಗಿ ಬಿಟ್ಟಿದ್ದ. ಆದರೆ ಭಾನುವಾರ ರಾತ್ರಿ ಸಾಧಿಕ್ ಮಾರಕಾಸ್ತçಗಳಿಂದ ಗವಿಸಿದ್ದಪ್ಪನನ್ನು ಕೊಚ್ಚಿ ಕೊಲೆಗೈದಿದ್ದ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಕೇಸ್ – ಇಂದು ಕೊನೆಯ ಪಾಯಿಂಟ್‌ನಲ್ಲಿ ಶೋಧ
ಇನ್ನು ಗವಿಸಿದ್ದಪ್ಪ ಕೊಲೆಯನ್ನೇ ಇದೀಗ ರಾಜಕೀಯ ಅಸ್ತ್ರ ಮಾಡಿಕೊಳ್ಳಲು ರಾಜಕೀಯ ನಾಯಕರು ರೆಡಿಯಾಗಿದ್ದಾರೆ. ಕೊಲೆಯಾದ ಗವಿಸಿದ್ದಪ್ಪ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಯುವಕನಾದ್ದರಿಂದ ಕೊಲೆಯನ್ನು ಈ ಸಮುದಾಯ ಗಂಭೀರವಾಗಿ ಪರಿಗಣಿಸಿದೆ. ಅಮಾಯಕ ಯುವಕನ ಕೊಲೆ ಖಂಡಿಸಿ ದೊಡ್ಡ ಮಟ್ಟದಲ್ಲಿ ಹೋರಾಟ ಮಾಡೋಕೆ ವಾಲ್ಮೀಕಿ ಸಮುದಾಯದವರು ಚಿಂತನೆ ಮಾಡಿದ್ದಾರೆ. ಇದನ್ನೂ ಓದಿ: ಹವಾಮಾನ ವೈಪರೀತ್ಯ – ಸಿಎಂ ರಾಯಚೂರು ಪ್ರವಾಸ ರದ್ದು
ಗವಿಸಿದ್ದಪ್ಪನ ಮನೆಗೆ ಶ್ರೀರಾಮುಲು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ಈ ವೇಳೆ ಗವಿಸಿದ್ದಪ್ಪನ ತಾಯಿ ರಾಮುಲು ಕಾಲಿಗೆ ಬಿದ್ದು ಗೋಳಾಡಿದ್ದರು. ಅಲ್ಲದೇ ಸಹೋದರಿಯರು ಸಹ ನ್ಯಾಯಕ್ಕಾಗಿ ಕಣ್ಣೀರು ಹಾಕಿದ್ದರು. ಮನೆಗೆ ಭೇಟಿ ನೀಡಿದ ಬಳಿಕ ರಾಮುಲು ಇಡೀ ಪ್ರಕರಣಕ್ಕೆ ಹೊಸ ತಿರುವು ಕೊಟ್ಟಿದ್ದಾರೆ. ಹಂತಕ ಪಿಎಫ್‌ಐ ಸಂಘಟನೆಯುಲ್ಲಿದ್ದ ಎಂದು ಆರೋಪಿಸಿದ್ದಾರೆ. ತನ್ನ ಮಗನ ಸಾವಿಗೆ ಕಾರಣಳಾದ ಯುವತಿ ವಿರುದ್ಧವೂ ದೂರು ನೀಡೋದಾಗಿ ಗವಿಸಿದ್ದಪ್ಪನ ತಂದೆ ಹೇಳಿದ್ದಾರೆ.
ಒಟ್ಟಾರೆ, ಇಡೀ ಪ್ರಕರಣವನ್ನ ಪೊಲೀಸರು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮುಂದಿನ ದಿನಗಳಲ್ಲಿ ಇದು ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.