ಮೈಸೂರು: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯೊಂದಿಗೆ (Mysuru Women) ಲವ್ವಿ ಡವ್ವಿ ನಡೆಸುತ್ತಿದ್ದ ಯುವಕ, ಆಕೆಯನ್ನ ಗರ್ಭಿಣಿ (Pregnant Women) ಮಾಡಿ ನಂತರ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.
34 ವರ್ಷದ ಸಂತ್ರಸ್ತೆ ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ (Private School) ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಆರೋಪಿ ಯುವಕನನ್ನು ಹರೀಶ್ (25) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಟ್ರೈಲರ್ ಸಮೇತ ನದಿಗೆ ಬಿದ್ದ ಟ್ರಾಕ್ಟರ್ – ಓರ್ವ ಕಣ್ಮರೆ, 12 ಮಂದಿ ಬಚಾವ್
Advertisement
Advertisement
ಪಿರಿಯಾಪಟ್ಟಣ ಮೂಲದ ಮಹಿಳೆ ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾದ್ದಾರೆ. ಈಕೆ 2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಬದುಕಿತ್ತಿದ್ದರು. ನಂತರ ಈಕೆಯ ಬಾಳಲ್ಲಿ ಎಂಟ್ರಿಯಾದ ಹರೀಶ್ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಇದೀಗ ಕೈಕೊಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
Advertisement
ಆರೋಪಿ ಹರೀಶ್ ಮದ್ಯ ಕುಡಿಸಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪದಡಿ ಮಹಿಳೆ ದೂರು ನೀಡಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ನನ್ನ ಮೇಲೆ ಅತ್ಯಾಚಾರ ಮಾಡಿ 2 ತಿಂಗಳಿನಿಂದ ಕಾಣೆಯಾಗಿದ್ದಾನೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ಪೊಲೀಸರಿಂದ ನನಗೆ ನ್ಯಾಯ ಸಿಗುವ ಭರವಸೆಯಿದೆ. ಆತ ನನ್ನನ್ನ ಮದುವೆಯಾದ್ರೆ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್
Advertisement
ಮಹಿಳೆ ನೀಡಿದ ದೂರಿನಲ್ಲಿ ಏನಿದೆ?
ನಾನು ಮೂಲತಃ ಪಿರಿಯಾಪಟ್ಟಣ ನಿವಾಸಿ, ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ತಮ್ಮ ವ್ಯವಸಾಯ ಮಾಡಿಕೊಂಡಿದ್ದಾನೆ. ನಾನು 2016ರಿಂದ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದೇನೆ. 2015ರಲ್ಲಿ ಆಂಧ್ರ ಮೂಲದ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. 6 ವರ್ಷದ ಹೆಣ್ಣು ಮಗಳಿದ್ದಾಳೆ. 2018ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ಹವ್ಯಾಸಿ ಗಾಯಕಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. 6 ತಿಂಗಳ ಹಿಂದೆ ಹರೀಶ್ ಕಾರ್ಯುಕ್ರಮವೊಂದರಲ್ಲಿ ಪರಿಚಯವಾಗಿದ್ದ. ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದ. 2023ರ ಡಿ.31ರ ರಾತ್ರಿಯೂ ಹೊಸ ವರ್ಷ ಆಚರಣೆಗೆ ನಮ್ಮ ಮನೆಗೆ ಬಂದಿದ್ದ. ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದ ಹರೀಶ್ ನಿನಗೆ ವಿಚ್ಛೇದನ ಆಗಿದೆ. ನಾನೇ ನಿನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದ. ಅಲ್ಲದೇ ಅಂದು ಮದ್ಯ ತಂದು ಏನೂ ಆಗುವುದಿಲ್ಲ ಎಂದು ಹೇಳಿ ಬಲವಂತವಾಗಿ ಕುಡಿಸಿದ, ತಾನೂ ಕುಡಿದಿದ್ದ. ನಾನು ಎಷ್ಟೇ ನಿರಾಕರಿಸಿದರೂ ಬಿಡಲಿಲ್ಲ. ನಂತರ ನಾನು ನಿಶ್ಯಕ್ತಿಗೆ ಜಾರಿದ್ದರಿಂದ ಹೆಚ್ಚು ಪ್ರತಿರೋಧಿಸಲು ಆಗಲಿಲ್ಲ.
ಮರುದಿನದಿಂದ ಅವನು ತನ್ನ ಬಟ್ಟೆಗಳನ್ನು ನನ್ನ ಮನೆಯಲ್ಲೇ ತಂದಿಟ್ಟಿದ್ದ. ನಾನು ಮದುವೆಯಾಗುವವರೆಗೆ ದೈಹಿಕ ಸಂಪರ್ಕ ಬೇಡವೆಂದು ಹೇಳಿದರೂ ಕೇಳದೇ ಪ್ರತಿದಿನ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡುತ್ತಿದ್ದ. ಇತ್ತೀಚೆಗೆ ನನ್ನಿಂದ ದೂರವಿರುತ್ತಿದ್ದ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ನಿರ್ಧರಿಸಿದೆ. ಬಳಿಕ ನನ್ನ ಅಣ್ಣನಿಗೆ ವಿಷಯ ತಿಳಿಸಿದೆ. ಕೊನೆಗೆ ನನ್ನನ್ನು ಮದುವೆಯಾಗಲು ಮನೆಯವರ ಒಪ್ಪಿಗೆ ಪಡೆದುಬರುತ್ತೇನೆ ಎಂದು ಹೇಳಿಹೋದ ಹರೀಶ್ ಈವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ನನ್ನನ್ನು ನಂಬಿಸಿ ಮೋಸ ಮಾಡಿರುವ ಹರೀಶನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ್, ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಈತ ಸಹ ಹವ್ಯಾಸಿ ಹಾಡುಗಾರನಾಗಿದ್ದ. ಇದನ್ನೂ ಓದಿ: ಉಗಾಂಡಾ ವಿರುದ್ಧ 134 ರನ್‌ಗಳ ಜಯ – T20 ವಿಶ್ವಕಪ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಿದ ವಿಂಡೀಸ್!